ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬಕಾರಿ ಸಚಿವ ರೇಣುಕಾಜೀ ಫುಲ್ ಟೈಟ್ ಮಾತು

By Mahesh
|
Google Oneindia Kannada News

MP Renukacharya
ಹಾಸನ, ಅ.27: ಮಠಾಧೀಶರೇ ರಾತ್ರಿ ಗುಂಡು ಹೊಡೆಯುತ್ತಾರೆ ಬೆಳಗ್ಗೆ ಪಾನ ವಿರೋಧಿ ಪ್ರವಚನ ನೀಡುತ್ತಾರೆ. ಪರಿಸ್ಥಿತಿ ಹೀಗಿರುವಾಗ, ಜನಕ್ಕೆ ಕುಡಿಬೇಡಿ ಬಿಟ್ಬಿಡಿ ಅಂಥಾ ಹೇಗೆ ಹೇಳೋದು ಎಂದು ಹಲುಬಿದ್ದು, ಮತ್ಯಾರು ಅಲ್ಲ, ರಾಜ್ಯದ ಅಬಕಾರಿ ಸಚಿವ ರೇಣುಕಾಚಾರ್ಯ ಮಹಾಸ್ವಾಮಿಗಳು.

ಅಬಕಾರಿ ಇಲಾಖೆ ಬರಬೇಕಿರುವ ಬಾಕಿ ಮೊತ್ತ ವಸೂಲಿ ಹಾಗೂ ಮಾರಾಟ ಗುರಿಯನ್ನು ತಲುಪುವ ಉದ್ದೇಶದಿಂದ ಮದ್ಯಪಾನಕ್ಕೆ ಸಚಿವರು ಪ್ರೋತ್ಸಾಹ ನೀಡುತ್ತಿದ್ದಾರೆ ಅನ್ನೋದು ಬಲ್ಲ ಮೂಲಗಳ ವ್ಯಾಖ್ಯಾನ.

ಸ್ವಾಮೀಜಿಗಳು, ಮಠಾಧೀಶರ ಪಾನಗೋಷ್ಠಿ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿದ 'ಎಣ್ಣೆ' ಖಾತೆ ಸಚಿವರು, ನಂತರ ಜನ ಸಾಮಾನ್ಯರ ಆಚಾರ ವಿಚಾರಗಳನ್ನು ವಾಚಾಮ ಗೋಚಾರ ತೆಗಳಿದರು. "ಈಗ ಶಬರಿ ಮಲೆ ಮಾಲೆ ಹಾಕಿದವರು 15 ದಿನ ಎಲ್ಲವನ್ನು ಬಿಡುತ್ತೇವೆ ಎಂದು ಹೇಳುತ್ತಾರೆ. ಆದ್ರೆ, ಫುಲ್ ಟೈಟ್ ಆಗಿ, ಮಾಂಸ ಎಲ್ಲಾ ಸೇವಿಸ್ತಾರೆ. ಇನ್ನು ಕಾರ್ತೀಕ, ಶ್ರಾವಣ ಮಾಸದಲ್ಲಿ ಎಲ್ಲರು ಕದ್ದು ಮುಚ್ಚಿ ತಿಂದು ಕುಡಿಯುವುದನ್ನು ನೋಡಿದ್ದೇವೆ." ಪರಿಸ್ಥಿತಿ ಹೀಗಿದೆ ಎನ್ಮಾಡೋದು ಎಂದು ಸಚಿವರು ಹಲ್ಲುಕಿರಿದರು.

ಅಬಕಾರಿ ಇಲಾಖೆ ಟಾರ್ಗೆಟ್ : 'ಪಾನ ಮುಕ್ತಸಮಾಜ ಕಲ್ಪನೆ ಚೆನ್ನಾಗಿರುತ್ತದೆ. ಆದರೆ, ವಾಸ್ತವದಲ್ಲಿ ಇದು ಅಸಾಧ್ಯ ಎಂದರು. ರೇಣುಕಾಚಾರ್ಯರ ಈ ಮಾತಿನ ವೈಖರಿಗೂ ಒಂದು ಹಿನ್ನೆಲೆಯಿದೆ. ಅಬಕಾರಿ ಇಲಾಖೆಗೆ 7,500 ಕೋಟಿ ರು. ಆದಾಯ ಗುರಿ ನೀಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ 4,078 ಕೋಟಿ ರು ಗಳಿಸಿರುವ ಇಲಾಖೆ, ಮಾರ್ಚ್ 2011 ರೊಳಗೆ 8,500ಕೋಟಿ ರು ಗಳಿಸುವ ನಿರೀಕ್ಷೆ ಹೊಂದಿದೆ.

ಶಾಸಕರ ತಿಥಿ ಕಾರ್ಯ: ಈ ನಡುವೆ ಪಕ್ಕದ ಜಿಲ್ಲೆ ಚಿಕ್ಕಮಗಳೂರಿನಲ್ಲಿ ಪಕ್ಷದಿಂದ ಪಕ್ಷಕ್ಕೆ ಮಂಗಗಳಂತೆ ಹಾರುವ ಶಾಸಕರು, ಬಂಡಾಯ ಎದ್ದು ರೆಸಾರ್ಟ್ ನಲ್ಲೇ ಕಾಲದೂಡುತ್ತಿರುವ ರಾಜಕೀಯ ನಾಯಕರ ಅಣುಕು ಶವಯಾತ್ರೆ ನಡೆಸಿ, ತಿಥಿ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ನ ಬಂಗಾರಪೇಟೆಯ ನಾರಾಯಣ ಸ್ವಾಮಿ ಹಾಗೂ ಜಗಳೂರು ಕ್ಷೇತ್ರದ ರಾಮಚಂದ್ರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ಚಿತ್ರದ ಮುಂದಿಟ್ಟ ಎಡೆಯನ್ನು ಬೀದಿ ನಾಯಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಹಂಚಿದರು.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X