•  

ಸಾಮಾನ್ಯರಿಗೆ ತೈಲೋತ್ಪನ್ನ ಬೆಲೆ ಏರಿಕೆಯ ಶಾಕ್

ಗುರುವಾರ, ಫೆಬ್ರವರಿ 4, 2010, 9:28 [IST]
Petroleum products price hike imminent
ನವದೆಹಲಿ, ಫೆ. 4 : ಸಕ್ಕರೆ, ಬೇಳೆಯ ಬೆಲೆಏರಿಕೆಯ ಕುದಿಯಲ್ಲಿ ಬೆಂದು ರಾಡಿಯಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಬೆಲೆಏರಿಕೆಯ 'ಶಾಕ್' ಬರಸಿಡಿಲಿನಂತೆ ಬಂದೆರಗಲಿದೆ. ಕಿರಿತ್ ಪಾರೀಖ್ ನೇತೃತ್ವದ ಸಮಿತಿಯ ಶಿಫಾರಸನ್ನು ಕೇಂದ್ರ ಸರಕಾರ ಒಪ್ಪಿದರೆ ಪೆಟ್ರೋಲಿಯಂ ಉತ್ಪನ್ನಗಳ ದರ ಆಕಾಶ ಮುಟ್ಟಲಿದೆ.
  Read:  In English 
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಮತ್ತು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ದರವನ್ನು ಏರಿಸಲು ಪಾರೀಖ್ ಸಮಿತಿ ಶಿಪಾರಸು ಮಾಡಿದೆ. ಇದರ ಪ್ರಕಾರ, ಪೆಟ್ರೋಲ್ 3 ರು., ಡೀಸೆಲ್ 1 ರು., ಸೀಮೆಎಣ್ಣೆ 6 ರು. ಮತ್ತು ಅಡುಗೆ ಅನಿಲ ಕನಿಷ್ಠ 100 ರು. ಏರಲಿದೆ.

ಆದರೆ, ಹಣದುಬ್ಬರವನ್ನು ನಿಯಂತ್ರಣದಲ್ಲಿರಲು ಮತ್ತು ಏರಿದ ಬೆಲೆಗಳನ್ನು ಇಳಿಸಲು ಕೇಂದ್ರ ಸರಕಾರ ಹರಸಾಹಸಪಡುತ್ತಿರುವ ಸಂದರ್ಭದಲ್ಲಿ ಪಾರೀಖ್ ಸಮಿತಿಯ ಶಿಫಾರಸುಗಳನ್ನು ಕೇಂದ್ರ ಒಪ್ಪಿಕೊಳ್ಳುವ ಸಾಧ್ಯತೆಗಳು ತುಂಬ ಕಡಿಮೆ ಕಾಣುತ್ತಿವೆ. ಇನ್ನೊಂದು ವಾರದ ಒಳಗಡೆ ಕೇಂದ್ರ ಸಂಪುಟ ಸಭೆಯಲ್ಲಿ ಪಾರೀಖ್ ಸಮಿತಿಯ ವರದಿಯನ್ನು ಮಂಡಿಸಲಾಗುವುದು ಎಂದು ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಹೇಳಿದ್ದಾರೆ.

ತೈಲೋತ್ಪನ್ನಗಳ ಬೆಲೆ ಏರಿಸುವಲ್ಲಿ ಕೇಂದ್ರ ಅನುಸರಿಸುತ್ತಿರುವ ನೀತಿ ಸಮಂಜಸವಾಗಿಲ್ಲ ಎಂದು ಸಮಿತಿ ಹೇಳಿದೆ. ಅಲ್ಲದೆ, ಸರಕಾರಿ ಸ್ವಾಮ್ಯದ ಮತ್ತು ಖಾಸಗಿ ಮಾಲಿಕತ್ವದ ಸಂಸ್ಥೆಗಳಿಗೆ ಬೆಲೆ ನಿಯಂತ್ರಿಸಲು ಸಮಾನ ಅವಕಾಶ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

User Comments
DURGAA 05 Feb 2010 11:28 am
ಕಾಂಗ್ರೆಸ್ ಗೆಲ್ಲಿಸಿದ್ದಕ್ಕೆ ಸರಿಯಾದ ಶಾಸ್ತಿ ಆಗಿದೆ ಯಿಗ ಬೆಲೆ ಏರಿಸಿದರೆ ೩ ವರ್ಷದ ಬಳಿಕೆ ಬರುವ ಎಲೆಕ್ಷನ್ ನಲ್ಲಿ ವೋಟು ಗೆ ತೊಂದರೆ ಯಿಲ್ಲವಲ್ಲ ಅದಕ್ಕೆ ಯಿಗಲೇ ಯಿರಿಸುತ್ತಾರೆ
ರವಿ ಕುಮಾರ್ 04 Feb 2010 04:46 pm
ಇಟ್ಸ್ ವೆರಿ ಬ್ಯಾಡ್ ಫಾರ್ ರಿಸಿಂಗ್ ದಿ ಪ್ರಿಚೆಸ ಆಫ್ ಪೆಟ್ರೋಲ್ ಅಂಡ್ ಗಾಸ್ ವಾಟ್ ಶೌಲ್ದ್ ಮಿದ್ದ್ಲೇ ಫ್ಯಾಮಿಲಿ ದೋ ಲೋ ಸರಳಿ ಗೆಟ್ ಮೇ ದಿ ಅನಸ್ .
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article