•  

ಗಿನ್ನಿಸ್ ದಾಖಲೆ ಬರೆದ ರಾಷ್ಟ್ರಪತಿ ಪ್ರತಿಭಾ

ಬುಧವಾರ, ನವೆಂಬರ್ 25, 2009, 14:32 [IST]
Pratibha Patil
ಪುಣೆ, ನ. 25 : ಭಾರತ ಪ್ರಥಮ ಮಹಿಳಾ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಪ್ರಥಮ ಬಾರಿಗೆ ಸುಖೋಯ್ 30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದರು. ಈ ಮೂಲಕ 74ರ ಹರೆಯದ ಪ್ರತಿಭಾ ಪಾಟೀಲ್ ಸುಮಾರು 30 ನಿಮಿಷಗಳ ಕಾಲ ಸುಖೋಯ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ಮಹಿಳೆ ಎಂಬ ಕೀರ್ತಿಗೂ ಬಾಜನರಾದರು.

ಪುಣೆಯ ಗೋಹೆರಗಾಂವ್ ಯುದ್ಧವಿಮಾನದ ನಿಲ್ದಾಣದಿಂದ ಇಂದು ಬೆಳಗ್ಗೆ ಸ್ಕ್ವಾಂಡ್ರನ್ ಗಳ ಸಮವಸ್ತ್ರ (G-suit) ಧರಿಸಿ ನೆರೆದಿದ್ದ ಜನಸ್ತೋಮದ ಕಡೆಗೆ ಗೆಲುವಿನ ನಗೆಬೀರಿ ಅತ್ಮವಿಶ್ವಾಸದಿಂದ ಸುಖೋಯ್ ವಿಮಾನವೇರಿದ ಪ್ರತಿಭಾ ಪಾಟೀಲ್. ಅರ್ಧ ಗಂಟೆ ಯಶಸ್ವಿ ಹಾರಾಟ ನಡೆಸಿದರು. ವಿಂಗ್ ಕಮಾಂಡರ್ ಎಸ್ ಸಾಜನ್ ಸುಖೋಯ್ ವಿಮಾನ ಯಶಸ್ವಿ ನಡೆಸಿದರು. ಸುಖೋಯ್ ವಿಮಾನ ಗಂಟೆ 800 ಕಿಮೀ ವೇಗದಲ್ಲಿ ಚಲಿಸಲಿದೆ. ಮಾಜಿ ರಾಷ್ಟ್ರಪತಿ ಅಬ್ಧುಲ್ ಕಲಾಂ ಅವರು ಸಹ ಸುಖೋಯ್ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಈ ಮೂಲಕ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಥಮ ರಾಷ್ಟ್ರೀಪತಿ ಎಂಬ ಗೌರವಕ್ಕಬ ಪಾತ್ರರಾದರು.

(ಏಜನ್ಸೀಸ್)

User Comments
ಬ್ಯಾಂಗಲೋರ್ ಕೇರ್ 26 Nov 2009 05:57 pm
ಅಂತು ನಮ್ಮ ರಾಷ್ಟ್ರಪತಿ ಬದುಕಿದ್ದಾರೆ , ಆಂದ್ರ, ಕರ್ನಾಟಕ ದಲ್ಲಿ ಜಲಪ್ರಳಯವಾದಾಗ ಬರಲಿಲ್ಲ, ದೇಶದಲ್ಲಿ ಯಾವುದೇ ಅನಾಹುತಗಳಿಗೆ ಸ್ಪಂದಿಸಲಿಲ್ಲ ಈಗ ನಮ್ ಜನ ಕಟ್ಟೋ ತೆರಿಗೆ ಹಣದಲ್ಲಿ ಮಜಾ ಮಾಡ್ತ್ಹಿಧರೆ
ಮೈಸೂರ್ ಹೈದ 26 Nov 2009 05:35 pm
ಆಹಾ ಅಜ್ಜಮ್ಮನ ಆಸೆ ನೋಡ್ರಪ್ಪ !! ಯಾರಿಗುಂಟು ಯಾರಿಗಿಲ್ಲ ?? ಎಷ್ಟು ಜನ ಲೈನಲ್ಲಿ ಇದ್ರೂ ಈ ಯಮ್ಮ ಗದ್ದಿ ಏರಿದ್ದು ಅಲ್ಲದೆ ಈಗ Sukhoi ಕೂಡ ಏರಿದ್ದಾಯಿತು !! ಇನ್ನೇನು ಬಾಕಿ ಇದೆಯೋ ಆ ದೇವರೇ ಬಲ್ಲ. ಯಾರದೋ ದುಡ್ಡು...ಎಲ್ಲಮ್ಮನ ಜಾತ್ರೆ !!
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article