Thought for the day
Your page will load in ...
Close Ad X
Advertisement
English ગુજરાતી हिन्दी മലയാളം தமிழ் తెలుగు
 
Share This Story

ಶ್ರೀಸಾಮಾನ್ಯನಿಗೆ ನಮ್ಮ ಬೆಂಗಳೂರು ಪ್ರಶಸ್ತಿ

Published: Friday, October 23, 2009, 18:52 [IST]

Namma Bengaluru Awards For Unsung Heros

ಬೆಂಗಳೂರು, ಅ. 23 : ಸಮಾಜದಲ್ಲಿ ಸಾಕಷ್ಟು 'ಸೇವೆ' ಸಲ್ಲಿಸಿದ ಅನೇಕರಿಗೆ ಅನೇಕಾನೇಕ ಪ್ರಶಸ್ತಿಗಳು ತಾವೇ ಹುಡುಕಿಕೊಂಡು ಬರುತ್ತವೆ ಮತ್ತು ಕೆಲವರಿಗೆ ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗುವ ಚಾಣಾಕ್ಷತನವೂ ಗೊತ್ತಿರುತ್ತದೆ. ಆದರೆ, ನಿಸ್ವಾರ್ಥದಿಂದ, ಯಾವುದೇ ಲಾಭಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುವವರು ಎಲೆಮರೆ ಕಾಯಿಯಾಗಿಯೇ ಉಳಿದುಬಿಡುತ್ತಾರೆ. ಅಂಥವರಿಗೆ ಪ್ರಶಸ್ತಿಯನ್ನು ಬೆನ್ನತ್ತುವ ಚಾಕಚಕ್ಯತೆಯೂ ಗೊತ್ತಿರುವುದಿಲ್ಲ, ಅದು ಅವರಿಗೆ ಬೇಕಾಗಿಯೂ ಇರುವುದಿಲ್ಲ.

ಅಂಥ, ಅಸಾಮಾನ್ಯ ಸೇವೆ ಸಲ್ಲಿಸಿರುವ ಶ್ರೀಸಾಮಾನ್ಯರನ್ನು ಹುಡುಕಿ ಪ್ರಶಸ್ತಿ ನೀಡುವ, ಪೋಡಿಯಂ ಮೇಲೆ ಕರೆದುತರುವ ಜವಾಬ್ದಾರಿ ಬೆಂಗಳೂರು ನಾಗರಿಕರ ಮೇಲಿದೆ. ಹೆಚ್ಚಿಗೆ ಏನಿಲ್ಲ, ಅರ್ಹತೆ ಇದ್ದರೂ ಮಿನುಗದೆ ಮೋಡದ ಮುಸುಕಿನಲ್ಲಿ ಮರೆಯಾಗಿರುವ ನಿಜವಾದ ತಾರೆಗಳ ಸೇವೆಯನ್ನು ಗಮನಿಸಿ ಬೆಂಗಳೂರು ಬೆಳೆಯಲು ಕಾರಣರಾದವರಿಗೆ ಅಟ್ಲೀಸ್ಟ್ 'ಧನ್ಯವಾದ' ಹೇಳುವ ವಿನೂತನ ಕಾರ್ಯಕ್ರಮವನ್ನು ಸಂಸದ ರಾಜೀವ ಚಂದ್ರಶೇಖರ್ ಹಮ್ಮಿಕೊಂಡಿದ್ದಾರೆ.

ಚಿಂತನಶೀಲತೆ, ಚಲನಶೀಲತೆ, ಕ್ರಿಯಾತ್ಮಕತೆಯನ್ನು ಮೈಗೂಡಿಸಿಕೊಂಡಿರುವ ಇಂಥ ನಿಜವಾದ ತಾರೆಗಳು ಎಲ್ಲೋ ಇರುವುದಿಲ್ಲ, ನಮ್ಮ ನಿಮ್ಮೆಲ್ಲರ ನಡುವೆಯೇ ಇರುತ್ತಾರೆ. ತಮ್ಮ ಇರುವಿಕೆಯಿಂದಲೇ ಸುತ್ತಮುತ್ತಲಿನ ಜೀವನವನ್ನು ಸಹನೀಯವಾಗಿಸಿರುತ್ತಾರೆ. ಅಂಥಹ ಸಾಧಕರಿಗೆ 'ನಮ್ಮ ಬೆಂಗಳೂರು ಪ್ರಶಸ್ತಿ' ನೀಡಿ ಗೌರವಿಸಲು ನಮ್ಮ ಬೆಂಗಳೂರು ಫೌಂಡೇಷನ್ ನಿರ್ಧರಿಸಿದೆ. ಇದನ್ನು ಪ್ರತಿವರ್ಷ ನೀಡಲು ಫೌಂಡೇಷನ್ ತೀರ್ಮಾನಿಸಿದೆ. ಪ್ರಶಸ್ತಿ ಮೊತ್ತಕ್ಕಾಗಿ ಹೃದಯ ಶ್ರೀಮಂತರು ಧಾರಾಳವಾಗಿ ದಾನ ಮಾಡಬಹುದಾಗಿದೆ.

