•  

ಮೊಬೈಲಲ್ಲಿ ಕನ್ನಡದಲ್ಲಿ ಟೈಪಿಸುವುದು ಸಾಧ್ಯ

ಶನಿವಾರ, ಫೆಬ್ರವರಿ 20, 2010, 13:03 [IST]
Now, keying in Kannada in mobile is possible
ಬೆಂಗಳೂರು, ಫೆ. 20 : ಕನ್ನಡ ಮಾತ್ರ ಬಲ್ಲ ಮತ್ತು ಇಂಗ್ಲಿಷ್ ಬಾರದಿರುವ ಮೊಬೈಲ್ ಬಳಕೆದಾರರಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಕನ್ನಡ ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಕೀ ಮಾಡಲು ಬರುವಂತೆ ಪಾಣಿನಿ ಕೀಪ್ಯಾಡ್ ತಂತ್ರಜ್ಞಾನವನ್ನು ಭಾರತೀಯ ಸಂಸ್ಥೆ ಕಂಡುಹಿಡಿದಿದೆ.

ಭಾರತದಲ್ಲಿ 50 ಕೋಟಿಗೂ ಹೆಚ್ಚು ಮೊಬೈಲ್ ಬಳಕೆದಾರರಿದ್ದಾರೆ. ಅವರಲ್ಲಿ ಇಂಗ್ಲಿಷ್ ಬಾರದಿರುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡೇ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಕನ್ನಡ, ಹಿಂದಿ, ಬಂಗಾಳಿ, ತೆಲುಗು, ಮರಾಠಿ, ತಮಿಳ್, ಗುಜರಾತಿ, ಮಲಯಾಳಂ, ಓರಿಯಾ ಮತ್ತು ಆಸ್ಸಾಮೀಸ್ ಭಾಷೆಗಳಲ್ಲಿ ಟೈಪ್ ಮಾಡಲು ಕೀಪ್ಯಾಡ್ ಬಳಸಬಹುದು.

ಸದ್ಯಕ್ಕೆ ನೋಕಿಯಾ ಜಾವಾ ಫೋನ್ ನಲ್ಲಿ ಈ ಪಾಣಿನಿ ಕೀಪ್ಯಾಡ್ ತಂತ್ರಜ್ಞಾನವನ್ನು ಅಳವಡಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಇತರ ಮೊಬೈಲ್ ಗಳಿಗೂ ಇದು ಲಭ್ಯವಾಗಲಿದೆ. ಆಯಾ ಭಾಷೆಯ ಅಕ್ಷರಗಳು ಕೀಬೋರ್ಡ್ ಮೇಲೆ ಮುದ್ರಿತವಾಗಿರಬೇಕಿಲ್ಲ. ಅಕ್ಷರಗಳು ಸ್ಕ್ರೀನ್ ಮೇಲೆ ಮುದ್ರಿತವಾಗುವುದರಿಂದ ಅದರ ಸಹಾಯದಿಂದ ಟೈಪ್ ಮಾಡಬಹುದಾಗಿದೆ.

User Comments
ಕನ್ನಡದ ಅಭಿಮಾನಿ 22 Feb 2010 09:47 am
ನಾನು ಇಂಡಿ ಎಸ ಎಂ ಎಸ (iMdi SMS) ಅನ್ನು ಉಪಯೋಗಿಸುತ್ತೇನೆ. ಅದು ಕೂಡ ಚೆನ್ನಾಗಿದೆ.
ತಿ೦ಮ್ಮ 20 Feb 2010 08:39 pm
ಬರಿ ಸೊನ್ನೆ ಸುತುಥೆ ಪ್ರಾಯೋಜನ ವಿಲ್ಲ
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article