•  

ಜಿನ್ನಾ ಗುಣಗಾನ, ಈಗ ಜಸ್ವಂತ್ ಸಿಂಗ್ ಸರದಿ

ಸೋಮವಾರ, ಆಗಸ್ಟ್ 17, 2009, 11:40 [IST]
Jaswanth Singh
ನವದೆಹಲಿ, ಆ.17: ಪಾಕಿಸ್ತಾನದ ರಾಷ್ಟ್ರಪಿತ ಮಹಮ್ಮದ್ ಆಲಿ ಜಿನ್ನಾ ಅವರನ್ನು ಪ್ರಶಂಸಿಸಿ ಬಿಜೆಪಿ ಧುರೀಣ ಎಲ್ ಕೆ ಆಡ್ವಾಣಿ ತೀವ್ರ ಟೀಕೆಗೆ ಗುರಿಯಾದ ಬೆನ್ನಲ್ಲೇ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರು ಜಿನ್ನಾ ಗುಣಗಾನ ಮಾಡಿದ್ದಾರೆ.

ಜವಹರ್ ಲಾಲ್ ನೆಹರೂ ಅವರಿಗೆ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಇದ್ದ ನಂಬಿಕೆಯಿಂದಾಗಿ ದೇಶ ವಿಭಜನೆಯಾಯಿತಾದರೂ ಭಾರತದಲ್ಲಿ ಜಿನ್ನಾ ಅವರ ಬಗ್ಗೆ ಕೆಟ್ಟ ಭಾವನೆ ಮೂಡಿಸಲಾಗಿದೆ. ಭಾರತದಲ್ಲಿ ಮುಸ್ಲಿಂ ಬಾಂಧವರನ್ನು ಹೊರಗಿನವರಂತೆ ಕಾಣಲಾಗುತ್ತಿದೆ ಎಂದು ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಜಸ್ವಂತ್ ವಿಷಾದ ವ್ಯಕ್ತಪಡಿಸಿದ್ದಾರೆ.

ಇಂದು ಬಿಡುಗಡೆಗೊಳ್ಳಲಿರುವ ಜಿನ್ನಾ - ಇಂಡಿಯಾ,ಪಾರ್ಟಿ ಇಂಡಿಪೆಂಡನ್ಸ್ ಎಂಬ ಗ್ರಣ್ಥದ ಚರ್ಚೆಯಲ್ಲಿ ಅವರು ಭಾಗವಹಿಸಿದ್ದರು.ಕಾಂಗ್ರೆಸ್ ಪಕ್ಷದ ಬೃಹತ್ ಬಲದೆದುರು ಏಕಾಂಗಿಯಾಗಿ ಸವಾಲೆಸೆದ ಜಿನ್ನಾ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಜಿನ್ನಾ ಅವರನ್ನು ಮಹಾತ್ಮ ಗಾಂಧಿಜಿಯವರೇ ಮಹಾನ್ ಭಾರತೀಯ ಎಂದು ಪ್ರಶಂಸಿಸಿದ್ದರು. ಗಾಂಧೀಜಿಯವರು ಏಕೆ ಈ ರೀತಿ ಪ್ರಶಂಸೆ ಮಾಡಿದರೆಂಬುದನ್ನು ನಾವೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಜಸ್ವಂತ್ ಸಿಂಗ್ ಪ್ರಶ್ನಿಸಿದರು .

(ಏಜನ್ಸೀಸ್)
User Comments
ವಿವೇಕ್ 17 Aug 2009 01:37 pm
ಇಲ್ಲಿ ಕೆಲವರ ಪ್ರಕಾರ ಸಾಬರನ್ನು ತೆಗಲಿದವ್ರು ಮಾತ್ರ ದೇಶಪ್ರೇಮಿಗಳು ಅನ್ನೋ ಭಾವನೆ ಮೂಡಿಸಲಾಗುತ್ತಿದೆ. ಜಸ್ವಂತ್ ಅವ್ರು ಬಿಜೆಪಿ/ಭಾರತ ಕಂಡ ಅನುಭವಿ ರಾಜಕಾರಣಿ . ಅವ್ರು ವಿವೇಚನೆ ಇಲ್ದೆ ಮಾತನಾಡಲಿಕ್ಕಿಲ್ಲ. ಚರಿತ್ರೆ ಓದಿ ಜ್ಞಾನ ಬೆಳೆಸಿಕೊಂಡವರು . ನೆಹ್ರುರಂಥ ಮೇಲ್ವರ್ಗದ ಜನರ ಅಧಿಕಾರದ ಲಾಲಸೆ ಹಾಗು ಬ್ರಿಟಿಷರ ಕುತಂತ್ರವೆ ವಿಭಜನೆಗೆ ಕಾರಣ. ಸ್ವಾತಂತ್ರಕ್ಕೆ ಅನೇಕ ಅಲ್ಪಸಂಕ್ಯಥರು ತಮ್ಮ ಕೊಡುಗೆ ನೀಡಿದ್ದಾರೆ. ಅಡ್ವಾಣಿ ಯಂಥವರ್ರೆ ಜಿನ್ನಾ ರನ್ನು ಹೊಗಲಿರಬೇಕಿದ್ರೆ ಸತ್ಯ ಸಂಗತಿ ಅವ್ರು ನಮಗಿಂತ ಚೆನ್ನಾಗಿ ಅವ್ರು ಅರಿತಿರಲೇಬೇಕು.
Rehman 17 Aug 2009 01:11 pm
ಹೊಲಸು raajakeeyada ಮತ್ತೊಂದು ಮುಖ....
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article