•  

ಜಿಯೋಸಿಟಿಗೆ ಗುಡ್ ಬೈ ಎಂದ ಯಾಹೂ

ಮಂಗಳವಾರ, ಅಕ್ಟೋಬರ್ 27, 2009, 14:31 [IST]
ಬೆಂಗಳೂರು, ಅ. 27 : ಒಂದು ಅಧ್ಯಾಯದ ಸಮಾಪ್ತಿ. ಅಂತರ್ ಜಾಲದ ಮೊದಲ ತಾಣ ಜಿಯೋಸಿಟೀಸ್ ಗೆ ಶುಭವಿದಾಯ. ಇಂಟರ್ ನೆಟ್ ಒಲವಿನ ಒಂದು ಜನಾಂಗಕ್ಕೆ ಕಣ್ಣು ತೆರೆಸಿದ ಯಾಹೂ, ತನ್ನ ಒಡೆತನದ ಜಿಯೋಗೆ ನಾಳೆ ಚರಮಗೀತೆ ಹಾಡಲು ಸಜ್ಜಾಗಿದೆ. ಹೌದು, ಜಿಯೋ ನಾಳೆ ( 28 ಅ.2009) ಕಣ್ಣು ಮುಚ್ಚುತ್ತದೆ.

ಜಿಯೋ ಪುಟಗಳನ್ನು ದಫನ್ ಮಾಡಲಾಗುತ್ತದೆ ಎಂದು ಯಾಹೂ ತನ್ನ ಬಳಕೆದಾರರಿಗೆ ಈ ಮುಂಚೆ ಅನೇಕಬಾರಿ ಮುನ್ಸೂಚನೆ ಕೊಟ್ಟಿದೆ. ಬಳಕೆದಾರರು ಈ ಕೂಡಲೇ ತಾವು ವೆಬ್ ನಲ್ಲಿ ಹೂತಿಟ್ಟಿದ್ದ ಮಾಹಿತಿಯನ್ನು ಜಿಯೋ ಪುಟಗಳಿಂದ ಎತ್ತಿಕೊಂಡು ಕಾಪಿಟ್ಟುಕೊಳ್ಳುವುದು ಕ್ಷೇಮಕರ.
ಹಾಗಿದ್ದರೂ, ವೆಬ್ ಆರ್ ಕೈವ್ಸ್ ನಲ್ಲಿ ಆಯ್ದ ಕೆಲವು ಪುಟಗಳನ್ನು 'ಇತಿಹಾಸದ ದಾಖಲೆ ' ಪುಟಗಳಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾಹೂ ತಂಡ ಕೆಲಸ ಮಾಡುತ್ತಿದೆ. ಗುಡ್ ಬೈ.

(ಏಜೆನ್ಸೀಸ್)

&13;
User Comments
Pandu Ranga Rao N 27 Oct 2009 11:36 pm
End of a Great Era... I had web pages, photos in geocities.... It brought me name and fame and then a new life... I am very sad about the closure...
ಸೂರಿ 27 Oct 2009 05:09 pm
ತುಂಬಾ ಉಪಯುಕ್ತವಾಗಿತ್ತು ಜಿಯೋಸಿಟೀಸ್......
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article