•  

ಬಿಡದಿ:ನಿತ್ಯಾನಂದ ಸ್ವಾಮೀಜಿ ಆಶ್ರಮ ಧ್ವಂಸ

ಬುಧವಾರ, ಮಾರ್ಚ್ 3, 2010, 11:10 [IST]
ಬಿಡದಿ, ಮಾ. 3: ಬೆಂಗಳೂರು ಮೈಸೂರು ರಸ್ತೆಗೆ ಹೊಂದಿಕೊಂಡಂತಿರುವ ನಿತ್ಯಾನಂದ ಸ್ವಾಮೀಜಿ ಆಶ್ರಮದ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಲಾಗಿದ್ದು, ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಸ್ಥಳೀಯರು ಪ್ರತಿಭಟನೆ ನಡೆದಿದ್ದಾರೆ. ಮಂಗಳವಾರದಂದು ಸನ್ ನ್ಯೂಸ್ ನೆಟ್ ವರ್ಕ್ ನಲ್ಲಿ ನಿತ್ಯಾನಂದ ಸ್ವಾಮೀಜಿಯ ಕಾಮಕಾಂಡದ ವೀಡಿಯೋ ಚಿತ್ರಣವನ್ನು ಪ್ರಸಾರ ಮಾಡಲಾಗಿತ್ತು. ನಕ್ಕೀರನ್ ಪತ್ರಿಕೆ ಪ್ರಕಾರ, ವಿಡಿಯೋದಲ್ಲಿರುವ ಯುವತಿ, ತಮಿಳಿನ ನಟಿ ಎನ್ನಲಾಗಿದೆ.
  Read:  In English 
ತಮಿಳುನಾಡು, ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ಸ್ವಾಮೀಜಿಗೆ ಅಸಂಖ್ಯಾತ ಭಕ್ತರಿದ್ದಾರೆ. ತಿರುವಣ್ಣಾಮಲೈನಲ್ಲಿರುವ ಸ್ವಾಮೀಜಿಯ ಆಶ್ರಮಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕಳೆದ ರಾತ್ರಿ ಬೆಂಗಳೂರು ಸಮೀಪದ ಬಿಡದಿಯ ಆಶ್ರಮದಲ್ಲಿದ್ದ ಅನೇಕ ಭಕ್ತರು, ಪ್ರತಿಭಟನೆಯ ಭೀತಿಯಿಂದ ಆಶ್ರಮವನ್ನು ಖಾಲಿ ಮಾಡಿದ್ದಾರೆ. ಬಿಡದಿ ಆಶ್ರಮದಲ್ಲಿ ಅನೇಕಾನೇಕ ವಿದೇಶಿ ಭಕ್ತರುಗಳಿದ್ದರು ಎನ್ನಲಾಗಿದೆ.

ಕಿರಿಕಿರಿ:ನಟಿ ಜೊತೆ ನಿತ್ಯಾನಂದ ಸ್ವಾಮೀಜಿ ರಾಸಲೀಲೆ

ಇತ್ತೀಚಿನ ಬೆಳವಣಿಗೆಯಂತೆ ಬಿಡದಿಯ ಅಶ್ರಮದಲ್ಲಿ ಅಕ್ರಮವಾಗಿ ಪ್ರಾಣಿಗಳ ಚರ್ಮ ದಾಸ್ತಾನು ಇಟ್ಟಿರುವ ಶಂಕೆಯಿಂದ ಡಿಸಿಎಫ್ ಗೀತಾಂಜಲಿ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ರಾಸಲೀಲೆ ವಿಡಿಯೋ ಕುರಿತು ಈ ವರೆಗೂ ಸ್ವಾಮಿ ನಿತ್ಯಾನಂದ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
User Comments
ಸಂತೋಷ್ 23 Aug 2010 04:00 pm
ಇಂತಹವರಿಗೆ ನಮ್ಮ ಭಾರತದಲ್ಲಿ ಇರಲು ಅವಕಾಶ್ ಮಾಡಿಕೊತ್ತಿದೇವೆ ಮೊದಲು ನಮಗ ಬುದ್ದಿ ಇಲ್ಲ.
anand 22 Aug 2010 06:19 pm
awdu ಅವನನ್ನು ಜೈಲಿ ಗೆ ಅಕ beku
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article