ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸಂಪುಟ ವಿಸ್ತರಣೆ; ರೆಡ್ಡಿಗಳಿಗೆ ಅನುಗ್ರಹವಾದೀತೇ?

|
Google Oneindia Kannada News

sadanda-gowda
ಸ್ವಾತಂತ್ರ್ಯೋತ್ಸವ ಆಚರಣೆ ಮುಗಿಸಿ ಇದೀಗ ಸಿಎಂ ನಿವಾಸ ಅನುಗ್ರಹದಲ್ಲಿ ಸಭೆ ಸೇರಿರುವ ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಅವರ ಆಪ್ತರು 3ನೇ ಸುತ್ತಿನ ಸಂಪುಟ ವಿಸ್ತರಣೆಯ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ.

ಕೇಂದ್ರದಿಂದ ಬಂದಿರುವ ಬಿಜೆಪಿ ರಾಜ್ಯ ಉಸ್ತುವಾರಿ ಸಚಿವ ಧರ್ಮೇಂದ್ರ ಪ್ರಸಾದ್ ಸೇರಿದಂತೆ, ಶಾಸಕ ಶಂಕರಲಿಂಗೇಗೌಡ, ಈಶ್ವರಪ್ಪ ಮತ್ತಿತರರು ಗಹನವಾದ ಚರ್ಚೆಯಲ್ಲಿ ತೊಡಗಿದ್ದಾರೆ. ರೆಡ್ಡಿ ಸಹೋದರರನ್ನು ಸೇರಿಸಿಕೊಳ್ಳಬೇಕೇ, ಬೇಡವೇ? ಎಂಬುದೇ ಚರ್ಚೆಯ ಮುಖ್ಯ ವಿಷಯವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

;

ಆದರೆ "ಅನುಗೃಹದಲ್ಲಿ ರೆಡ್ಡಿಗಳಿಗೆ ಅನುಗ್ರಹವಾಗತ್ತೋ ಅಥವಾ ಇನ್ಯಾರಿಗೆ ಆಗುತ್ತೋ ಎಂಬುದು ಈಗ ಕುತೂಹಲದ ವಿಷಯ.

"ನಾನು ಬಂದಿರೋದು ಬಿಜೆಪಿ ಬಿಕ್ಕಟ್ಟು ಪರಿಹರಿಸುವುದಕ್ಕಲ್ಲ, ಯುವಮೋರ್ಚಾ ಕಾರ್ಯಕ್ರಮಕ್ಕೆ" ಎಂದು ಧರ್ಮೇಂದ್ರ ಪ್ರಸಾದ್ ಹೇಳಿದ್ದರೂ ಅದನ್ನು ಯಾರೂ ನಂಬುವ ಸ್ಥಿತಿ ಇರಲಿಲ್ಲ. ಈಗಿನ ಬೆಳವಣಿಗೆ ನಂಬದಿರಲು ಇನ್ನಷ್ಟು ಪುಷ್ಟಿಕೊಟ್ಟಿರುವುದು ಕಾಕತಾಳೀಯವೇನಲ್ಲ!

ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟು ಹೇಗೆ ಬದಲಾಗುತ್ತೆ ಎಂಬುದು ಸದ್ಯದಲ್ಲಿಯೇ ಬಯಲಾಗಬಹುದು. ರೆಡ್ಡಿಗಳಿಗೆ ಸಚಿವ ಸ್ಥಾನ ಪ್ರಾಪ್ತಿಯಾದರೆ ಕಾಂಗ್ರೆಸ್ ಕಡೆಯಿಂದ ಬರಲಿರುವ ಬಾಣಕ್ಕೆ ಬಿಜೆಪಿ ತಲೆಯಡ್ಡಲು ಸಿದ್ಧವಾಗಿರಬೇಕಷ್ಟೇ.

ಅನುಗ್ರಹದ ಮೇಲೆ ಈಗ ಎಲ್ಲರ ಕಣ್ಣು!

;
English summary
There is meeting going on "Anugraha" for 3rd round extention of cabinet. BJP Party's State Incharge Dharmenda Prasad also participating in this meeting is a highlight.; ; ;
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X