•  

ಡೀಮ್ಡ್ ವಿವಿಗಳ ವಿರುದ್ದ ರಾಮಚಂದ್ರೇಗೌಡ ಕಿಡಿ

ಮಂಗಳವಾರ, ಆಗಸ್ಟ್ 18, 2009, 12:12 [IST]
Ramachandregowda
ಬೆಂಗಳೂರು, ಆ. 18 : ಮಠಾಧೀಶರ ಪ್ರಭಾವಕ್ಕೆ ಒಳಗಾಗದೆ ರಾಜ್ಯದಲ್ಲಿರುವ ಡೀಮ್ಡ್ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಶೇ. 25 ರಷ್ಟು ಸೀಟುಗಳನ್ನು ಸರಕಾರಕ್ಕೆ ಬಿಟ್ಟುಕೊಡುವಂತೆ ಸ್ಪಷ್ಟ ಆದೇಶ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ ತಿಳಿಸಿದ್ದಾರೆ. ಸರಕಾರದ ಈ ಆದೇಶ ಪಾಲಿಸದಿರುವ ವಿವಿಗಳಿಗೆ ನೀಡಿರುವ ಸೌಲಭ್ಯಗಳನ್ನು ವಾಪಸ್ ಪಡೆಯಲಾಗುವುದು ಎಂದೂ ಅವರ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ 8 ಡೀಮ್ಡ್ ವಿವಿಗಳಿವೆ. ಈ ಪೈಕಿ ಮಣಿಪಾಲ್ , ನಿಟ್ಟೆ ಮತ್ತು ಯೆನಪೋವಾ ವಿವಿಗಳು ಸರಕಾರಿ ಕೋಟಾದಡಿ ಶೇ. 25 ರಷ್ಟು ಸೀಟು ನೀಡುತ್ತಿವೆ. ಕೆಎಲ್ ಇ, ದೇವರಾಜ ಅರಸ್, ಬಿಎಲ್ ಇಡಿ, ಸಿದ್ದಾರ್ಥ ಮತ್ತು ಜೆಎಸ್ಎಸ್ ಡೀಮ್ಡ್ ವಿವಿಗಳು ಮಾತ್ರ ಸರಕಾರಿ ಕೋಟಾದಡಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸೀಟು ನೀಡಲು ನಿರಾಕರಿಸುತ್ತವೆ ಎಂದರು.

ಸರಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಪಡೆಯುವ ಈ ವಿವಿಗಳು ನೇರವಾಗಿ ಯುಜಿಸಿ ಮತ್ತು ಕೇಂದ್ರ ಸರಕಾರದಿಂದ ಕೆಲಸಗಳನ್ನು ಮಾಡಿಸಿಕೊಳ್ಳುತ್ತವೆ. ಹೀಗಾಗಿ ರಾಜ್ಯ ಸರಕಾರಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಡ ವಿದ್ಯಾರ್ಥಿಗಳಿಗೆ ಅನುಕಬಲವಾಗಬೇಕು ಎಂಬಹುದು ಸರಕಾರದ ಅಭಿಲಾಷೆ. ಯಾವುದೇ ಮಠಾಧೀಶರ ಒಡೆತನದ ವಿವಿಗಳಿದ್ದರೂ ತೆಲೆ ಕೆಡಿಸಿಕೊಳ್ಳುವುದಿಲ್ಲ ಎಂದು ರಾಮಚಂದ್ರೇಗೌಡ ಮತ್ತೊಮ್ಮೆ ಸ್ಪಷ್ಟಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)
User Comments
yeddi 18 Aug 2009 01:36 pm
ಲೋ ಗೌಡ ಸುಮ್ಕೆ ಇರೋ.. ಸ್ವಿಮಿಜಿಗಳು ಏನು ಮಾಡಿದ್ರು ಸರಿ.. ಅವ್ರು ಬಡವರಿಗೆ ಸೀಟ್ ಕೊಡ್ತಾ ಎಲ್ಲ ಅಂದ್ರೆ ಅದು ಬಗವಂತ ಇಚ್ಚೆ..
[ ಅಭಿಪ್ರಾಯ ಬರೆಯಿರಿ ]
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article