ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪಲ್ ಟೆಕ್ ತೋಟ ಅನಾಥ, ಸ್ಟೀವ್ ಜಾಬ್ಸ್ ನಿಧನ

|
Google Oneindia Kannada News

Steve Jobs dies at 56
ನ್ಯೂಯಾರ್ಕ್, ಅ 06: ಆಪಲ್ ಟೆಕ್ ತೋಟ ಅನಾಥವಾಗಿದೆ. ಐಪಾಡ್, ಐಫೋನ್, ಐಫೋನ್ ನ್ಯಾನೊ, ಸಫಲ್ ಸಂಗೀತ ಸಾಧನಗಳು ಸ್ಥಬ್ದವಾದಂತಾಗಿದೆ. ಜಗತ್ತಿಗೆ ಹೊಸ ಬಗೆಯಲ್ಲಿ ಸಂಗೀತ ಕೇಳಿಸಿದ ಸ್ಟಿವ್ ಜಾಬ್ಸ್ ಇಂದು ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.

"ಇಂದು ಸ್ಟೀವ್ ಜಾಬ್ಸ್ ನಿಧನರಾಗಿದ್ದಾರೆ ಅಂತ ಹೇಳಲು ವೇದನೆಯಾಗುತ್ತಿದೆ" ಎಂದು ಆಪಲ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊದಲ್ಲಿ ಸ್ಟೀವ್ ಜಾಬ್ಸ್ ನಿಧನರಾಗಿದ್ದಾರೆ. 2004ರಿಂದ ಸ್ಟೀವ್ ಜಾಬ್ಸ್ ಹಲವು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರು.

ಆಪಲ್ ತನ್ನ ಇತ್ತೀಚಿನ ಐಫೋನ್ ಹೊರತಂದ ಮರುದಿನವೇ ಸ್ಟೀವ್ ಜಾಬ್ಸ್ ಇನ್ನಿಲ್ಲವೆಂಬುದು ಆಪಲ್ ಉತ್ಪನ್ನಗಳ ಅಭಿಮಾನಿಗಳಿಗೆ ಷಾಕ್ ನೀಡಿದಂತಾಗಿದೆ.

ಜಗತ್ತಿಗೆ ಸುಂದರ ಐಪಾಡ್ ಮತ್ತು ಐಫೋನ್ ನೀಡಿದ ಸಿಲಿಕಾನ್ ವ್ಯಾಲಿ ಐಕಾನ್ ಸ್ಟೀವ್ ಬಾಬ್ಸ್ ಈ ವರ್ಷದ ಆಗಸ್ಟ್ ನಲ್ಲಿ ಆಪಲ್ ಸಿಇಒ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಟಿಮ್ ಕುಕ್ ಸಿಇಒ ಆಗಿ ನೇಮಕಗೊಂಡಿದ್ದರು.

English summary
Apple co-founder Steve Jobs, who single-handedly changed the way the world listened to music, communicated on the phone and used the computer, has died, leaving behind a vacuum that will be hard to fill. Jobs, 56, was a pancreatic survivor and had been battling poor health for several years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X