ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಲೇಶ್ವರಂ-ಮೆಜೆಸ್ಟಿಕ್ ಸಂಚಾರ ಸರಾಗ

By Mahesh
|
Google Oneindia Kannada News

Bangalore to get more VMS boards soon
ಬೆಂಗಳೂರು, ಏ.9:ಮಲ್ಲೇಶ್ವರಂ ನಿಂದ ಮೆಜೆಸ್ಟಿಕ್ ಅಥವಾ ಮೆಜೆಸ್ಟಿಕ್ ನಿಂದ ಮಲ್ಲೇಶ್ವರಂ ತಲುಪುದು ಇನ್ನು ಸುಲಭ.ಕೆ ಆರ್ ವೃತ್ತದಿಂದ ಆನಂದರಾವ್ ವೃತ್ತದ ವರೆಗೆ ದ್ವಿಮುಖ ಸಂಚಾರ ಪ್ರಾರಂಭವಾಗಿದೆ. ಶೇಷಾದ್ರಿ ರಸ್ತೆಯಲ್ಲಿ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಚಾರಿ ಪೊಲೀಸ್ ಇಲಾಖೆ ತಿಳಿಸಿದೆ.

ಇದರಿಂದಾಗಿ ವಾಹನ ಸವಾರರು ಸುಬ್ಬಣ್ಣ ಜಂಕ್ಷನ್, ಆನಂದರಾವ್ ವೃತ್ತ, ಸುಬೇದಾರ್ ಛತ್ರದ ಮುಖಾಂತರ ಮೆಜೆಸ್ಟಿಕ್ ಗೆ ಸುಲಭವಾಗಿ ತಲುಪಲು ಅನುಕೂಲವಾಗಿದೆ. ರಾಜಭವನ, ಬಸವೇಶ್ವರ ವೃತ್ತ, ಕೆಜಿ ವೃತ್ತದ ಮುಖಾಂತರ ಮಲ್ಲೇಶ್ವರಂಗೆ ಸಂಚರಿಸುವವರು ಕೆಜಿ ರಸ್ತೆ, ಎಸ್ ಬಿಎಂ ಜಂಕ್ಷನ್, ಮಹಾರಾಣಿ ಕಾಲೇಜು ಮೇಲ್ಸೇತುವೆ ಕೆಳಗಿನಿಂದ ಮಲ್ಲೇಶ್ವರಂ ಕಡೆ ಸಂಚರಿಸಬಹುದು.

ವಿಎಂಎಸ್ ಅಳವಡಿಕೆ: ಲಘುವಾಹನಗಳಿಗೆ ಮಾತ್ರ ಈ ಮಾರ್ಗದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಗೋಪಾಲಗೌಡ ವೃತ್ತ, ರಾಜಭವನ ವೃತ್ತ, ಶಿವಾನಂದ ವೃತ್ತ, ಬಸವೇಶ್ವರ ವೃತ್ತಗಳಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಪಶ್ಚಿಮ ವಿಭಾಗದ ಸಂಚಾರಿ ಪೊಲೀಸ್ ವಿಭಾಗಾಧಿಕಾರಿ ತಿಳಿಸಿದ್ದಾರೆ. ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ನಗರದ ನಾಲ್ಕು ಕಡೆ ವೇರಿಯಬಲ್ ಮೇಸೇಜ್ ಸೈನ್ ಬೋರ್ಡ್ (VMS) ಗಳನ್ನು ಅಳವಡಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ರಾಜರಾಮ್ ಮೋಹನ್ ರಾಯ್ ರಸ್ತೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ(ಎರಡು), ಕೆಆರ್ ಪುರಂ ಗಳಲ್ಲಿ ಸೈನ್ ಬೋರ್ಡ್ ಅಳವಡಿಸಲು ಚಿಂತಿಸಲಾಗಿದ್ದು, ಸಂಚಾರಿ ನಿಯಂತ್ರಣ ಕೇಂದ್ರ(TMC) ಹಾಗೂ ಬಿಎಸ್ ಎನ್ ಎಲ್ ಜಾಲದ ಮೂಲಕ ಮಾಹಿತಿ ಜನರಿಗೆ ರವಾನೆ ಆಗಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X