ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಕರ್ಣ ದೇಗುಲ ಹಸ್ತಾಂತರ ಕೇಸ್ ಕ್ಲೋಸ್?

By Mahesh
|
Google Oneindia Kannada News

ಹುಬ್ಬಳ್ಳಿ/ಗಳೂರು, ಜೂ.10:ಗೋಕರ್ಣ ದೇವಾಲಯ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ವಿಚಾರಣೆಅಗತ್ಯವಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಹೈಕೋರ್ಟ್ ಪೀಠ ಬುಧವಾರ ಸ್ಪಷ್ಟಪಡಿಸಿದೆ. ಈ ತೀರ್ಪನ್ನು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಸ್ವಾಗತಿಸಿದ್ದಾರೆ.

ಪ್ರಕರಣ ಕುರಿತು ಹೊಸನಗರದಲ್ಲಿ ಪ್ರತಿಕ್ರಿಯೆ ನೀಡಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ, ಗೋಕರ್ಣ ದೇವಾಲಯಕ್ಕೆ ಸಂಬಂಧಿಸಿದಂತೆ ಬಂದ ತೀರ್ಪು ತಮ್ಮ ಇಷ್ಟವಲ್ಲ. ಅದು ಮಹಾಬಲೇಶ್ವರನ ಇಷ್ಟ ಎಂದು ಹೇಳಿದ್ದಾರೆ.

ತಮ್ಮ ಅಪೇಕ್ಷೆ ಕೇವಲ ಗೋಕರ್ಣದ ಅಭಿವೃದ್ಧಿಯಾಗಬೇಕು ಎನ್ನುವುದು. ಅದು ಒಳ್ಳೆಯ ಕಾರ್ಯ ಎಂದು ಭಾವಿಸಿ ಕಾರ್ಯ ಮಗ್ನರಾಗಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.

ಗಜಾನನ ದೀಕ್ಷಿತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ, ಈ ಪ್ರಕರಣ ಈಗಾಗಲೇ ಇತ್ಯರ್ಥಗೊಂಡಿದೆ. ಈ ಸಂಬಂಧ ಮರು ವಿಚಾರಣೆ ನಡೆಸಲು ಸಾಧ್ಯವಿಲ್ಲ ಸ್ಪಷ್ಟಪಡಿಸಿದೆ.

ಶ್ರೀರಾಮಚಂದ್ರಾಪುರ ಮಠಕ್ಕೆ ಗೋಕರ್ಣ ದೇವಾಲಯ ಹಸ್ತಾಂತರಿಸಿದ ಸರ್ಕಾರದ
ಕ್ರಮವನ್ನು ಎತ್ತಿ ಹಿಡಿದು ಹೈಕೋರ್ಟ್ ಪ್ರಧಾನ ಪೀಠದ ನ್ಯಾಯಮೂರ್ತಿಗಳಾದ ಶ್ರೀಧರರಾವ್ ಹಾಗೂ ಶ್ರೀನಿವಾಸಗೌಡ ಅವರಿದ್ದ ವಿಭಾಗೀಯಪೀಠ ತೀರ್ಪು ನೀಡಿತ್ತು.

ಜೊತೆಗೆ, ಪ್ರಕರಣದಿಂದ ಯಾರಿಗಾದರೂ ಹಕ್ಕು ಉಲ್ಲಂಘನೆಯಾಗಿದೆ ಎಂದೆನಿಸಿದರೆ ಅಂಥಹವರು ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಪರಿಹಾರ ಪಡೆಯಬಹುದು ಎಂದು ಆದೇಶ ನೀಡಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X