ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ತಂತ್ರಾಂಶ : ವರದಿ ಸಲ್ಲಿಸಿದ ಸಮಿತಿ

By Mrutyunjaya Kalmat
|
Google Oneindia Kannada News

Dr Chidanandagowda
ಬೆಂಗಳೂರು, ಮೇ. 29 : ಅಧುನಿಕ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಕನ್ನಡ ತಂತ್ರಾಂಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಸಂಬಂಧ ವಿಶ್ರಾಂತ ಕುಲಪತಿ ಡಾ ಕೆ ಚಿದಾನಂದಗೌಡ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿ ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಿತು.

ಕೇವಲ ಒಂದೂವರೆ ವರ್ಷದ ಅವಧಿಯಲ್ಲೇ ವರದಿಯನ್ನು ಸಿದ್ದಪಡಿಸಿದ ಸಮಿತಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ, ನಿಮ್ಮದೇ ವರದಿ ಆಧಾರದ ಮೇಲೆ ಕನ್ನಡ ತಂತ್ರಾಂಶ ಅಭಿವೃದ್ಧಿ ಯೋಜನೆಯ ಅನುಷ್ಠಾನ ಜವಾಬ್ದಾರಿಯನ್ನೂ ನಿರ್ವಹಿಸುವಂತೆ ಸಮಿತಿಗೆ ಸೂಚಿಸಿದರು. ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡ ಭಾಷೆಯ ಬಳಕೆ ಆಗುವಂತೆ ಮಾಡುವುದು ವರದಿಯ ಮೂಲೊದ್ದೇಶವಾಗಿದೆ.

ಒಟ್ಟು 77 ಪುಟಗಳ ವರದಿಯನ್ನು ಸಲ್ಲಿಸಿದ ಸಮಿತಿ ಅಧ್ಯಕ್ಷ ಚಿದಾನಂದಗೌಡ ಅವರು, ಕನ್ನಡದ ಬೆಳವಣಿಗೆ ದೃಷ್ಟಿಯಿಂದ 10 ತಂತ್ರಾಂಶಗಳನ್ನು ಸಿದ್ಧಪಡಿಸಬೇಕಿದೆ ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ 10 ಸಲಹೆಗಳನ್ನೂ ಮುಂದಿಟ್ಟಿದ್ದಾರೆ.

ಸಮಿತಿ ನೀಡಿರುವ ಸಲಹೆಗಳು

* ಕನ್ನಡಕ್ಕೆ ಯೂನಿಕೋಡ್ ಶಿಷ್ಟತೆಯನ್ನು ಕಡ್ಡಾಯವೆಂದು ಪ್ರಕಟಿಸಬೇಕು ಹಾಗೂ ಕನ್ನಡದ ಎಲ್ಲ ಕೆಲಸಗಳು ಮತ್ತು ಅಂತರ್ಜಾಲ ತಾಣಗಳ ಯುನಿಕೋಡ್ ನಲ್ಲೇ ಇರಬೇಕೆಂದು ಸುತ್ತೋಲೆ ಹೊರಡಿಸಬೇಕು.
* ಎಲ್ಲ ಇಲಾಖೆಗಳಲ್ಲಿ ಪದ ಸಂಸ್ಕರಣೆಗೂ ಯುನಿಕೋಡ್ ಶಿಷ್ಟತೆ ಬಳಸಬೇಕು ಮತ್ತು ಮೂಲ ದಾಖಲೆಗಳನ್ನು ಯುನಿಕೋಡ್ ನಲ್ಲಿಯೇ ಸಿದ್ಧಪಡಿಸಬೇಕು.
* ಕನ್ನಡದ ಯೂನಿಕೋಡ್ ಅಕ್ಷರ ಶೈಲಿಗಳ ಲೋಪದೋಷ ನಿವಾರಣೆ ಹಾಗೂ ಸುಂದರ ಯೂನಿಕೋಡ್ ಅಕ್ಷರ ಶೈಲಿಗಳ ತಯಾರಿಕೆಗೆ ತಕ್ಷಣ ಕ್ರಮ.
* ಸರಕಾರದ ಎಲ್ಲ ಕೆಲಸಗಳಿಗೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಳಸಬೇಕು. ವಿಶೇಷ ಕೆಲಸಕ್ಕೆ ತಂತ್ರಾಂಶ ಅಲಭ್ಯವಿದ್ದಾಗ ಮಾತ್ರವೇ ವ್ಯಾಪಾರಿ ತಂತ್ರಾಂಶ ಬಳಸಲು ಸುತ್ತೋಲೆ ಹೊರಡಿಸಬೇಕು.
* ಮೊಬೈಲ್ ಫೋನ್ ತಯಾರಿಕೆಗೆ ಯೂನಿಕೋಡ್ ಶಿಷ್ಟತೆ ಆಳವಡಿಸಲು ನಿರ್ದೇಶನ ನೀಡಬೇಕು.
* ಕನ್ನಡ ತಂತ್ರಾಂಶವನ್ನು ಮತ್ತು ಮಾಹಿತಿ ತಂತ್ರಜ್ಞಾನ ಸಲಹಾ ಸಮಿತಿ ರಚನೆ ಮಾಡಬೇಕು.
* ಯೂನಿಕೋಡ್ ಒಕ್ಕೂಟಕ್ಕೆ ಕಾಲಕಾಲಕ್ಕೆ ಅಗತ್ಯ ಮಾಹಿತಿ ಒದಗಿಸುವ ಜವಾಬ್ದಾರಿಯನ್ನು ಈ ಸಮಿತಿಗೆ ನೀಡಬೇಕು.
* ತಮಿಳು ತಂತ್ರಾಂಶ ಅಭಿವೃದ್ಧಿ ನಿಧಿ ಮಾದರಿಯನ್ನು ಕನ್ನಡ ತಂತ್ರಾಂಶ ಅಭಿವೃದ್ಧಿ ನಿಧಿ ಸ್ಥಾಪಿಸಬೇಕು.
* ಓಪನ್ ಆಫೀಸ್ ಬಳಕೆ ಜನಪ್ರಿಯಗೊಳಿಸಲು ಸರಕಾರಿ ಸಿಬ್ಬಂದಿಗಳಿಗೆ ತರಬೇತಿ ಶಿಬಿರಗಳನ್ನು ನಡೆಸಬೇಕು.
* ಮಾಹಿತಿ ಸಿಂಧು ಯೋಜನೆಯ ಶೈಕ್ಷಣಿಕ ಮಾಹಿತಿಗಳು ಕನ್ನಡದಲ್ಲೇ ಇರಲು ಹಾಗೂ ಗಣಕ ಶಿಕ್ಷಣ ಕನ್ನಡದ ಮೂಲಕವೇ ಆಗಲು ಕ್ರಮಕೈಗೊಳ್ಳಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X