ಲಾಸ್ ಎಂಜಲೀಸ್, ಆ. 1 : ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಅಮೆರಿಕನ್ ಫ್ಯಾಷನ್ ಡಿಸೈನರ್ ಆನಂದ್ ಜಾನ್ ಅಲೆಕ್ಸಾಂಡರ್ (35)ಗೆ ಅಮೆರಿಕದ ನ್ಯಾಯಾಲಯ 59 ವರ್ಷಗಳ ಸುದೀರ್ಘ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಅನಂದ್ ಜಾನ್ ಅಲೆಕ್ಸಾಂಡರ್ ಹದಿಹರೆಯದ ಯುವತಿಯರಿಗೆ ಮಾಡೆಲ್ ಮಾಡುವ ಆಮಿಷ ತೋರಿ ಅವರನ್ನು ದೈಹಿಕವಾಗಿ ಬಳಸಿಕೊಳ್ಳುತ್ತಿರುವ ಸಂಗತಿ ವಿಚಾರಣೆಯಿಂದ ಸಾಬೀತಾಗಿದೆ ಎಂದು ಅಮೆರಿಕ ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಡೆವಿಡ್ ವೆಸ್ಲಿ ತಿಳಿಸಿದ್ದಾರೆ. ನ್ಯೂಯಾರ್ಕ್. ಟೆಕ್ಸಾಸ್ ಮತ್ತು ಲಾಸ್ ಎಂಜಲೀಸ್ ನಲ್ಲಿನ ಪ್ರಕರಣಗಳು ಸೇರಿದಂತೆ ಆನಂದ್ 14 ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾಗಿದೆ. ಈ ಎಲ್ಲ ಪ್ರಕರಣ ಸೇರಿ ಒಟ್ಟು 59 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
(ಏಜನ್ಸೀಸ್)
&13;