ಬೆಂಗಳೂರು: ವಿಧಾನಸೌಧ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ 102 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಫೆ. 10 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಂಗಲ್ ಜನ್ಮದಿನವನ್ನು ರೈತ ಮತ್ತು ಏಕೀಕರಣದ ದಿನವೆಂದು ಘೋಷಿಸಬೇಕು, ಅವರ ಆಡಳಿತ ಹಾಗೂ ಜೀವನ ಕುರಿತು ಶಾಲಾ ಪಠ್ಯದಲ್ಲಿ ಸೇರಿಸಬೇಕು ಹಾಗೂ ಹನುಮಂತಯ್ಯನವರ ಕುರಿತ ಅಂಚೆಚೀಟಿ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈ ಹಿಂದೆ ಕುಮಾರಸ್ವಾಮಿ ಸರ್ಕಾರವಿದ್ದಾಗ ಕೆಂಗಲ್ ಹನುಮಂತಯ್ಯನವರ ಜನ್ಮ ದಿನಾಚರಣೆಗಾಗಿ 1 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ ಆ ಹಣ ಕೇವಲ ಜಾಹಿರಾತು ಮತ್ತು ಪ್ರಚಾರ ಕಾರ್ಯಕ್ಕೆ ಬಿಟ್ಟರೆ ಕೆಂಗಲ್ ಕುರಿತು ಸಾರ್ವಜನಿಕವಾಗಿ ಕಾರ್ಯಕ್ರಮ ರೂಪಿಸಲಿಲ್ಲ ಎಂದು ಶಿವಕುಮಾರ್ ದೂರಿದರು. ಇದೇ ವೇಳೆ ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ನಾರ್ಥ್ ಬ್ಲಾಕ್ ರೈಲ್ವೆ ನಿಲ್ದಾಣಕ್ಕೆ ಹನುಮಂತಯ್ಯನವರ ಹೆಸರಿಡಬೇಕು ಹಾಗೂ ಅದರೊಂದಿಗೆ ಸ್ಮಾರಕ ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ
ಮನವಿ ಪತ್ರ ಬರೆಯುವಂತೆ ಆಗ್ರಹಿಸಿದರು.