•  

ಬೆಂಗಳೂರಿನಲ್ಲಿ ಮರಗಳನ್ನು ಕಡಿಯಲು ಕರೆ

ಮಂಗಳವಾರ, ಮೇ 18, 2010, 14:10 [IST]
ಬೆಂಗಳೂರು, ಮೇ. 18 : ಮರ ಕಡಿದರೆ ಪರಿಸರ ಪ್ರಿಯರು ಹೋ ಎಂದು ಕಿರುಚುತ್ತಾರೆ. ನಮಗೆ ಕೇಳಿಸುತ್ತದೆ. ಮರ ಕಡಿಯುವುದು, ಹಸುರು ವಾತಾವರಣವನ್ನು ಹಾಳುಗೆಡುವುದು, ಶುದ್ಧಗಾಳಿಗೆ ಸಂಚಕಾರ ತರುವುದರ ವಿರುದ್ಧ ಆಗಾಗ ನಡೆಯುವ ಪರಿಸರ ಪ್ರೇಮಿಗಳ ಹೋರಾಟಗಳನ್ನು ದಟ್ಸ್ ಕನ್ನಡ ಬೆಂಬಲಿಸುತ್ತದೆ. ಶುದ್ಧ ಗಾಳಿ, ಶುಭ್ರ ಪರಿಸರ ಎಲ್ಲರಿಗೂ ಬೇಕು.

ಆದರೆ ಜೀವಕ್ಕೇ ಸಂಚಕಾರ ಒಡ್ಡುವ ಮರಗಳು ನಮಗೆ ಖಂಡಿತ ಬೇಡ. ಪ್ರತೀವರ್ಷ ಮೇ ಜೂನ್ ತಿಂಗಳಲ್ಲಿ ಮಳೆ ಗಾಳಿ ಜೋರಾದಾಗ ಬೆಂಗಳೂರಿನಲ್ಲಿರುವ ರಸ್ತೆ ಮರಗಳು ಉರುಳಿ ಬೀಳುತ್ತಲೇ ಇರುತ್ತವೆ. ಇದು ಪ್ರತೀವರ್ಷ ಕಂಡುಬರುವ ದೃಶ್ಯ. ವಯಸ್ಸಾದ ಮರಗಳು ಮತ್ತು ಬುಡ ಭದ್ರವಿಲ್ಲದ ಮರಗಳು ಉರುಳಿ ನಾನಾ ಬಗೆಯ ಅನಾಹುತಗಳು ಸಂಭವಿಸುತ್ತವೆ. ದಾರಿಯಲ್ಲಿ ಹೋಗುತ್ತಿದ್ದರೆ ಯಾವ ಮರ ಯಾರ ತಲೆ ಮೇಲೆ ಯಾವಾಗ ಬೀಳುತ್ತದೋ ಎಂಬ ಅಂಜಿಕೆಯಿಂದಲೇ ಹೆಜ್ಜೆ ಹಾಕಬೇಕಾಗುವ ಸೀಸನ್ ಈಗ ಮತ್ತೆ ಬೆಂಗಳೂರಿಗೆ ಕಾಲಿಟ್ಟಿದೆ.

ಮೊನ್ನೆ ಶನಿವಾರ ನಗರದ ನಾನಾ ಕಡೆ ಬಿದ್ದ ಅಲ್ಪ ಬೇಸಿಗೆ ಮಳೆಗೆ 60 ಮರಗಳು ಉರುಳಿವೆ. ಇಂದಿರಾ ನಗರದಲ್ಲಂತೂ ಮರ ಉರುಳುವುದರಿಂದ ಉಂಟಾದ ಫಜೀತಿ ಹೇಳಲಸಾಧ್ಯ. ಈ ಮರಗಳು ಸುಮ್ಮನೆ ಉರುಳಿಬೀಳುವುದಿಲ್ಲ. ಕರೆಂಟು ಕಂಬ, ಫೋನು ಕಂಬ, ಸಿಗ್ನಲ್ ಲೈಟು ಕಂಬ, ಕೇಬಲ್ಲುಗಳು, ಜಾಹಿರಾತು ಫಲಕಗಳ ಮೇಲೆ ಬಿದ್ದು ರಸ್ತೆಯಲ್ಲಿ ಅಂಗಾತ ಮಲಗುತ್ತವೆ. ಮರದ ಕೆಳಗೆ ಇರುವ ವಾಹನ, ಜನಗಳನ್ನು ಈ ಮರಗಳು ಆಹುತಿ ತೆಗೆದುಕೊಳ್ಳುವ ಭಯ ಇದ್ದೇ ಇದೆ.

