ನ್ಯೂಯಾರ್ಕ್, ಜ. 8 : ಅಂತರ್ಜಾಲದ ಜನಪ್ರಿಯ ಸರ್ಚ್ ಇಂಜಿನ್ ಗೂಗಲ್ ಮೊದಲ ಬಾರಿಗೆ ತನ್ನದೇ ಮೊಬೈಲ್ ಫೋನ್ 'ಗೂಗಲ್ ನೆಕ್ಷಸ್ ಒನ್' ನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಈ ಮೂಲಕ ಸ್ಮಾರ್ಟ್ ಫೋನ್ ತಯಾರಕರಿಗೆ ಗೂಗಲ್ ಸ್ಪರ್ಧೆ ಒಡ್ಡಿದೆ. ಅಮೇರಿಕಾದಲ್ಲಿ ಇದರ ಬೆಲೆ 530 ಡಾಲರ್ ಆದರೆ ಈ ಮೊಬೈಲ್ ಸದ್ಯಕ್ಕೆ ಭಾರತದಲ್ಲಿ ಲಭ್ಯವಿಲ್ಲ.
ಈ ಮೊಬೈಲ್ ಅನ್ನು ಸ್ಮಾರ್ಟ್ ಫೋನ್ ಬದಲಿಗೆ ಸೂಪರ್ ಫೋನ್ ಎಂದು ಬಣ್ಣಿಸಿರುವ ಕಂಪನಿ, ಗೂಗಲ್ ಮೊಬೈಲ್ ನಲ್ಲಿ ಬಳಕೆದಾರ ಟ್ವಿಟ್ಟರ್ ಸಂದೇಶಗಳನ್ನು ಫೇಸ್ ಬುಕ್ ಪೋಸ್ಟ್ ಹಾಗೂ ಇ-ಮೇಲ್ ನ್ನು ಹೇಳಿದರೆ ಮೊಬೈಲ್ ಆ ಧ್ವನಿಯನ್ನು ಟೆಕ್ಸ್ ರೂಪಕ್ಕೆ ಪರಿವರ್ತಿಸಿ ರವಾನಿಸುತ್ತದೆ ಎಂದು ಹೇಳಿಕೆ ನೀಡಿದೆ. ಗೂಗಲ್ ನೆಕ್ಷಸ್ ಒನ್ ಹ್ಯಾಂಡ್ ಸೆಟ್ ನ್ನು ತೈವಾನ್ ಮೂಲದ ಎಚ್ಟಿಸಿ ಕಂಪನಿ ತಯಾರಿಸಿದೆ ಮತ್ತು ಗೊಗಲ್ ಇದಕ್ಕೆ ಸಾಫ್ಟ್ ವೇರ್ ಸಿದ್ದಪಡಿಸಿದೆ.
ಹೆಚ್ಚು ಪ್ರಕಶಮಾನ ಮತ್ತು ವರ್ಣಮಯವಾಗಿರುವ ಈ ಹ್ಯಾಂಡ್ ಸೆಟ್ 3 .7 ಇಂಚ್ ಒಎಲ್ಇಡಿ ಪರೆಯನ್ನು ಹೊಂದಿದೆ. 11 .5 ಎಂಎಂ ದಪ್ಪ ಮತ್ತು 130 ಗ್ರಾಂ ತೂಕವಿದೆ. ಪಿಕ್ಷಲ್ ಕ್ಯಾಮೆರಾ, ಎಲ್ಇಡಿ ಫ್ಲಸ್ ಹಾಗೂ ಎಂಪಿಇಜಿ ವಿಡಿಯೋ, ಫೋಟೋ ಗ್ಯಾಲರಿ, ಲೈವ್ ವಾಲ್ ಪೇಪರ್, ಜಿ ಮೇಲ್, ಗೂಗಲ್ ಮ್ಯಾಪ್ ಮುಂತಾದ ಸೌಲಭ್ಯ ಹೊಂದಿದೆ.