•  

20 ಲಕ್ಷ ಷೇರು ಮಾರಿದ ಇನ್ಫಿ ಸುಧಾಮೂರ್ತಿ

ಶುಕ್ರವಾರ, ನವೆಂಬರ್ 6, 2009, 12:19 [IST]
Sudha Murthy
ಬೆಂಗಳೂರು, ನ. 6 : ಸಾಫ್ಟ್‌ವೇರ್ ದಿಗ್ಗಜ ಇನ್ಫೋಸಿಸ್‌ನ ಸುಧಾಮೂರ್ತಿ, ಕಂಪನಿಯಲ್ಲಿರುವ ತಮ್ಮ 20 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಷೇರು ಮಾರಾಟದಿಂದ ಸಂಗ್ರಹವಾದ ಸುಮಾರು 9.2 ಕೋಟಿ ಡಾಲರ್ (ಅಂದಾಜು 430.37 ಕೋಟಿ ರುಪಾಯಿ) ಅನ್ನು ಉದ್ಯಮ ಉತ್ತೇಜನ ನಿಧಿಯಲ್ಲಿ ತೊಡಗಿಸುವ ಮೂಲಕ ಸುಧಾಮೂರ್ತಿ ಕೂಡ ಪತಿ ನಾರಾಯಣ ಮೂರ್ತಿ ಜತೆಗೆ ನೂತನ ಉದ್ಯಮದಲ್ಲಿ ಕೈಜೋಡಿಲಿದ್ದಾರೆ.
  Read:  In English 
ಇನ್ಫೋಸಿಸ್‌ನ ಮುಖ್ಯ ಮಾರ್ಗದರ್ಶಕ ನಾರಾಯಣ ಮೂರ್ತಿ, ಇತ್ತೀಚೆಗೆ ಶೇ. 0.13ರಷ್ಟು ಷೇರು ಮಾರಾಟ ಮಾಡಿದ್ದರು. 8 ಲಕ್ಷ ಷೇರುಗಳ ಮಾರಾಟದಿಂದ ಸಂಗ್ರಹವಾದ 174.3 ಕೋಟಿ ರುಪಾಯಿ ನಿಧಿಯನ್ನು ವೆಂಚರ್ ಕ್ಯಾಪಿಟಲ್ ಸ್ಥಾಪನೆಗೆ ಬಳಸುತ್ತಿರುವುದಾಗಿ ಅವರು ಹೇಳಿದ್ದರು. ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹೊಸ ಉದ್ಯಮ ಆರಂಭಿಸಿರುವುದಾಗಿ ಅವರು ತಿಳಿಸಿದ್ದರು.

ಆರಂಭಿಕ ಹಂತದಲ್ಲಿ 3-4 ಮಂದಿ ಪ್ರತಿಭಾವಂತ ಯುವ ಜನರನ್ನು ಉದ್ಯಮಕ್ಕಾಗಿ ನಾರಾಯಣಮೂರ್ತಿ ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ. ನೂತನ ಉದ್ದಿಮೆಗಾಗಿ ಹಣ ಸಂಗ್ರಹ ಹಾಗೂ ವೆಚ್ಚದ ವಿಷಯದಲ್ಲಿ ಯಾವುದೇ ಕಾಲಮಿತಿಯನ್ನು ನಾವು ಹಾಕಿಕೊಂಡಿಲ್ಲ. ಯಾವುದೇ ಆತುರಪಡುವುದಿಲ್ಲ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ಮುಂದಿನ ಹಂತದ ಬಂಡವಾಳ ಸಂಗ್ರಹಕ್ಕೆ ಸದ್ಯಕ್ಕೆ ಮೂರ್ತಿ ಸ್ಪಷ್ಟಪಡಿಸಿಲ್ಲ ಎಂದು ಇನ್ಫೋಸಿಸ್ ಹೇಳಿದೆ.

(ದಟ್ಸ್ ಕನ್ನಡ ವಾರ್ತೆ)

&13;
User Comments
ಮರ್ಮಜ್ಞ 07 Nov 2009 11:21 am
ಕೊಟ್ರೂ ಕಷ್ಟ ಬಿಟ್ರೂ ಕಷ್ಟ ಹಳದಿ ನೇತ್ರಗಳಿದ್ದೊಡೆ ಜಗತ್ತೆಲ್ಲ ಹಳದಿ ನೋಡಾ ಎಂದ ಮರ್ಮಜ್ಞ!
ಗುಂಡ 07 Nov 2009 10:10 am
ಉತ್ತೇಜನ ನಿಧಿ ಇವೆಲ್ಲ ಸರಕಾರಕ್ಕೆ ಟ್ಯಾಕ್ಸ ವಿಚಾರದಲ್ಲಿ ನಾಮ ಎಳೆಯುವ ತಂತ್ರ .. ಇದರ ಟ್ಯಾಕ್ಸು ೨ ಕೋಟಿ ಡಾಲರ್ರು .. ಅದೇ ಹೇಳ್ತಾರಲ್ಲ .. ಘತೂತ್ಕಚ ಸಾಯ ಬೇಕಾದರೆ .. ಕೃಷ್ಣ ಕೂಗಿದನಂತೆ .. ಲೀ ಮಗ ನೀನು ಕೌರವರ ಸೇನೆಯ ಮೇಲೆ ಬೀಳು .. ಅದರಿಂದ ಒಂದಿಸ್ತು ಜನ ಸಾಯಲಿ ಅಂತ ಅ.. ಅದಕ್ಕೆ ಈ ಜನ ಹೀಗೆ ಈಮರಿಸಿ ಜನನ ನಮ್ಬುಸ್ತಾರೆ .. .. ಏನೂ ಇನ್ ಸೈದರ್ ಇನ್ಫಾರ್ಮಶನ್ ಸಿಕ್ಕಿರಬಹುದು .. ಸ್ಟಾಕ್ ಪ್ರಿಸು ಬೀಳುತ್ತೆ ಮುಂದಕ್ಕೆ ಅಂತ
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article