•  

ವಿಪ್ರೋ : ಅರಳಿದ ಸೂರ್ಯಕಾಂತಿ,ಭರ್ಜರಿ ಬೆಳೆ

ಮಂಗಳವಾರ, ಅಕ್ಟೋಬರ್ 27, 2009, 14:42 [IST]
Azim Premji
ಮುಂಬೈ, ಅ. 27 : ಭಾರತದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ಬೆಂಗಳೂರು ಮೂಲದ ವಿಪ್ರೋ ಸಾಫ್ಟವೇರ್ ಕಂಪನಿಯು ಎರಡನೇ ತ್ರೈಮಾಸಿಕ ವರದಿಯನ್ನು ಮಂಗಳವಾರ ಪ್ರಕಟಿಸಿದೆ. ಶೇ.19 ರಷ್ಟು ಅಂದರೆ 1,161 ಕೋಟಿ ರುಪಾಯಿಗಳ ನಿವ್ವಳ ಲಾಭದೊಂದಿಗೆ ಕಂಪನಿಯು ಸುಸ್ಥಿತಿಯನ್ನು ಕಾಯ್ದುಕೊಂಡಿದೆ.
  Read:  In English 
2008-09 ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸೆಪ್ಟೆಂಬರ್ 30ಕ್ಕೆ 1,161.7 ಕೋಟಿ ರುಪಾಯಿಯಷ್ಟು ನಿವ್ವಳ ಲಾಭ ಗಳಿಸಿದೆ. ಆರ್ಥಿಕ ಬಿಕ್ಕಟ್ಟು ಇದ್ದಾಗಲೂ ಕೂಡಾ ಕಂಪನಿಯ ವ್ಯವಹಾರಗಳು ಲಾಭದಾಯಕವಾಗಿ ಮುನ್ನೆಡೆದಿವೆ. ಆರ್ಥಿಕ ಮುಗ್ಗಟ್ಟಿನ ನಡುವೆ ವಿಪ್ರೋ ಕಂಪನಿಗೆ 37 ಹೊಸ ಸಾಫ್ಟ್ ವೇರ್ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ ಉತ್ತಮ ಲಾಭ ಗಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ ಎಂದು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮಜೀ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಸಾಫ್ಟವೇರ್ ಮಾರುಕಟ್ಟೆ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದರೂ ವಿಪ್ರೋ ಕಂಪನಿ ಲಾಭದಲ್ಲಿ ಮುನ್ನೆಡೆದಿದೆ. ಇನ್ಫೋಸಿಸ್ ಕಂಪನಿ ಕೂಡಾ ತನ್ನ ಎರಡನೇ ತ್ರೈಮಾಸಿಕದಲ್ಲಿ ಲಾಭದಲ್ಲಿ ಮುಂದುವರಿದಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 978.2 ಕೋಟಿ ರುಪಾಯಿಗಳ ನಿವ್ವಳ ಲಾಭ ಗಳಿಸಿತ್ತು.

(ದಟ್ಸ್ ಕನ್ನಡ ವಾರ್ತೆ)

