•  

ಜೈಪುರದ ಐಓಸಿಯಲ್ಲಿ ಬೆಂಕಿ : 5 ಸಾವು

ಶುಕ್ರವಾರ, ಅಕ್ಟೋಬರ್ 30, 2009, 12:18 [IST]
ಜೈಪುರ್, ಅ. 30 : ನಗರದ ಸೀತಾಪುರದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗೆ ಅಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ 5 ಮಂದಿ ಸಾವಿಗೀಡಾಗಿದ್ದು, 200 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಮಧ್ಯೆ ರಾತ್ರಿ ನಡೆದಿದೆ. ಬೆಂಕಿ ತೀವ್ರತೆ ಇನ್ನೂ ಕಡಿಮೆಯಾಗಿಲ್ಲ.
  Read:  In English 
ಇಂಡಿಯನ್ ಅಯಿಲ್ ಕಾರ್ಪೋರೇಷನ್ ಗೆ ಹತ್ತಿಕೊಂಡಿರುವ ಬೆಂಕಿ ಸುಮಾರು 13 ಗಂಟೆಗಳ ಕಾಲ ನಂತರವೂ ಧಗಧಗಿಸಿದ್ದು, ಬೆಂಕಿ ಆರಿಸುವ ಕಾರ್ಯದಲ್ಲಿ ಸುಮಾರು 35 ಅಗ್ನಿಶಾಮಕ ತಂಡ ಮತ್ತು 300 ಸೇನಾ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹೆಲಿಕಾಪ್ಟರ್ ಮೂಲಕ ಬೆಂಕಿ ಆರಿಸುವ ಯತ್ನ ನಡೆಸಲಾಗಿದೆ.

ಘಟನೆಯಲ್ಲಿ 5 ಮಂದಿ ಮೃತಪಟ್ಟಿದ್ದಾರೆ. 150 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 50-60 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡಿರುವವರನ್ನು ಸವಾಯಿ ಮಾನ್ ಸಿಂಗ್ ಆಸ್ಪತ್ರೆ ದಾಖಲಿಸಲಾಗಿದೆ. ಆಕಸ್ಮಿಕವಾಗಿ ದುರ್ಘಟನೆ ಸಂಭವಿಸಿದ್ದು, ಕೆನ್ನಾಲಿಗೆ ತೀವ್ರತೆ ಭಾರಿ ಪ್ರಮಾಣದಲ್ಲಿದೆ. ಇಂಡಿಯನ್ ಕಾರ್ಪೋರೇಷನ್ ಸುತ್ತಮುತ್ತ ಗ್ರಾಮ ಮತ್ತು ಶಾಲಾ ಕಾಲೇಜುಗಳನ್ನು ತೆರವುಗೊಳಿಸಲಾಗುವುದು ಎಂದು ಕೇಂದ್ರದ ಇಂದನ ಸಚಿವ ಮುರಳಿ ದಿಯೋರಾ ಹೇಳಿದ್ದಾರೆ.

(ಏಜನ್ಸೀಸ್)

&13;
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article