•  

ಟ್ವಿಟರ್ ಗೆ ದಲೈಲಾಮಾ ಮಹಾಯಾನ

ಮಂಗಳವಾರ, ಫೆಬ್ರವರಿ 23, 2010, 18:34 [IST]
The Dalai Lama Officially Joins Twitter
ಧರ್ಮಶಾಲಾ,ಫೆ.23:ಬೌದ್ಧಧರ್ಮದ ಪರಮ ಗುರು ದಲೈಲಾಮಾ ಅವರು ಟ್ವಿಟ್ಟರ್ ವೆಬ್ ಲೋಕಕ್ಕೆ ಅಧಿಕೃತವಾಗಿ ಕಾಲಿರಿಸಿದ್ದಾರೆ. ಬರಾಕ್ ಒಬಾಮಾ, ಬಿಲ್ ಗೇಟ್ಸ್ ರಿಂದ ಹಿಡಿದು ಎಲ್ಲಾ ಕ್ಷೇತ್ರದ ಗಣ್ಯರನ್ನು ಆಕರ್ಷಿಸಿರುವ ಟ್ವಿಟರ್ ಗೆ ದಲೈಲಾಮಾ ಕೂಡ ಶರಣಾಗಿದ್ದಾರೆ. ಈಗಾಗಲೇ ದಲೈಲಾಮಾ ಅವರ ಹೆಸರಿನಲ್ಲಿ ಅನೇಕ ನಕಲಿ ಖಾತೆಗಳಿದ್ದವು. ಆದರೆ, ದಲೈಲಾಮ @DalaiLama ಖಾತೆಯನ್ನು ಟ್ವಿಟರ್ ಅಧಿಕೃತ ಎಂದು ಘೋಷಿಸಿದೆ.
  Read:  In English 
ಟಿಬೇಟಿಯನ್ನರ ಬೌದ್ಧಗುರು ದಲೈಲಾಮ ಅವರು ಟ್ವಿಟರ್ ಲೋಕ ಪ್ರವೇಶಿಸಿದ್ದಾರೆ ಎಂದು ಟಿಬೆಟ್ ಸರ್ಕಾರ ಅಧಿಕೃತವಾಗಿ ಹೇಳಿದೆ. ಟ್ವಿಟರ್ ಮೂಲಕ ದಲೈಲಾಮ ಯಾವ ರೀತಿ ಶಾಂತಿ ಮಂತ್ರ ಬೋಧನೆ ಮಾಡುತ್ತಾರೆ ಎಂಬ ಕುತೂಹಲ ಅವರ ಅನುಯಾಯಿಗಳಿಗೆ ಉಂಟಾಗಿದೆ. ಅವರು ಚೀನಾ ಅಧಿಪತ್ಯದಲ್ಲಿ ನರಳುತ್ತಿರುವ ಟಿಬೆಟ್ಟಿಯನ್ನರ ರಕ್ಷಣೆಗಾಗಿ ಶ್ರಮಿಸುತ್ತಿರುವ ದಲೈಲಾಮ ಅವರು ಭಾರತ ಗಡಿ ಪ್ರದೇಶದ ಧರ್ಮಶಾಲಾವನ್ನೇ ಮನೆ ಮಾಡಿಕೊಂಡಿದ್ದಾರೆ.1989 ರ ನೊಬೆಲ್ ಶಾಂತಿ ಪಾರಿತೋಷಕ ಪಡೆದಿದ್ದಾರೆ.

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article