&13;
User Comments
ಸಮಾಜ 28 Oct 2009 02:48 am
ಯಾವಿದೆ ದೊಡ್ಡ ಕಂಪನಿಯಲ್ಲಿ ಕೆಳ ೧೦-೧೫% ಕಸ ಇದ್ದೆ ಇರುತ್ತದೆ. ಆ ಕಲ್ಮಶವನ್ನು ಪ್ರತೀ ವರ್ಷ ಗುಡಿಸಿ ಎಸೆಯಲೇ ಬೇಕು. ಎಲ್ಲ ಕಂಪನಿಗಳೂ ಇದನ್ನು ಮಾಡಿತ್ತಿಲ್ಲ. ತುದಿ ಗಾಳ ಮೇಲೆ ನಿಂತು ಸದಾ ಸಾಧನೆ ಮಾಡದ ಶೆಡ್ಡು ಹಿಡಿದ ಅಥವಾ ಸಾಮರ್ಥ್ಯವಿಲ್ಲದ ನೌಖರರಿಗಗಷ್ಟೇ ಇದರಿಡ್ನ ಕಷ್ಟ. ಅಂಥವರು ಹೊರ ಬಿದ್ದು ತಮ್ಮ ಸಾಮರ್ಹ್ತ್ಯ ಮಟ್ಟದ ಕೆಲಸ ಹುಡುಕಿ ಕೊಳ್ಳ ಬಹುದು ಅಥವಾ, ತುಕ್ಕು ಹಿಡಿದ ತಮ್ಮ ಕಾರ್ಯೋಥ್ಸಾಹಕ್ಕೆ ಸಾಣೆ ಹಿಡಿದು ಮತ್ತೆ ಸ್ಪರ್ಧಿಸಲು ಸಜ್ಜಾಗಬಹುದು. ನಾನು ೯೫ ರಲ್ಲಿ ನೌಖರಿ ಪ್ರಾರಂಭಿಸಿದಾಗ ವರ್ಷದಲ್ಲೇ ಸಾಮಥ್ಯವಿಲ್ಲದೆ ಕೆಲಸ ಕಳೆದು ಕೊಂಡೆ. ನನ್ನ ಸಾಮರ್ಹ್ತ್ಯ ಅರಿತು, ಅದಕ್ಕೆ ತಕ್ಕ ಕೆಲಸ ಹಿಡಿದೆ.
Employee 27 Oct 2009 03:20 pm
Idella sullu lekka. Ishtu labha aagirodu yaake andare 1. Nowkararige pink slip kottu 2. Not purchasing the raw goods 3. Cost cutting 4. Reserve Bank intrest rates down aagirodarinda..mattu it had won only three clients not 37.. if so, how could wipro will remove employess? 4.
ಸಮಾಜ 28 Oct 2009 02:38 am
ಒಳ್ಳೆ ಸಮಾಜವಾದೀ ದೇಶದನ್ಥೆ ಹಲುಬುತ್ತಿದ್ದೀಯಲ್ಲ ? ಇದೊಂದು ಪ್ರತಿಬ್ಹಾಧಾರಿಥ ಬಂಡವಾಳ ವ್ಯವಸ್ಥೆ. ಒಳ್ಳೆ ಕೆಲಸ ಮಾಡುವವರನ್ನು ಇಟ್ಟುಕೊಂಡು, ಪ್ರತೀ ವರ್ಷವೂ ತಪ್ಪದೆ ಕೆಳಗಿನ ೧೦% ನೌಖರರನ್ನು ವಜಾ ಗೊಲಿಸುತ್ತ ಮುನ್ನದೆದರಷ್ಟೇ ಉದ್ಯಮಗಳು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಮುನ್ನಡೆಯಲು ಸಾಧ್ಯ. ಕಂಪನಿಯ ಲಾಭಾನ್ಶವೆ ಅಂತಿಮ ಗುರಿಯಾಗಿರಬೇಕು. ಆರ್ಥಿಕ ಸಂಕಟ ಬಂಧಾಗ ಅತೀ ಹೆಚ್ಚು ಖರ್ಚಿನ ಕೇಂದ್ರವಾದ ನೌಕರ ವೇತನದ ಖರ್ಚನ್ನು ಕಡಿಮೆ ಗೊಳಿಸಲೇ ಬೇಕು. ಆಗ lay-off ಅನಿವಾರ್ಯ. ಕಂಪೆನಿಗಳು ಲಾಭ ಗಲಿಸಿದಸ್ಥು ಸಮಾಜಕ್ಕೆ ಒಳ್ಳೆಯದು. ಹೆಚ್ಚಿನ ಕರ ಸಲ್ಲಿಕೆ, ಉದ್ಯೋಗ ಮರು ಸ್ರಷ್ಟಿ ಇತ್ಯಾದಿ.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article