
ಪೇಶಾವರ, ಅ. 9 : ನಗರದ ಪ್ರಮುಖ ಕೇಂದ್ರ ಖೈಬರ್ ಬಜಾರ್ ರಸ್ತೆಯ ಬದಿಯಲ್ಲಿ ಸ್ಪೋಟಕಗಳನ್ನು ಇರಿಸಲಾಗಿದ್ದ ಅತ್ಮಾಹುತಿ ಕಾರು ಬಾಂಬರ್ ಸ್ಫೋಟಗೊಂಡಿದ್ದು, ಸುಮಾರು 44 ಮಂದಿ ಸಾವನ್ನಪ್ಪಿದ್ದಾರೆ. 100 ಹೆಚ್ಚೂ ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಅಮೆರಿಕ ಸೇನಾಪಡೆ ತಾಲಿಬಾನ್ ಮತ್ತು ಆಲ್ ಖೈದಾ ಹಿಡಿತದಲ್ಲಿರುವ ವಾಜರೀಸ್ತಾನದ ಮೇಲೆ ದಾಳಿ ಸೇನಾ ದಾಳಿ ನಡೆಸಲು ಸಿದ್ದತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಗುರುವಾರವಷ್ಟೇ ತಾಲಿಬಾನ್ ಉಗ್ರರು ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಗುರಿಯಾಗಿರಿಸಿಕೊಂಡು ಬಾಂಬ್ ಸ್ಪೋಟಿಸಿದ್ದರು. ಕೃತ್ಯದಲ್ಲಿ 4 ಮಂದಿ ಅಪ್ಘನ್ನರು ಮೃತಪಟ್ಟಿದ್ದರು. ಭಾರತೀಯ ರಾಯಬಾರಿ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದರು. ತಾಲಿಬಾನ್ ಮತ್ತು ಆಲ್ ಖೈದಾ ಉಗ್ರರ ವಶದಲ್ಲಿರುವ ವಾಜರೀಸ್ತಾನದ ಮೇಲೆ ಅಮೆರಿಕ ಮತ್ತಪ ಪಾಕಿಸ್ತಾನದ ಸೇನಾಪಡೆ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಉಗ್ರರ ಕೆಂಗಣ್ಣಿಗೆ ಗುರಿಯಾಗಿದೆ.
(ಏಜನ್ಸೀಸ್)
Read: In English
ವಾಜರೀಸ್ತಾನದ ಮೇಲೆ ಅಮೆರಿಕ ಸೇನಾಪಡೆಗೆ ಪಾಕಿಸ್ತಾನ ಸರಕಾರ ಬೆಂಬಲ ಸೂಚಿಸಿರುವುದು ಉಗ್ರರ ಕೋಪಕ್ಕೆ ಕಾರಣವಾಗಿದೆ. ಕಾರಿನಲ್ಲಿ ಇರಿಸಿ ಸ್ಫೋಟಿಸಲಾದ ಬಾಂಬ್ ದಾಳಿಯ ಭೀಕರತೆ ಅಕ್ಕಪಕ್ಕದಲ್ಲಿದ್ದ ಅನೇಕ ವಾಹನಗಳು ಮತ್ತು ಕಟ್ಟಡಗಳು ಜಖಂಗೊಂಡಿವೆ. ಮೂಲಗಳು ಪ್ರಕಾರ 44 ಮಂದಿ ಮೃತಪಟ್ಟಿದ್ದಾರೆ. 100 ಕ್ಕೂ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಲಾಗಿದೆ ಎಂದು ಪೇಶಾವರ ಪೊಲೀಸ್ ಮೂಲಗಳು ತಿಳಿಸಿವೆ. ಗುರುವಾರವಷ್ಟೇ ತಾಲಿಬಾನ್ ಉಗ್ರರು ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಗುರಿಯಾಗಿರಿಸಿಕೊಂಡು ಬಾಂಬ್ ಸ್ಪೋಟಿಸಿದ್ದರು. ಕೃತ್ಯದಲ್ಲಿ 4 ಮಂದಿ ಅಪ್ಘನ್ನರು ಮೃತಪಟ್ಟಿದ್ದರು. ಭಾರತೀಯ ರಾಯಬಾರಿ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದರು. ತಾಲಿಬಾನ್ ಮತ್ತು ಆಲ್ ಖೈದಾ ಉಗ್ರರ ವಶದಲ್ಲಿರುವ ವಾಜರೀಸ್ತಾನದ ಮೇಲೆ ಅಮೆರಿಕ ಮತ್ತಪ ಪಾಕಿಸ್ತಾನದ ಸೇನಾಪಡೆ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಉಗ್ರರ ಕೆಂಗಣ್ಣಿಗೆ ಗುರಿಯಾಗಿದೆ.
(ಏಜನ್ಸೀಸ್)














