•  

ನಾಲಿಗೆಯನ್ನು ಕತ್ತರಿಸಿ ದೇವಿಗೆ ಅರ್ಪಿಸಿದ !

ಮಂಗಳವಾರ, ಸೆಪ್ಟೆಂಬರ್ 29, 2009, 16:18 [IST]
Ahmedabad map
ಅಹಮದಾಬಾದ್, ಸೆ. 29 : ನಂಬಿದ ದೇವರಿಗೆ ತನ್ನ ಕಣ್ಣನ್ನೇ ಕಿತ್ತುಕೊಟ್ಟ ಮಹಾಶಯನೊಬ್ಬನ ಕಥೆ ಈ ಹಿಂದೆ ರಾಜ್ಯದ ಬಾದಾಮಿಯಲ್ಲಿ ನಡೆದಿತ್ತು. ಇದೇ ಮಾದರಿಯಲ್ಲಿ ದೇವಿ ಸಂತೃಪ್ತಿಗೊಳಿಸಲು ಭಕ್ತನೊಬ್ಬ ತನ್ನ ನಾಲಿಗೆಯನ್ನೇ ಕತ್ತರಿಸಿಕೊಟ್ಟ ಭಕ್ತಿಯ ಪರಾಕಾಷ್ಠೆ ಮೆರೆದಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

ಇಪ್ಪತ್ತು ವರ್ಷಗಳ ಹಿಂದೆ ಮಧ್ಯಪ್ರದೇಶದಿಂದ ನಗರಕ್ಕೆ ವಲಸೆ ಬಂದ 35 ವರ್ಷದ ರಣವೀರ್ ಸಿಂಗ್ ಬಾಘೇಲ್ ಎನ್ನುವಾತ ತಾನು ನಂಬಿರುವ ದೇವಿಯನ್ನು ಸಂತೃಪ್ತಿಪಡಿಸಲು ತನ್ನ ನಾಲಿಗೆಯನ್ನು ಕತ್ತರಿಸಿ ಅಂಬಾದೇವಿಗೆ ಅರ್ಪಿಸಿದ್ದಾನೆ. ರಣವೀರ್ ಸಿಂಗ್ ನ 'ಭಕ್ತಿ ಪರಾಕಾಷ್ಠೆ'ಯ ಈ ಅತಿರೇಕದ ಘಟನೆ ಮೇಘನಿ ನಗರದ ಅಂಬಾದೇವಿ ದೇವಾಲಯದಲ್ಲಿ ನಡೆದಿದೆ.

ನಗರಕ್ಕೆ ವಲಸೆ ಬಂದಿರುವ ಸಿಂಗ್, ದೇವಿ ನನ್ನ ನಾಲಿಗೆ ಅರ್ಪಿಸುವಂತೆ ಸೂಚಿಸಿದ್ದಳು, ಹಾಗಾಗಿ ನಾಲಿಗೆ ಕೊಯ್ದು ಅರ್ಪಿಸಿದೆ, ನನಗೇನೂ ಆಗುವುದಿಲ್ಲ. ನಾನು ಈಗ ಆರೋಗ್ಯವಾಗಿದ್ದು, ದೇವಿಯ ಕೃಪೆಯಿಂದ ನನ್ನ ನಾಲಿಗೆ ಪುನಃ ಚಿಗುರುತ್ತದೆ ಎನ್ನುವ ನಂಬಿಕೆ ನನಗಿದೆ ಎಂದು ತಿಳಿಸಿದ್ದಾನೆ. ನಾಲಿಗೆ ಕತ್ತರಿಸಿಕೊಂಡ ನಂತರ ರಣವೀರ್ ಸಿಂಗ್ ಚಿಕಿತ್ಸೆಗಾಗಿ ವೈದ್ಯರ ಬಳಿ ಕೂಡ ಹೋಗಿಲ್ಲ ಮತ್ತು ಔಷಧಿಯನ್ನೂ ತೆಗೆದುಕೊಂಡಿಲ್ಲ ಎಂದು ಆತನ ಸಹೋದರ ಸಂಬಂಧಿ ತಿಳಿಸಿದ್ದಾನೆ.

(ಏಜನ್ಸೀಸ್)

&13;
User Comments
ಎರಣ್ಣ 29 Sep 2009 04:41 pm
ಆಹಾ, ಭಕ್ತಾ ಧನ್ಯೋಕ್ತ್ಮಿ
ದೇವ 30 Sep 2009 07:56 pm
ದೇವಿ ಯಂಥ ತನ್ನ ಹಂಡತಿ ಜೊತೆ ಮಾತನಾಡಬಾರದು ಎಂದು ಇ ತರಹದ ತ್ಯಾಗ ಮಾಡಿದ. ಒಳ್ಳೆ ಬುದ್ದಿವಂತ. ನಾಲಿಗೆ ಇಲ್ಲದಿದ್ದರೆ ಜಗಳವೂ ಇಲ್ಲ, ಮನಸ್ತಾಪವೂ ಇಲ್ಲ .
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article