•  

ಶತಮಾನದ ನಂತರ ಗುಡಿ ಪ್ರವೇಶಿಸಿದ ದಲಿತರು

ಬುಧವಾರ, ಅಕ್ಟೋಬರ್ 28, 2009, 15:22 [IST]
Dalits enter temple after 100 years in TN
ಚೆನ್ನೈ, ಅ. 28 : ಒಂದು ಶತಮಾನದ ನಂತರ ಮೊದಲ ಬಾರಿಗೆ ದಲಿತರು ದೇವಸ್ಥಾನದ ಒಳಗೆ ಕಾಲಿಡಲು ಸಾಧ್ಯವಾಗುವಂತಹ ವಾತಾವರಣ ನಿರ್ಮಾಣವಾದ ಸಂಗತಿ ತಮಿಳುನಾಡಿನಲ್ಲಿ ನಡೆದಿದೆ.
  Read:  In English 
ನಾಗಪಟ್ಟಿನಮ್ ಜಿಲ್ಲೆಯ ಚೆಟ್ಟಪುಲ್ಲಂ ಎಂಬ ಹಳ್ಳಿಯಲ್ಲಿ ಮಂಗಳವಾರ ದಲಿತರು ಏಕಾಂಬರೇಶ್ವರ ದೇವಸ್ಥಾನವನ್ನು ವಿಧ್ಯುಕ್ತವಾಗಿ ಪ್ರವೇಶಿಸಿದರು. ಸುಮಾರು ಅರ್ಧ ಗಂಟೆಕಾಲ ಅವರ ಪ್ರಾರ್ಥನೆ, ನಮಸ್ಕಾರ ವಿಧಿಗಳು ಸಾಗಿದವು.

ಬಾಗಿಲು ಒಡೆದು ದೇವಸ್ಥಾನ ಪ್ರವೇಶಿಸಲು ಮುಂದಾಗಿದ್ದ ದಲಿತರನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಪೊಲೀಸರನ್ನು ಹಿಮ್ಮೆಟ್ಟಿಸಲು ದಲಿತರು ಕಲ್ಲುಗಳನ್ನು ಎಸೆದಿದ್ದರು. ಸರಕಾರ ಮಧ್ಯಪ್ರವೇಶ ಮಾಡಿ ದಲಿತರು ಮತ್ತು ದಲಿತರಲ್ಲದವರ ನಡುವೆ ಸಂಧಾನ ಮಾತುಕತೆಗಳನ್ನು ನಡೆಸಿತ್ತು. ಅದರ ಫಲಶ್ರುತಿಯಾಗಿ ದಲಿತರು ದೇಗುಲದ ಒಳಹೊಕ್ಕರು. ಮತ್ತೆ ಗಲಭೆಯಾಗದಂತೆ ಎಚ್ಚರಿಕೆ ವಹಿಸಲು ಪೊಲೀಸರು ಕೆಲವು ದಿನ ದೇವಸ್ಥಾನದ ಆವರಣದಲ್ಲಿ ಠಿಕಾಣಿ ಹೂಡಿದ್ದಾರೆ.

(ಏಜನ್ಸೀಸ್)
User Comments
ರಂಗ 01 Apr 2010 03:32 pm
ಕನ್ನಡಿಗ ಅವರೇ .. ನಾನ್ ಹೇಳಿದು .. ದಲಿತರನ್ನ ಎಲ್ಲ ಕಡೆ ಬಿಡ್ತ್ಹರಂತ .. like dharmastala , tirupati .. ella temples
ರಂಗ 01 Apr 2010 02:31 pm
ನಾನು ರಂಗ ಅಂತ ... ನಾನು ದಲಿತನು ಅಲ್ಲ.. ಬ್ರಾಹ್ಮಣನು ಅಲ್ಲ... ನಾನು ಒಬ್ಬ ಮನುಷ್ಯ ... ಬಾರತದ ಪ್ರಮುಖ ದೇವಸ್ತಾನಗಳಲ್ಲಿ ಎಲ್ಲೇ ಅಗಲಿ ..ಯಾವ ಜಾತಿ ಯಾವ ಕುಲ ಎಂದು ಕೇಳುವುದಿಲ್ಲ.. ನೀವಾಗಿ ನೀವಾಗಿ ನೀವಿ ಕೆರ್ಕೊಂಡು ಹೋದ್ರೆ ತಪ್ಪ .. ... ನಿಮ್ಮ ಊರಿನ ದೇವಸ್ತಾನ ಬಿಟ್ಟಿಲ್ಲ ಅಂದ್ರೆ .. u just cannot blame evryone ... friends , ಅರ್ಥ ಮಾಡ್ಕೊಳಿ ... ಮತ್ತೆ ನಿಮ್ಮ ಮನೇಲೆ ಒಂದು ದೇವರ ಮನೆ ಇಟ್ಕೋಳಿ .. ಪೂಜೆ ಮಾಡ್ಕೊಳಿ..
ಕನ್ನಡಿಗ 01 Apr 2010 02:55 pm
ರಂಗರೆ ಅರ್ಥ ಆಗೋ ಥರ ಬರೆದ್ರೆ ಒಳ್ಳೆಯದು
ರಂಗ 01 Apr 2010 03:12 pm
ಕನ್ನಡಿಗ ಅವರೇ .. ನಾನ್ ಹೇಳಿದು .. ದಲಿತರನ್ನ ಎಲ್ಲ ಕಡೆ ಬಿಡ್ತ್ಹರಂತ .. like dharmastala , tirupati .. ella temples
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article