ಬೆಂಗಳೂರು, ಜ. 27: ಸುಯೋಗ ಆಶ್ರಯ ಮತ್ತು ಅಭಿವೃದ್ಧಿ ಟ್ರಸ್ಟ್ ನಡೆಸುತ್ತಿರುವ ಜೆರುಸಲೇಂ ವಿಶ್ವವಿದ್ಯಾಲಯವು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಕೆ ಶಿವರಾಂ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.
ಮಂಗಳವಾರ (ಜ. 26 ) ಯುವನಿಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿ ಸ್ಥಾಪಕ ಡಾ. ಆಲ್ಬರ್ಟ್ ಜಯಸಿಂಗ್ ಅವರು ಕುಮಾರಸ್ವಾಮಿ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಿದರು. ಕುಮಾರಸ್ವಾಮಿ ಅವರ ಪರವಾಗಿ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ರಾಮನಾಥ್ ಹೆಗಡೆ ಪದವಿ ಸ್ವೀಕರಿಸಿದರು.
ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಶಿವರಾಂ, ಬಡತನದ ನಡುವೆಯೂ ಐಎಎಸ್ ಅಧಿಕಾರಿ ಆಗಬೇಕೆಂಬ ಗುರಿ ಹೊಂದಿದ್ದೆ. ಐಎಎಸ್ ಅಧಿಕಾರಿ ಆದಾಗಿನಿಂದ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ನನ್ನ ಸೇವೆ ಗುರುತಿಸಿ ಪದವಿ ನೀಡಿದ್ದಕ್ಕೆ ವಿಶ್ವ ವಿದ್ಯಾಲಯಕ್ಕೆ ನನ್ನ ಧನ್ಯವಾದಗಳು ಎಂದು ಈಸಂದರ್ಭದಲ್ಲಿ ಅವರು ನುಡಿದರು.