ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಬಿಬಿಎಸ್ ಪ್ರವೇಶಕ್ಕೆ ಒಂದೇ ಪರೀಕ್ಷೆ ಸಾಕು

By Mahesh
|
Google Oneindia Kannada News

Single entrance test for MBBS and MD
ನವದೆಹಲಿ, ಆ.15: ಎಂಬಿಬಿಎಸ್ ಹಾಗೂ ಎಂಡಿ ಪ್ರವೇಶ ಬಯಸಿ ವಿದ್ಯಾರ್ಥಿಗಳು ಅನೇಕ ಪರೀಕ್ಷೆಗಳನ್ನು ಬರೆಯಬೇಕಾಗಿದ್ದ ಕಷ್ಟವನ್ನು ತಪ್ಪಿಸಿರುವ ಭಾರತದ ವೈದ್ಯಕೀಯ ಮಂಡಳಿ(MCI) ಒಂದೇ ಒಂದು ಪ್ರವೇಶ ಪರೀಕ್ಷೆ ಬರೆದರೆ ಸಾಕು ಎಂಬ ನಿರ್ಧಾರ ಕೈಗೊಂಡಿದೆ. ಇದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯದ ಒಪ್ಪಿಗೆ ಕೂಡಾ ಸಿಕ್ಕಿದೆ.

2011ರಿಂದ ಎಂಬಿಬಿಎಸ್ ಮತ್ತು ಎಂಡಿ ಕೋರ್ಸ್‌ಗಳಿಗೆ ದೇಶದಲ್ಲಿ ಸರಕಾರ ನಡೆಸುತ್ತಿರುವ 138 ಕಾಲೇಜು ಮತ್ತು 133 ಖಾಸಗಿ ಕಾಲೇಜುಗಳಲ್ಲಿ(ಒಟ್ಟು 271 ಕಾಲೇಜು) ಒಂದೇ ಪ್ರವೇಶ ಪರೀಕ್ಷೆ ನಡೆಯಲಿದೆ. ದೇಶದ ನಾನಾ ಕಾಲೇಜುಗಳಲ್ಲಿನ 31 ಸಾವಿರ ಎಂಬಿಬಿಎಸ್ ಮತ್ತು 11 ಸಾವಿರ ಎಂಡಿ ಸೀಟುಗಳನ್ನು ತುಂಬಲು ಪ್ರವೇಶ ಪರೀಕ್ಷೆ ನಡೆಯಲಿದೆ.

ಈ ಮುಂಚೆ ವೈದ್ಯಕೀಯ ಸೀಟುಗಳ ಪ್ರವೇಶಕ್ಕಾಗಿ ಕನಿಷ್ಠ ಐದರಿಂದ ಆರು ಪ್ರವೇಶ ಪರೀಕ್ಷೆಗಳನ್ನು ನಾನಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬರೆಯಬೇಕಾಗಿತ್ತು. ನಾನಾ ಪರೀಕ್ಷೆ ದಿನಾಂಕಗಳು ಒಂದೇ ದಿನ ಇರುತ್ತಿದ್ದವು. ಅಲ್ಲದೆ, ಪರೀಕ್ಷೆ ಬರೆಯಲು ದೂರದ ಕಾಲೇಜುಗಳಿಗೆ ಹೋಗಬೇಕಾಗಿತ್ತು. ವಿದ್ಯಾರ್ಥಿಗಳ ಇಂತಹ ಸಮಸ್ಯೆಗಳಿಗೆ ಈಗ ತೆರೆಬಿದ್ದಿದೆ.

ಅನೇಕ ಪ್ರವೇಶ ಪರೀಕ್ಷೆ ಮತ್ತು ಕೌನ್ಸೆಲಿಂಗ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ನೂರಾರು ವಿದ್ಯಾರ್ಥಿಗಳು ತಮ್ಮ ಕಷ್ಟ ತೋಡಿಕೊಂಡು ಪ್ರತಿವರ್ಷ ಸುಪ್ರೀಂಕೋರ್ಟ್ ಮೊರೆ ಹೋಗುತ್ತಿದ್ದರು.

ಒಂದೇ ಒಂದು ಪ್ರವೇಶ ಪರೀಕ್ಷೆಗೆ ಅವಕಾಶ ಕಲ್ಪಿಸುವ ನಿರ್ದೇಶನವನ್ನು ಎಂಸಿಐ ಮತ್ತು ಕೇಂದ್ರ ಸರಕಾರಕ್ಕೆ ನೀಡುವಂತೆ ನ್ಯಾಯಾಲಯವನ್ನು ಕೋರಿ, ಸಿಮ್ರಾನ್ ಜೈನ್ ಎಂಬುವವರು ಅರ್ಜಿ ಸಲ್ಲಿಸಿದ್ದಳು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ಒಂದೇ ಪ್ರವೇಶ ಪರೀಕ್ಷೆ ನಡೆಸುವುದಾಗಿ ನ್ಯಾಯಾಲಯಕ್ಕೆ ಸರ್ಕಾರ ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X