ಬೆಂಗಳೂರಿನ ರಸ್ತೆಯ ಇಕ್ಕೆಲಗಳಲ್ಲಿರುವ ಶಿಥಿಲ ಮರಗಳನ್ನು, ರಸ್ತೆಯಮೇಲೆ ಚಾಚಿಕೊಂಡಿರುವ ಕೊಂಬೆ ರೆಂಬೆಗಳನ್ನು ಈ ಕೂಡಲೇ ಕಡಿಯಬೇಕೆಂದು ಬಿಬಿಎಂಪಿಗೆ ನಾವು ಈ ಮೂಲಕ ಮನವಿ ಮಾಡುತ್ತೇವೆ. ಉದ್ಯಾನವನ, ಮನೆ ಕಾಂಪೌಂಡು ಮತ್ತಿತರ ಬಯಲು ಪ್ರದೇಶಗಳಲ್ಲಿರುವ ಮರಗಳನ್ನು ರಕ್ಷಿಸಿ, ಪ್ರಾಣಾಪಾಯದ ಭೀತಿ ಹುಟ್ಟಿಸಿರುವ ಮರಗಳನ್ನು ದಯಾ ದಾಕ್ಷಿಣ್ಯ ತೋರದೆ ಇವತ್ತೇ ಕಡಿಯಿರಿ.
User Comments
ಸಾಗರ್ 06 Aug 2010 12:24 am
ಮರಗಲ್ಲನ ಕಟ್ ಮಾಡಬೇಕು, ತುಂಬ ಕಷ್ಟ ಗಾಡಿ ಒದೆಸೋದು, road ಪಕ್ಕದಲ್ಲಿ ಮರ ಏರ್ಬರ್ದು, ಎಲ್ಲ ಕಟ್ ಮಾಡೋಣ, ರೋಡ್ ಪಕ್ಕ ಶಾಪಿಂಗ್ ಮಲ್ಲ್ಸ್ ಅದರ ಪಕ್ಕದಲ್ಲಿ ಮನೆಗಳು, ಬೇಡ ಮರ ಬೇಡ, ನಮ್ಮೆ ಮನೆ ಬಳಿ ಕೂಡ ಮರ ಇರಬಾರದು, ಅದರ ಎಲೆ ಬಿದ್ದು ರೋಡ್ dirty ಆಗುತ್ತೆ, ನಮ್ಮ ಮನೆ ಮುಂದೆ ಮರ ಇದ್ರೆ ಕಟ್ ಮಾಡೋಣ. ರಸ್ತೆ ನಿರ್ಮಾಣಕ್ಕೆ ಎಷ್ಟು ಮರ ಕಟ್ ಮಾಡಿದರು ಅದಾದ ಮೇಲೆ ಎಷ್ಟು ಮರ ನೆಟ್ಟರು????? ವಾರಕ್ಕೊಂದು ಸಲ ಪಕ್ಕದ ಪಾರ್ಕ್ಗೆ ಹೋಗಿ i love nature ಅಂತ ಸುತ್ತೋಣ.
BHARATHI 19 May 2010 12:45 pm
ಒಂದು ಕೆಲಸ ಮಾಡಿ ಬುಡ ಗಟ್ಟಿ ಇರುವ ಮರಗಳನ್ನು ಫ್ಲ್ಯೋವೆರ್ ನೆಪದಲ್ಲಿ ಕಡಿದು ಹಾಕಿ.ಮರಗಳು ಮಳೆ ಬಂದಾಗ ಬಿಳುಥವೆ ಎಂಬ ಕಾರಣದಿಂದ ಒಂದಷ್ಟು ಕಡಿಯಿರಿ. ವಿಗ್ನನಿಕವಾಗಿ ಯೋಚಿಸದೆ ಇಸಿಯಾಗಿ ಪರಿಹಾರ ಹುಡಕಲು ಹೋಗಿ ಮುಂದೆ ಗಾಳಿ ಬೆಳಕಿಗೂ ಪರದಡುವನ್ಥಗುತದೆ. ಅದಕ್ಕೆ ಬದಲು ಬೇರೆ ಏನಾದರೂ ಯೋಚಿಸಿ.
[ ಅಭಿಪ್ರಾಯ ಬರೆಯಿರಿ ]
IPL, Feroz Shah Kotla, Delhi
Delhi Daredevils decided to field
1st Test , Lord's Cricket Ground, St John's Wood
West Indies: 127 / 4, 52.3 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article