Thought for the day
Your page will load in ...
Close Ad X
Advertisement
English ગુજરાતી हिन्दी മലയാളം தமிழ் తెలుగు
 
Share This Story

ಫೇಸ್ ಬುಕ್ ಅಕಾಲಿಕ ಸಾವು, ನ. 5ಕ್ಕೆ ಮರಣ ಶಾಸನ

Posted by:
Published: Thursday, August 11, 2011, 14:12 [IST]

Anonymous Wants Destroy Facebook November 5 Aid0038

ಕ್ಯಾಲಿಫೋರ್ನಿಯಾ, ಆ. 11 : ಅತ್ಯಂತ ಜನಪ್ರಿಯ ಅತಿ ದೊಡ್ಡ ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್ ಫೇಸ್ ಬುಕ್ ನ 'ಹತ್ಯೆ'ಗೆ ಸ್ಕೆಚ್ ಹಾಕಿರುವ ಕುಖ್ಯಾತ ಹ್ಯಾಕರ್ ಗ್ರೂಪ್ 'ಅನಾನಿಮಸ್', ಫೇಸ್ ಬುಕ್ ನ ಚಾಪ್ಟರ್ ಕ್ಲೋಸ್ ಮಾಡಲು ನವೆಂಬರ್ 5ರ ಮುಹೂರ್ತವಿಟ್ಟಿದೆ.

ಬಳಕೆದಾರರ ಮೇಲೆ ಪತ್ತೆದಾರಿ ಮಾಡಿಸುವ ಉದ್ದೇಶದಿಂದ ಫೇಸ್ ಬುಕ್ ಸರಕಾರಿ ಏಜೆನ್ಸಿಗಳಿಗೆ ಮತ್ತು ಭದ್ರತಾ ಸಂಸ್ಥೆಗಳಿಗೆ ಗುಪ್ತಗುಪ್ತವಾಗಿ ಅತ್ಯಮೂಲ್ಯ ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿರುವ ಅನಾನಿಮಸ್, ಫೇಸ್ ಬುಕ್ಕನ್ನು ಸರ್ವಾನಾಶ ಮಾಡುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ಗುಡುಗಿದೆ.

ತನ್ನನ್ನೇ ತಾನು 'ಹ್ಯಾಕ್ಟಿವಿಸ್ಟ್' ಎಂದು ಕರೆದುಕೊಂಡಿರುವ ಅನಾನಿಮಸ್ ಸರಕಾರಿ ಮತ್ತು ಬ್ಯಾಂಕ್ ವೆಬ್ ಸೈಟುಗಳ ಮೇಲೆ ದಾಳಿ ಮಾಡಿ ಮಾಹಿತಿ ಮತ್ತು ದತ್ತಾಂಶಗಳನ್ನು ನಾಶ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದೆ. ಇದು ಇತ್ತೀಚೆಗೆ ಲಜ್ ಸೆಕ್ಯೂರಿಟಿ ಎಂಬ ಹ್ಯಾಕರ್ ಗ್ರೂಪ್ ನೊಂದಿಗೂ ಕೈಜೋಡಿಸಿದೆ.

"ನಿಮ್ಮ ಬಗ್ಗೆ ನಿಮ್ಮ ಕುಟುಂಬಕ್ಕಿಂತ ಹೆಚ್ಚು ಫೇಸ್ ಬುಕ್ಕಿಗೆ ಗೊತ್ತಿದೆ. ಖಾತೆಯನ್ನು ಅಳಿಸಿಹಾಕಿದರೂ ಮಾಹಿತಿ ಫೇಸ್ ಬುಕ್ಕಿನಲ್ಲಿಯೇ ಉಳಿಯುವಂತಹ ವ್ಯವಸ್ಥೆ ಅಲ್ಲಿದೆ. ಹಾಗಾಗಿ, ಫೇಸ್ ಬುಕ್ಕಿನ ಸರ್ವನಾಶದ ದಿನಾಂಕವನ್ನು ಗುರುತುಹಾಕಿಕೊಳ್ಳಿ" ಎಂಬ ಸಂದೇಶವನ್ನು ಅನಾನಿಮಸ್ ರವಾನಿಸಿದೆ.

ಇದಕ್ಕೆ ಲಕ್ಷಾಂತರ ಫೇಸ್ ಬುಕ್ ಬಳಕೆದಾರರು ಏನು ಹೇಳುತ್ತಾರೆ? ಏನಾದರಾಗಲಿ ಮೊದಲು ದಟ್ಸ್ ಕನ್ನಡ ಫೇಸ್ ಬುಕ್ ಫ್ಯಾನ್ ಕ್ಲಬ್ ಸೇರಿಕೊಳ್ಳಿ. ನಿಮಗಾಗಿ ಸ್ವಾತಂತ್ರ್ಯೋತ್ಸವ-64 ವಿಶೇಷಾಂಕವನ್ನು ಹರಿಯಬಿಟ್ಟಿದ್ದೇವೆ.

English summary
The notorious hacker group 'Anonymous' has plotted to destroy famous and largest social networking website Facebook and fixed November 5 as 'D' day for Facebook. Anonymous says Facebook is selling information to govt agencies and security firms for spying on users.
ಅಭಿಪ್ರಾಯ ಬರೆಯಿರಿ
Click here to type in Kannada
Subscribe Newsletter
Eliminator , Feroz Shah Kotla, Delhi
Match starts at 08:00 pm IST