ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚಾರಣೆಗಾಗಿ ಪೊಲೀಸ್ ಕಸ್ಟಡಿಯಲ್ಲಿ ನಕ್ಸಲರು

By * ಕೆ.ಆರ್.ಸೋಮನಾಥ್
|
Google Oneindia Kannada News

5 naxals produced before JMFC Shivamogga
ಶಿವಮೊಗ್ಗ, ಡಿ. 4 : ಕಳೆದ 21ರಂದು ಬಂಧಿಸಲಾಗಿದ್ದ ಐವರು ನಕ್ಸಲರನ್ನು ಶುಕ್ರವಾರ ಬೆಳಿಗ್ಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕಳೆದ ತಿಂಗಳು ಕಿರಣ್ ಅಲಿಯಾಸ್ ಮಹೇಶ್, ದೇವೇಂದ್ರ ಅಲಿಯಾಸ್ ವಿಷ್ಣು, ಮಲವಗೊಪ್ಪದ ಆಶಾ, ಗಂಗಮ್ಮ, ಅನಿತಾ ಎಂಬ ಐವರು ನಕ್ಸಲರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.

ಅವರನ್ನು ನವೆಂಬರ್ 20ರಂದು ಶಿವಮೊಗ್ಗದ ಪೊಲೀಸರಿಗೆ ಒಪ್ಪಿಸಲಾಗಿತ್ತು. ನ.21ರಂದು ಈ ಐವರನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲಾವಕಾಶವನ್ನು ನೀಡುವಂತೆ ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಡಿ.4ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಪೊಲೀಸರು ಮತ್ತೆ 15 ದಿನಗಳ ಕಾಲ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದ್ದಾರೆ.

ಬಂಧಿತರಿಂದ ಕರಪತ್ರಗಳು, ಸಿ.ಡಿ.ಗಳು, ನಕ್ಸಲ್ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ, ಹಲವು ಮಹತ್ವದ ಸುಳಿವು ಈ ನಕ್ಸಲರಿಂದ ಸಿಕ್ಕಿದೆ. ಇವರಿಂದ ಕಂಪ್ಯೂಟರ್ ಹಾರ್ಡ್ ಡಿಸ್ಕ್‌ವೊಂದು ಸಿಕ್ಕಿದೆ. ಪೊಲೀಸರು ಮತ್ತಷ್ಟು ಮಾಹಿತಿಯನ್ನು ಕಲೆಹಾಕುವ ದೃಷ್ಠಿಯಿಂದ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಕೋರಿದ್ದಾರೆ. ನ್ಯಾಯಾಲಯವು ಈ ನಕ್ಸಲರನ್ನು ಹೆಚ್ಚುವರಿ ಹದಿನೈದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X