•  

ಆ ಮಂಜುನಾಥ ಇಬ್ಬರಿಗೂ ಶಿಕ್ಷೆ ನೀಡಲಿ: ನ್ಯಾ. ಹೆಗ್ಡೆ

ಮಂಗಳವಾರ, ಜೂನ್ 21, 2011, 9:25 [IST]
santosh hegde, yadiyurappa
ಬೆಂಗಳೂರು, ಜೂನ್ 21: 'ಧರ್ಮಸ್ಥಳದಲ್ಲಿ ಪ್ರಮಾಣ ಮಾಡುತ್ತೇನೆ ಎಂದಿರುವ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಗಳಿಬ್ಬರಿಗೂ ದೇವರು ಶಿಕ್ಷೆ ನೀಡಲಿ' ಎಂದು ಲೋಕಾಯುಕ್ತ, ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ಆಶಿಸಿದ್ದಾರೆ. ಗಮನಾರ್ಹವೆಂದರೆ ಬಹುತೇಕ ಕನ್ನಡಿಗರ ಮನದಾಳದ ಮಾತನ್ನು ಆಡಿರುವ ನ್ಯಾಯಮೂರ್ತಿ ಹೆಗ್ಡೆ ಅವರು ಈ ಸಂದರ್ಭದಲ್ಲಿ ಇಬ್ಬರ ಹೆಸರನ್ನೂ ಪ್ರಸ್ತಾಪಿಸುವ ಗೋಜಿಗೆ ಹೋಗಲಿಲ್ಲ.

ಪತ್ರಕರ್ತರ ಜತೆ ಮಾತನಾಡಿದ ಅವರು, ಇಂತಹ ಮಾತುಗಳಿಂದ ಮಂಜುನಾಥನ ಬಗೆಗೆ ಇರುವ ನಂಬಿಕೆ ದೂರವಾಗುತ್ತದೆ. ರಾಜಕೀಯವನ್ನು ಇಲ್ಲಿ ತರಬಾರದು. ಇದು ದೇವಸ್ಥಾನದಲ್ಲಿ ಇತ್ಯರ್ಥವಾಗುವ ವಿಷಯವಲ್ಲ. ಇದಕ್ಕೆ ವಿಚಾರಣಾ ಆಯೋಗವನ್ನು ನೇಮಕ ಮಾಡಬೇಕು ಎಂದು ಪ್ರತಿಪಾದಿಸಿದರು. ಈ ಮಧ್ಯೆ, ಇಂದು (ಜೂ. 21) ನಡೆಯುವ ಲೋಕಪಾಲ ಸಮಿತಿಯ ಅಂತಿಮ ಸಭೆಯಲ್ಲಿ ಪಾಲ್ಗೊಳ್ಳಲು ನ್ಯಾ. ಹೆಗ್ಡೆ ಅವರು ದೆಹಲಿಗೆ ತೆರಳಿದರು.

ಇದೇ ವೇಳೆ, ರಾಜಕಾರಣಿಗಳು ದೇವರ ಮುಂದೆ ಪ್ರಮಾಣ ಮಾಡುತ್ತಾರೆ ಎಂಬ ವಿಚಾರ ಕರ್ನಾಟಕಕ್ಕೆ ಬಂದ ಮೇಲೆಯೇ ಗೊತ್ತಾಗಿದ್ದು' ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಆಣೆ-ಪ್ರಮಾನ ಪ್ರಹಸನಕ್ಕೆ ಹೊಸ ರೂಪ ನೀಡಿದ್ದಾರೆ.

User Comments
KannadaKuvara 9 minutes
ದೇವರ ಮಲೆ ಆಣೆ ಮಡಿ ಸುಳ್ಳು ಹೇಳಿ ಉಳಿದವರು ಇದರೆಯೇ. ಇವರು ನಾಶವಾಗಿ ಹೋಗ್ತಾರೆ. ಜನಗಳಿಗೆ ಭಯ ಪಡದಇದರು, ದೇವರಿಗೆ ಹೆದರಿ. ನಿಮಗೆ ಸ್ವಲ್ಪ ಮನ ಮರ್ಯಧೆ idare ನಿಮ್ಮ ಕಪ್ಪು ಹಣ ತಂದು ರಾಜ್ಯವನ್ನ ಉಧರಮಾಡಿ. ಜೈ ಕರ್ನಾಟಕ ಮಾತೆ.
[ ಅಭಿಪ್ರಾಯ ಬರೆಯಿರಿ ]
IPL, Feroz Shah Kotla, Delhi
Delhi Daredevils decided to field
1st Test , Lord's Cricket Ground, St John's Wood
West Indies: 127 / 4, 52.4 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article