•  

ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಒಬಾಮಾ

ಗುರುವಾರ, ಅಕ್ಟೋಬರ್ 15, 2009, 15:14 [IST]
Obama lights up Diwali celebrations in White House
ವಾಷಿಂಗ್ ಟನ್, ಅ. 15 : ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಶ್ವೇತಭವನದಲ್ಲಿ ದೀಪ ಬೆಳಗಿಸುವ ಮೂಲಕ ಬೆಳಕಿನ ಹಬ್ಬ ದೀಪಾವಳಿಯನ್ನು ಬುಧವಾರ ಸಂಭ್ರಮದಿಂದ ಆಚರಿಸಿದರು.
  Read:  In English 
&13;&13;

ಹನುಮಂತನ ಭಕ್ತನಾಗಿರುವ ಒಬಾಮಾ ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ. ಅವರ ಕಚೇರಿಯಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವಚಿತ್ರ ಇರುವುದು ಅವರಲ್ಲಿರುವ ಭಾರತೀಯರ ಮೇಲಿರುವ ಗೌರವ ಸೂಚಿಸುತ್ತಿದೆ. ಬುಧವಾರ ಶ್ವೇತಭವನದಲ್ಲಿ ಏರ್ಪಡಿಸಲಾಗಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ದೀಪ ಬೆಳಗಿಸಿ ಭಾರತೀಯರಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಹಿಂದೂ ಅರ್ಚಕರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಅನೇಕ ಅನಿವಾಸಿ ಭಾರತೀಯರೂ ಭಾಗವಹಿಸಿದ್ದರು.

(ಏಜನ್ಸೀಸ್)

&13;
User Comments
ಅಬ್ದುಲ್ಲ 16 Oct 2009 01:05 pm
ಸರ್ವ ಬಾಂದವರಿಗೂ ಬೆಳಕಿನ ಹಬ್ಬ ದೀಪವಳಿಯ ಶುಬಾಶಯಗಳು.
ವಿನಾಯಕ 16 Oct 2009 11:52 am
ಈ ವರ್ಷ ದೀಪಾವಳಿಯನ್ನು ಬಹಳ ಭಕ್ತಿಯಿಂದ ಆಚರಿಸಿ , ಆಡಂಬರ ಬೇಡ , ಪಟಾಕಿ ಗಾಗಿ ಖರ್ಚು ಮಾಡುವ ಹಣವನ್ನು ಸಂತ್ರಸ್ತರ ನೆರವಿಗಾಗಿ ಉಪಯೋಗಿಸಿ , ದೀಪಾವಳಿಯ ಶುಭಾಶಯಗಳು
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article