•  

'ಇಟ್ಟುಕೊಂಡವಳು' ಪದ ಬಳಕೆಗೆ ತೀವ್ರ ಆಕ್ಷೇಪ

ಶನಿವಾರ, ಅಕ್ಟೋಬರ್ 23, 2010, 10:20 [IST]
'Keep' in SC ruling in poor taste
ನವದೆಹಲಿ, ಅ.23: 'ಇಟ್ಟುಕೊಂಡವಳು' (ಕೀಪ್) ಎಂಬ ಪದ ಬಳಕೆ ಆಕ್ಷೇಪಾರ್ಹವಾಗಿದ್ದು, ಈ ಪದ ಬಳಕೆಯನ್ನು ತೀರ್ಪಿನಿಂದ ತೆಗೆದು ಹಾಕಬೇಕು ಎಂದು ಹೆಚ್ಚುವರಿ ಸಾಲಿಟರ್ ಜನರಲ್ ಇಂದಿರಾ ಜೈಸಿಂಗ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿವಾಹಿತ ಪುರುಷರ ಜೊತೆ ಸಹಬಾಳ್ವೆ ನಡೆಸುವ ಮಹಿಳೆ ಜೀವನಾಂಶ ಪಡೆಯಲು ಅನರ್ಹಳು ಎಂದು ತೀರ್ಪು ನೀಡಿದ ಸಂದರ್ಭದಲ್ಲಿ ನ್ಯಾಯಪೀಠವು 'ಇಟ್ಟುಕೊಂಡವಳು' ಎಂಬ ಪದ ಬಳಕೆ ಮಾಡಿತ್ತು. ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಟು ಮತ್ತು ಟಿ ಎಸ್ ಠಾಕೂರ್ ಅವರನ್ನು ಒಳಗೊಂಡ ನ್ಯಾಯಪೀಠದ ಎದುರು ಇಂದಿರಾ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.

ಇಪ್ಪತ್ತೊಂದನೇ ಶತಮಾನದಲ್ಲಿ ಭಾರತದ ಸುಪ್ರೀಂ ಕೋರ್ಟ್ 'ಇಟ್ಟುಕೊಂಡವಳು' ಎಂಬ ಪದ ಬಳಸುತ್ತಿರುವ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ ಅವರು, ಮಹಿಳೆಯೊಬ್ಬಳು 'ಇಟ್ಟುಕೊಂಡವನು' ಎಂಬ ಪದ ಬಳಸಬಹುದೇ ಎಂದು ಪ್ರಶ್ನಿಸಿದ್ದಾರೆ.

ನ್ಯಾಯಪೀಠದ ನ್ಯಾಮಮೂರ್ತಿ ಠಾಕೂರ್ ಅವರು 'ಇಟ್ಟುಕೊಂಡವಳು' ಪದ ಬಳಕೆಗೆ ಬದಲಾಗಿ ಉಪಪತ್ನಿ ಪದ ಬಳಸಿದರೆ ಸರಿಯಾದೀತೆ ಎಂದು ಕೇಳಿದರು. ಜೀವನಾಂಶಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನಲ್ಲಿ 'ಇಟ್ಟುಕೊಂಡವಳು' ಎಂಬ ಪದ ಬಳಕೆಗೆ ಮಾತ್ರ ನನ್ನ ಆಕ್ಷೇಪ ಎಂದಿದ್ದಾರೆ ಇಂದಿರಾ.
User Comments
ಮನ್ ಮೋಹನ್ 23 Oct 2010 04:35 pm
ಇಟ್ಟುಕೊಳ್ಲುವುದಕ್ಕಿಂತ ಕೀಪ್ ಪದವೇ ದೊಡ್ಡ ವಿಷಯವಾಯಿತಲ್ಲಾ ..ರಾಮಾ ಸದ್ಗುರುವೇ. ಕಾಪಾಡು ತಂದೇ.
fdf 23 Oct 2010 07:58 pm
fdfdf
ಕೀಪಮ್ಮ 23 Oct 2010 03:42 pm
ಎಂತೆಂಥ ರಾಜ್ಕಾರ್ಣಿಗಳನ್ನು ನೋಡಿವ್ನಿ. ನನ್ ಸಾವಾಸ ಇಲ್ದಿರೋರು ಈ ರಾಜ್ಕೀಯದಲ್ಲಿ ತುಂಬಾ ಕಮ್ಮಿ. ಮುಕ್ಮಂತ್ರಿಗಳು ನನ್ಮುಂದೆ ಮಕಾಡೆ ಬಿದ್ದವ್ರೆ. ದೊಡ್ ದೊಡ್ ಮಿನೀಸ್ಟ್ರುಗಳು ನಾನ್ ಏಳಿದ್ ಕಡೆ ಸೈನಾಕವ್ರೆ. ನೀನಿಲ್ದೆ ನಾನ್ ಬದ್ಕಾಕಿಲ್ಲ ಅಂತ ಕಾಲ್ ಇಡ್ಕೊಂಡ ಮಂತ್ರಿಗಳವ್ರೆ. ನಾವು ಈ ನಾಡಿನ ಕೀ ಪರ್ಸನ್ ಗಳಾಗಿರೋದ್ರಿಂದ್ಲೇ ನಮಗೆ ಕೀಪ್ ಗಳು ಅನ್ನೋದು. ಅಯ್ಯೋ ಬುಡಿ ಸರ್, ಸರ್ಕಾರ, ನ್ಯಾಯಾಲಯ ರೆಕಗ್ನೈಸ್ ಮಾಡ್ಲಿಲ್ಲ ಅಂದ್ರೆ ಏನು? ಥಳಕು ಬಳಕು ಇರೋ ಗಂಟ ರಾಜ್ಕೀಯದೋರು ಚೆಂದಾಗಿ ನೋಡ್ಕೋತಾರೆ, ಆಗ್ಲೆ ಒಸಿ ಸೈಟು, ಬಂಗ್ಲೆ, ಚಿನ್ನ ಮಾಡ್ಕೋಬೇಕು.
[ ಅಭಿಪ್ರಾಯ ಬರೆಯಿರಿ ]
IPL, Feroz Shah Kotla, Delhi
Delhi Daredevils decided to field
1st Test , Lord's Cricket Ground, St John's Wood
West Indies: 127 / 4, 52.3 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article