ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲೆ ಕೇಸ್: ಸಲಿಂಗಿ ಸೌದಿ ರಾಜಕುಮಾರ ಅಪರಾಧಿ

By Mahesh
|
Google Oneindia Kannada News

Saudi Prince, source: Reuters
ಲಂಡನ್‌, ಅ.21: ಇಲ್ಲಿನ ಐಷಾರಾಮಿ ಹೊಟೇಲೊಂದರ ಕೊಠಡಿಯಲ್ಲಿ ತನ್ನ ಕೆಲಸದಾಳುವನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಸೌದಿಯ ರಾಜಕುಮಾರನನ್ನು ಅಪರಾಧಿ ಎಂದು ಸ್ಥಳೀಯ ಕೋರ್ಟ್‌ ಘೋಷಿಸಿದೆ. 34 ವರ್ಷದ ಸೌದಿ ರಾಜಕುಮಾರ ಸೌದ್‌ ಅಬ್ದುಲ್‌ ಅಜೀಜ್‌ ಬಿನ್‌ ನಾಸರ್‌ ಅಲ್‌ ಸೌದ್‌ ಗೆ 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಓಲ್ಡ್‌ ಬೈಲೆ ಕೋರ್ಟ್‌ ತೀರ್ಪು ನೀಡಿದೆ.

32 ರ ಹರೆಯದ ಬಂಡಾರ್‌ ಅಬ್ದುಲ್‌ ಅಜೀಜ್‌ ಹತ್ಯೆಗೈದ ಸೌದಿ ರಾಜಕುಮಾರ ಸೌದ್‌ ಅಬ್ದುಲ್‌ ಅಜೀಜ್‌ ಬಿನ್‌ ನಾಸರ್‌ ಅಲ್‌ ಸೌದ್‌ ಶಿಕ್ಷೆ ಪ್ರಮಾಣ ಪ್ರಕಟಗೊಂಡ ನಂತರವೂ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಕೋರ್ಟ್ ನೀಡಿದ ಸಂದರ್ಭದಲ್ಲಿ ರಾಜಕುಮಾರನ ತಂದೆ ಅಬ್ದುಲ್ ಅಜೀಜ್ ಉಪಸ್ಥಿತರಿದ್ದರು.

ಸೆಂಟ್ರಲ್‌ ಲಂಡನ್‌ನ ಲ್ಯಾಂಡ್‌ಮಾರ್ಕ್‌ ಹೊಟೇಲ್‌ನಲ್ಲಿ ಬಂಡಾರ್‌ ಅಬ್ದುಲ್‌ಅಜೀಜ್‌ನ ಶವ ಮಾರಕಾಸ್ತ್ರಗಳಿಂದ ಹೊಡೆಯಲ್ಪಟ್ಟ ಸ್ಥಿತಿಯಲ್ಲಿ ಕಳೆದ ಫೆಬ್ರವರಿಯಲ್ಲಿ ಪತ್ತೆಯಾಗಿತ್ತು.ಹತ್ಯೆಗೂ ಮುನ್ನ ಇವರಿಬ್ಬರೂ ಲೈಂಗಿಕ ಸಂಬಂಧಗಳನ್ನು ಹೊಂದಿದ್ದರು. ಇದು ಸಿಸಿಟಿವಿ ಕೆಮೆರಾದಲ್ಲಿ ಸೆರೆ ಹಿಡಿಯಲ್ಪಟ್ಟಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X