•  

ಅಮೆರಿಕಾದಲ್ಲಿ ರೀಡರ್ಸ್ ಡೈಜಸ್ಟ್ ದಿವಾಳಿ

ಮಂಗಳವಾರ, ಆಗಸ್ಟ್ 18, 2009, 14:37 [IST]
Readers digest
ಬೆಂಗಳೂರು, ಆ. 18 : ಕೋಟ್ಯಂತರ ಓದುಗರ ಅಚ್ಚುಮೆಚ್ಚಿನ ಮಾಸ ಪತ್ರಿಕೆ ರೀಡರ್ಸ್ ಡೈಜಸ್ಟ್ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಪ್ರಪಂಚದ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆಯ ಖ್ಯಾತಿಯ ಡೈಜೆಸ್ಟ್, ಅಮೆರಿಕಾದಲ್ಲಿ ದಿವಾಳಿ ಘೋಷಿಸಲು ನಿರ್ಧರಿಸಿದೆ. ಆದರೆ, ಭಾರತ ಸೇರಿದಂತೆ ಇನ್ನಿತರ ಹತ್ತಾರು ದೇಶಗಳಲ್ಲಿ ತನ್ನ ಪ್ರಕಟಣೆಯನ್ನು ಹಾಗೆಯೇ ಉಳಿಸಿಕೊಳ್ಳುವುದಾಗಿ ಹೇಳಿಕೊಂಡಿದೆ.

ತನ್ನ ಸಾಲದ ಹೊರೆಯ ಪ್ರಮಾಣವನ್ನು ಶೇಕಡಾ 75 ರಷ್ಟು ಉಳಿಸುವ ಉದ್ದೇಶದಿಂದ ರೀಡರ್ಸ್ ಡೈಜಸ್ಟ್ ಅಸೋಸಿಯೇಷನ್ ದಿವಾಳಿ ಪಡೆಯಲು ಅಮೆರಿಕಾದಲ್ಲಿ ಮುಂದಾಗಿದ್ದು, ಈ ಹೆಜ್ಜೆಯಿಂದ ಆರ್ಥಿಕ ಸ್ಥಿತಿಗತಿಯನ್ನು ಅಷ್ಟರಮಟ್ಟಿಗೆ ಸುಧಾರಿಸಿಕೊಳ್ಳುವ ಸನ್ನಾಹ ವ್ಯಕ್ತ ಪಡಿಸಿದೆ. ರೀಡರ್ಸ್ ಡೈಜಸ್ಟ್ ಅಸೋಸಿಯೇಷನ್ ( RDA ) ಒಂದು ಪ್ರಖ್ಯಾತ ಪ್ರಕಟಣಾ ಸಂಸ್ಥೆಯಾಗಿದ್ದು 44 ದೇಶಗಳಲ್ಲಿ ತನ್ನ ಕಚೇರಿ ಹೊಂದಿದೆ. ಡೈಜೆಸ್ಟ್ ಮಳಿಗೆಗಳ ಮೂಲಕ ಕಂಪನಿಯು ಪುಸ್ತಕ, ಮ್ಯಾಗಜೀನ್, ಮ್ಯೂಸಿಕ್ ಮತ್ತು ವಿಡಿಯೋಗಳ ಮಾರಾಟ ಮಾಡುತ್ತಿದೆ. ಒಟ್ಟಾರೆ 78 ದೇಶಗಳಲ್ಲಿ ಪತ್ರಿಕೆ ಪ್ರಸಾರ ಹೊಂದಿದ್ದು 130 ದಶಲಕ್ಷ ಗ್ರಾಹಕ ಬಲ ಹೊಂದಿದೆ.

ರೀಡರ್ಸ್ ಡೈಜಸ್ಟ್ ಮಾಸಪತ್ರಿಕೆ ಸೇರಿದಂತೆ ಕಂಪನಿ ಒಟ್ಟು 94 ಪ್ರಕಟಣೆಗಳನ್ನು ಹೊರತರುತ್ತದೆ. ವರ್ಷವೊಂದಕ್ಕೆ ಸುಮಾರು 40 ದಶಲಕ್ಷ ಪುಸ್ತಕ, ಪುರವಣಿ, ವಿಡಿಯೋ ಮಾರಾಟ ಆಗುತ್ತದೆ. ಈಗ ತನಗೆ ಸಾಲ ಕೊಟ್ಟವರ ಬಳಿ ಕಂಪನಿಯು ಒಂದು ಒಡಂಬಡಿಕೆ ಮಾಡಿಕೊಂಡಿದೆ. ಆ ಪ್ರಕಾರ 2.2 ಬಿಲಿಯನ್ ಡಾಲರ್ ಸಾಲದ ಹೊರೆಯನ್ನು 550 ದಶಲಕ್ಷ ಡಾಲರುಗಳಿಗೆ ಇಳಿಸುವ ಚಿಂತನೆ ಮಾಡಿದೆ. ಎಂಥ ಪತ್ರಿಕೆಗೆ ಎಂಥ ದುರ್ಗತಿ ಬಂತಪ್ಪಾ, ಅದೂ ಅಮೆರಿಕಾದಲ್ಲಿ! Life`s like that.

(ಏಜೆನ್ಸೀಸ್)

&13;
User Comments
prabuddh 25 Mar 2010 04:50 pm
life is like that ಅಲ್ಲ; points to ponder . Of course, RD USA ಮತ್ತು ಯುರೋಪಿಯನ್ ದೇಶಗಳ ತುತ್ತೂರಿ. ಹಾಗಿದ್ದರೂ ಪತ್ರಿಕೆಯ ದೃಷ್ಟಿಲಿ ಅದೊಂದು ಒಳ್ಳೆಯ magazine ಅನ್ನೋದು ನಿಜ.
Readers indigestion 19 Aug 2009 12:36 pm
Who says THIS MAGAZINE IS EXCELLANT? This is nothing but another boosa. Once you become a subscriber by any chance you would be forced to continue to pay for this silly periodical. Not only this, they have many useless silly publications to thrust upon you by force. You go on recieving VPP followed by hefty bills. Be careful they will catch you if you ಅರೆ little careless.
[ ಅಭಿಪ್ರಾಯ ಬರೆಯಿರಿ ]
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article