•  

ಮಹಾಭ್ರಷ್ಟ ಮಧು ಕೋಡಾ ಕೈಗೆ ಕೋಳ

ಸೋಮವಾರ, ನವೆಂಬರ್ 30, 2009, 15:48 [IST]
Madhu Koda
ರಾಂಚಿ, ನ. 30 : ಬಹುಕೋಟಿ ಹವಾಲಾ ಹಗರಣದ ಪ್ರಮುಖ ಆರೋಪಿಯಾಗಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರನ್ನು ವಿಚಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ. ಸಿಂಗಬೂಮ್ ಕ್ಷೇತ್ರದ ಸಂಸದರಾಗಿರುವ ಮಧು ಕೋಡಾ ಅವರು ಸ್ವಗ್ರಾಮ ಚೈಬಾಸಾದಲ್ಲಿರುವ ನಿವಾಸಕ್ಕೆ ತೆರಳಿದ ಎಸ್ಪಿ ಅಖಿಲೇಶ್ ಕುಮಾರ್ ನೇತೃತ್ವದ ಪೊಲೀಸರ ತಂಡ ಮಾಜಿ ಸಿಎಂನನ್ನು ಬಂಧಿಸಿ ರಾಂಚಿಗೆ ಕರೆದೊಯ್ದಿದೆ.

ಮಧು ಕೋಡಾ ಅವರು ಬಹುಕೋಟಿ ಹವಾಲಾ ಹಗರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಪಡೆ ವಿಚಾರಣೆಗೆ ಹಾಜರಾಗುವಂತೆ ನೀಡಿದ ಸೂಚನೆಗೆ ಸೂಕ್ತವಾಗಿ ಸ್ಪಂದಿಸದ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಪೊಲೀಸ್ ವಿಶೇಷ ತಂಡ ಮಧು ಕೋಡಾ ಅವರಿಗೆ ನವೆಂಬರ್ 11, 15 ಮತ್ತು 19 ಮೂರು ನೋಟಿಸ್ ಗಳನ್ನು ನೀಡಿತ್ತು. ಆದರೆ, ಕೋಡಾ ವಿಚಾರಣೆಗೆ ಹಾಜರಾಗಿರಲಿಲ್ಲ.

ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು, ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿ 23 ತಿಂಗಳು ಅಧಿಕಾರದಲ್ಲಿದ್ದ 39 ವರ್ಷದ ಮಧು ಕೋಡಾ, ಈ ಅವಧಿಯಲ್ಲಿ ಸುಮಾರು 5,500 ಕೋಟಿ ರುಪಾಯಿಗಳ ಅವ್ಯವಹಾರ ನಡೆಸಿದ್ದಾರೆ. ಇತ್ತೀಚೆಗೆ ಅವರು ಜಾರ್ಖಂಡ್ ನವನಿರ್ಮಾಣ ಮೋರ್ಚಾ ಎಂಬ ನೂತನ ಪಕ್ಷವನ್ನು ಹುಟ್ಟು ಹಾಕಿದ್ದರು.

(ಏಜನ್ಸೀಸ್)

User Comments
ಚಡ್ಡಿ 01 Dec 2009 09:51 am
ನಮ್ಮ ಚಡ್ಡಿ ನೇತಾರರು, ಚಳ್ಳೆ ಪಿಳ್ಳೆಗಳು, ಹಳದಿ ಪತ್ರಿಕೆಗಳು ಎಲ್ಲಾ ತಮ್ಮ ನಾಲಿಗೆಯ ತೆವಲು ತೀರಿಸಿ, ಈಯಪ್ಪನ ಜನ್ಮವನ್ನು ಕೊನೆಗಾನಿಸುತಿದ್ದರು.
ಸಾಮಾನ್ಯ ಪ್ರಜೆ 01 Dec 2009 09:38 am
ಒಂದು ವೇಳೆ ಈತ ಒಬ್ಬ ಮುಸಲ್ಮಾನ ಆಗಿರುತ್ತಿದ್ದರೆ?......................ಅಬ್ಬಬ್ಬಾ ಊಹಿಸಲು ಸಾಧ್ಯವಿಲ್ಲ.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
West Indies: 127 / 4, 51.2 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article