•  

ತೇಕಡಿಯಲ್ಲಿ ದೋಣಿ ದುರಂತ : 37 ಬಲಿ ?

ಗುರುವಾರ, ಅಕ್ಟೋಬರ್ 1, 2009, 11:19 [IST]
Kerala boat mishap
ತಿರುವನಂತಪುರ, ಅ. 1 : ಕೇರಳದ ಪ್ರಸಿದ್ಧ ಪೆರಿಯಾರ್ ರಾಷ್ಟ್ರೀಯ ವನ್ಯಧಾಮದ ತೇಕಡಿ ಸರೋವರದಲ್ಲಿ ಬುಧವಾರ (ಸೆ 30) ಸಂಜೆ ಸಂಭವಿಸಿದ ದೋಣಿ ದುರಂತದಲ್ಲಿ ಕನಿಷ್ಠ 37 ಮಂದಿ ಜಲಸಮಾಧಿಯಾಗಿದ್ದಾರೆ. ಇವರಲ್ಲಿ 18 ಮಹಿಳೆಯರು, ಆರು ಮಂದಿ ಮಕ್ಕಳು ಮತ್ತು ಇಬ್ಬರು ವಿದೇಶಿಯರೂ ಸೇರಿದ್ದಾರೆ. ದುರಂತದಲ್ಲಿ ಕರ್ನಾಟಕದ ಹಲವು ಮಂದಿ ಸತ್ತಿರುವ ಶಂಕೆಯಿದೆ. ವನ್ಯಪ್ರಾಣಿಗಳನ್ನು ವೀಕ್ಷಿಸಲು ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಸೇರಿದ 'ಜಲಕನ್ನಿಕಾ" ಹೆಸರಿನ ದೋಣಿಯಲ್ಲಿ ಪ್ರವಾಸಿಗರು ಜಲವಿಹಾರಕ್ಕೆ ತೆರಳಿದ್ದರು.

&13;&13;

ಪ್ರವಾಸಿಗರಿಂದ ತುಂಬಿದ್ದ ಈ ನತದೃಷ್ಟ ದೋಣಿಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ ಮತ್ತಿತರ ಕಡೆಗಳಿಂದ ರಜಾ ದಿನಗಳನ್ನು ಕಳೆಯಲು ಬಂದಿದ್ದವರು ಮತ್ತು ಕೆಲ ವಿದೇಶಿಯರು ಸೇರಿದಂತೆ 74 ಮಂದಿ ಪ್ರಯಾಣಿಸುತ್ತಿದ್ದರು. ಇದುವರೆಗೆ 40 ಜನರನ್ನು ರಕ್ಷಿಸಲಾಗಿದ್ದು, ಇನ್ನೂ 20 ಮಂದಿ ನಾಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯವಾಗಿ ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಟಿಕೆಟ್ ನೀಡುವ ಪದ್ಧತಿ ಇಲ್ಲದಿರುವುದರಿಂದ ದೋಣಿಯಲ್ಲಿ ಎಷ್ಟು ಪುಟ್ಟ ಮಕ್ಕಳು ಇದ್ದರು ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ.
  Read:  In English 
ದಟ್ಟ ಅರಣ್ಯದ ನಡುವೆ ಇರುವ ಘಟನಾ ಸ್ಥಳ, ದೋಣಿ ತಲುಪಬೇಕಿದ್ದ ಸ್ಥಳದಿಂದ ಐದು ಕಿ.ಮೀ. ದೂರದಲ್ಲಿದೆ. ಇಂತಹ ದುರ್ಗಮ ಸ್ಥಳದಲ್ಲಿ ಕತ್ತಲು, ಮಳೆಯನ್ನೂ ಲೆಕ್ಕಿಸದೆ ಪರಿಹಾರ ಕಾರ್ಯಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ 40 ಪ್ರವಾಸಿಗರನ್ನು ರಕ್ಷಿಸಲು ಸಫಲರಾಗಿದ್ದಾರೆ. ದುರಂತ ನಡೆದ 30 ನಿಮಿಷಗಳ ಬಳಿಕವಷ್ಟೇ ಪೊಲೀಸರು ಮತ್ತು ಇತರ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಸಾವಿನ ಸಂಖ್ಯೆ ಹೆಚ್ಚಲು ಇದೂ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಂತ್ರಸ್ತರ ಕಡೆಯವರಿಗಾಗಿ ಕೇರಳ ಸರ್ಕಾರ ನಿಯಂತ್ರಣ ಕೊಠಡಿಯನ್ನು ತೆರೆದಿದೆ. ಸಂಬಂಧಪಟ್ಟವರು ದೂರವಾಣಿ ಸಂಖ್ಯೆ 0471- 2331403/ 2333198/0486-9222620/ 9222111/ 94460 52361 ಸಂಪರ್ಕಿಸಬಹುದು. ದೋಣಿ ದುರಂತದಲ್ಲಿ ಮೃತಪಟ್ಟಿರುವ ಕರ್ನಾಟಕದ ಪ್ರವಾಸಿಗರ ಕುರಿತು ಮಾಹಿತಿಗಾಗಿ ಸಂಪರ್ಕಿಸ ಬಹುದಾದ ಕಂಟ್ರೋಲ್ ರೂಂ ಸಂಖ್ಯೆ: 22942111 /22942777 /2221177 .

(ಏಜನ್ಸೀಸ್)

&13;
User Comments
ಶಿವಾಜಿ ರಾವ್ ಗಾಯಕವಾಡ 03 Oct 2009 08:09 pm
ಈ ದೋಣಿ ದುರಂತಕ್ಕೆ ಕಾರಣ ಪ್ರಯಾಣಿಕರೆಲ್ಲ ಒಂದೇ ಕಡೆಗೆ ನುಗ್ಗಿದ್ದರಿಂದ ಆಯಿತು ಎಂದು ಹೇಳಲಾಗಿದೆ ಎಲ್ಲರಿಗೂ ಲೈಫ್ ಜಾಕೆಟ್ ನೀಡಿರಲಿಲ್ಲ ಎಂದು ದೂರು ಇದೆ ಸಾಮಾನ್ಯವ್ವಾಗಿ ಎಲ್ಲಾ ದೋಣಿಗಳಲ್ಲಿ ಈ ಜಾಕೆಟ್ಗಳನ್ನು ನೀಡುತ್ತಿಲ್ಲ ಒಮ್ಮೆ ನೀಡಿದ್ದರೂ ದೋಣಿ ಮಗುಚಿದಾಗ ಕೆಲ ಅನ್ಥಸ್ಥಿನಲ್ಲಿ ಇರುವವರು ಹೊರಕ್ಕೆ ಬರದೆ ಜಲಸಮಾದ್ ಆಗುತ್ತಿದ್ದರು ಒಟ್ಟಿನಲ್ಲಿ ವಿಧಿ ಅವರನ್ನು ಕರೆದುಕೊಂಡಿದೆ ಇಂಥಹ ಪ್ರಸಂಗ ಮುಂದೆ ಆಗದಂತೆ ಕೇವಲ ಸರಕಾರ ಒಂದೇ ಅಲ್ಲಾ ಪ್ರವಾಸಿಗರಾದ ನಾವೂ ಅರಿಯಬೇಕು
ಮನು 02 Oct 2009 04:51 pm
ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ ಇಸ್ಟೇ ನಮ್ಮಿಂದ ಸಾಧ್ಯ ಏನಂತಿರ
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article