ಅಹಮದಾಬಾದ್, ನ. 20: ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಒಟ್ಟು ಮೂವತ್ತುಸಾವಿರ ರನ್ ( ನಾಟ್ ಔಟ್) ಪೂರ್ಣಗೊಳಿಸಿ ಮತ್ತೊಂದು ಮೈಲಿಗಲ್ಲು ಮುಟ್ಟಿದ್ದಾರೆ. ಏಕದಿನ ಪಂದ್ಯದಲ್ಲಿ 17 ಸಾವಿರ ಚಿಲ್ಲರೆ ರನ್ನುಗಳು ಮತ್ತು ಟೆಸ್ಟ್ ಕ್ರಿಕೆಟಿನಲ್ಲಿ 12 ಸಾವಿರ ಚಿಲ್ಲರೆ ಗಳಿಸಿರುವ ಸಚಿನ್ ಗೆ ಒಟ್ಟಾರೆ ಮೂವತ್ತುಸಾವಿರ ರನ್ ಮೈಲಿಗಲ್ಲು ತಲುಪಲು 35 ರನ್ ಗಳ ಅವಶ್ಯಕತೆ ಇತ್ತು.
ಇತ್ತೀಚಿನ ವರದಿಗಳು ಬಂದಾಗ ಅಹಮದಾಬಾದಿನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಚಿನ್ 53 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದಾರೆ. ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 328 ರನ್ ಗಳಿಸಿದೆ ಮತ್ತು ಈ ಟೆಸ್ಟ್ ಪಂದ್ಯ ಬಹುತೇಕ ಎತ್ತ ಸಾಗುತ್ತಿದೆ ?
ಪಾಕಿಸ್ತಾನ ವಿರುದ್ಧ 1989 ನವೆಂಬರ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟ ಸಚಿನ್ ದಾಖಲೆಯ ಮೇಲೆ ದಾಖಲೆ ಬರೆಯುತ್ತಲೇ ಬಂದಿದ್ದಾರೆ. ಇದುವರೆಗೆ 436 ಏಕದಿನ ಪಂದ್ಯವನ್ನಾಡಿರುವ ಸಚಿನ್ 45 ಶತಕ ಮತ್ತು 91 ಅರ್ಧಶತಕಗಳ ಮೂಲಕ 17,178 ರನ್ ಗಳಿಸಿದ್ದಾರೆ. ನವೆಂಬರ್ 15, 1989 ರಂದು ಕರಾಚಿಯಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಸಚಿನ್ 42 ಶತಕ ಮತ್ತು 53 ಅರ್ಧಶತಕ ಗಳಿಸಿದ್ದಾರೆ. ಅದೆಷ್ಟು ರನ್ನು ಹೊಡಿತಾನಪ್ಪಾ ಆ ಮಹರಾಯ!ಅಬ್ಬಬ್ಬಾ..
(ಏಜೆನ್ಸೀಸ್)

Oneindia Login