ಯಾರು ಪ್ರಶಸ್ತಿಗೆ ಅರ್ಹರು?

1) ವಿಧಾನಸಭೆ ಸದಸ್ಯ, ವಿಧಾನಪರಿಷತ್ ಸದಸ್ಯ, ಸಂಸದ, ಸರಕಾರಿ ಅಧಿಕಾರಿಗಳು, ಬಿಡಿಎ, ಬಿಬಿಎಂಪಿ, ಬೆಸ್ಕಾಂನಂಥ ಸಂಸ್ಥೆಗಳು.
2) ಖಾಸಗಿ ಸಂಸ್ಥೆ ಮತ್ತು ಶ್ರೀಸಾಮಾನ್ಯರು.

ಅಕ್ಟೋಬರ್ 14ರಿಂದ ನಾಮನಿರ್ದೇಶನ ಪ್ರಾರಂಭವಾಗಿದೆ. ನವೆಂಬರ್ 14 ಮಕ್ಕಳ ದಿನಾಚರಣೆವರೆಗೆ ನಾಮನಿರ್ದೇಶನವನ್ನು ಸಲ್ಲಿಸಬಹುದು. ಅರ್ಹರ ಪಟ್ಟಿಯನ್ನು ನವೆಂಬರ್ 20ರಂದು ಪ್ರಕಟಿಸಲಾಗುವುದು. ನವೆಂಬರ್ 21ರಿಂದ ಪಟ್ಟಿಯನ್ನು ಪರಿಶೀಲಿಸಿ ವಿಜೇತರನ್ನು ಆಯುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಡಿಸೆಂಬರ್ 12ರಂದು ಪ್ರಶಸ್ತಿಯನ್ನು ವಿತರಿಸಲಾಗುವುದು.

ನಾಮಿನೇಟ್ ಮಾಡುವುದು ಹೇಗೆ?

1) ಈ ಅಂತರ್ಜಾಲ ತಾಣದಿಂದ ನಾಮನಿರ್ದೇಶನ ಫಾರಂಅನ್ನು ಡೌನ್ ಲೋಡ್ ಮಾಡಬಹುದು.
2) ಬೆಂಗಳೂರು ಒನ್ ಕಚೇರಿ, ಕೆಫೆ ಕಾಫಿ ಡೇಯಿಂದ ನಾಮನಿರ್ದೇಶನ ಫಾರಂಅನ್ನು ಪಡೆಯಬಹುದು.
3) ಭರ್ತಿ ಮಾಡಿದ ಅರ್ಜಿಯನ್ನು ಅಥವಾ ಫಾರಂಅನ್ನು ಫೋಟೋ, ವಿಡಿಯೋ ಸಹಿತ ಸಲ್ಲಿಸಬೇಕು.
4) ಖುದ್ದಾಗಿ ಅಥವಾ ಆನ್ ಲೈನ್ ಕೂಡ ಅರ್ಜಿಯನ್ನು ಸಲ್ಲಿಸಬಹುದು.
5) ನಾಮನಿರ್ದೇಶನ ಫಾರಂಗಳು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಲಭ್ಯವಿವೆ.

ಭರ್ತಿ ಮಾಡಿದ ಫಾರಂಅನ್ನು ಕೆಳ ವಿಳಾಸಕ್ಕೆ ಕಳಿಸಬೇಕು.

ಎಸ್ ನಂದೀಶ್, ಕಾರ್ಯದರ್ಶಿ,
11ನೇ ಮಹಡಿ, ವಿವಿ ಮುಖ್ಯ ಕಟ್ಟಡ,
ಡಾ. ಬಿಆರ್ ಅಂಬೇಡ್ಕರ್ ಬೀದಿ,
ಬೆಂಗಳೂರು - 560 001.
ದೂರವಾಣಿ: + 91 80 2286 3600.

ಜ್ಯೂರಿ ಸದಸ್ಯರು ಮತ್ತಿತರ ವಿವರಗಳಿಗಾಗಿ ಈ ತಾಣ ನೋಡಿರಿ : http://www.namma-bengaluru.in/

(ದಟ್ಸ್ ಕನ್ನಡ ವಾರ್ತೆ)

&13;

ಅಭಿಪ್ರಾಯ ಬರೆಯಿರಿ
Click here to type in Kannada
Subscribe Newsletter
1st Test , Lord's Cricket Ground, St John's Wood
England: 180 / 6, 59 Overs
IPL, M Chinnaswamy Stadium, Bangalore
Royal Challengers Bangalore won by 24 runs
IPL, Himachal Pradesh Cricket Association Stadium, Dharmasala
Kings XI Punjab won by 50 runs