•  

ಜೈಪುರ: ಹಳಿತಪ್ಪಿದ ರೈಲು, ಏಳು ಸಾವು

ಶನಿವಾರ, ನವೆಂಬರ್ 14, 2009, 11:17 [IST]
Mandore Express Train derails
ಜೈಪುರ, ನ 14: ದೆಹಲಿಗೆ ತೆರಳುತ್ತಿದ್ದ ಮಾಂಡೊರ್ ಎಕ್ಸ್‌ಪ್ರೆಸ್ ರೈಲಿನ ಎಲ್ಲಾ 15 ಬೋಗಿಗಳು ಇಲ್ಲಿಂದ 40 ಕಿ.ಮೀ ದೂರದ ಬಾನ್ಸ್ ಕಾ ಫಾಟಕ್‌ ನಿಲ್ದಾಣದ ಬಳಿ ರಾತ್ರಿ 1.30ಕ್ಕೆ ಹಳಿತಪ್ಪಿದ್ದರಿಂದ ಕನಿಷ್ಠ ಏಳು ಜನರು ಅಸುನೀಗಿದ್ದು, 20 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಸಮೀಪದ ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ರೈಲು ದೆಹಲಿ ಮತ್ತು ಜೋಧಪುರ್ ನಡುವೆ ಸಂಚರಿಸುತ್ತಿತ್ತು.

ರೈಲು ಹಳಿ ತಪ್ಪಿದ ಹಿನ್ನೆಲೆಯಲ್ಲಿ ಹಳಿಗಳ ಒಂದು ಭಾಗ ಎಸಿ ಬೋಗಿಯನ್ನು ತುಂಡರಿಸಿ ಪ್ರಯಾಣಿಕರಿಗೆ ಬಡಿದಿರಬಹುದು ಎಂದು ಶಂಕಿಸಲಾಗಿದೆ. ಒಂದು ಹವಾನಿಯಂತ್ರಿತ ಬೋಗಿ ಸಂಪೂರ್ಣ ತಲೆಕೆಳಗಾಗಿದೆಯೆಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ನಿಕಟ ಬಂಧುಗಳಿಗೆ 5 ಲಕ್ಷ ರೂ. ಪರಿಹಾರವನ್ನು ರೈಲ್ವೆ ಸಚಿವ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ರೈಲು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ಒಂದು ಲಕ್ಷ ರೂ. ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 10,000 ರೂ. ಪರಿಹಾರ ನೀಡಲಾಗುವುದು ಎಂದು ವಾಯವ್ಯ ರೈಲ್ವೆ ವಕ್ತಾರ ತಿಳಿಸಿದರು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮೃತರ ಸಮೀಪ ಬಂಧುಗಳಿಗೆ ಎರಡು ಲಕ್ಷ ರೂ. ಪರಿಹಾರ ಮತ್ತು ತೀವ್ರವಾಗಿ ಗಾಯಗೊಂಡವರಿಗೆ ಒಂದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Helpline numbers
1800-180-6131 (toll free)
011-23967332, 23962389
Alwar: 1274-25205

(ಏಜೆನ್ಸೀಸ್)
User Comments
ಮಮತಾ 14 Nov 2009 11:48 am
ಇದು ಕಮ್ಯೂನಿಸ್ಟರ ಕೈವಾಡ ಇರಬಹುದು.
ಇಸ್ಮಾಯಿಲ್ 14 Nov 2009 11:40 am
ಹಳಿ ತಪ್ಪಿದರೆ ಯುಪಿಎ ಸರಕಾರ ಏನು ಮಾಡೋಕ್ಕಾಗುತ್ತೆ,
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article