ನ್ಯೂಯಾರ್ಕ್, ಆ.16: ಇಂಟರ್ ನೆಟ್ ಜಗತ್ತಿನ ದೊಡ್ಡ ಸಂಸ್ಥೆ ಅಮೆರಿಕನ್ ಆನ್ ಲೈನ್ (ಎಒಎಲ್) ತನ್ನ 2000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಿದೆ ಈ ಬಗ್ಗೆ ಸಂಸ್ಥೆಯ ಸಿಇಒ ಟಿಮ್ ಆರ್ಮ್ ಸ್ಟ್ರಾಂಗ್ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಟೈಮ್ ವಾರ್ನರ್ ಸ್ವಾಮ್ಯದಿಂದ ಕಳಚಿಕೊಂಡು ಏಕಸ್ವಾಮ್ಯದ ದೊಡ್ಡ ಕಂಪೆನಿಯಾಗಿ ಹೊರಹೊಮ್ಮಲು ಎಒಎಲ್ ಗೆ ಸಿಬ್ಬಂದಿ ಕಡಿತದಂಥ ಕಠಿಣ ನಿರ್ಧಾರ ಅಗತ್ಯ. ಎಂದು ಸಿಇಒ ಟಿಮ್ ಹೇಳಿದ್ದಾರೆ. ತಂಡಗಳ ಪುನರ್ ರಚನೆ, ನೂತನ ಕಾರ್ಯವೈಖರಿಯ ಬಗ್ಗೆ 100 ದಿನಗಳ ವಿಮರ್ಶನಾ ಸಭೆಯಲ್ಲಿ ಈ ವಿಷಯ ಹೊರಬಂದಿದೆ. ಆದರೆ ಎಒಎಲ್ ಸಂಸ್ಥೆ ಅಧಿಕೃತವಾಗಿ ಈ ವಿಷಯವನ್ನು ಸ್ಪಷ್ಟಪಡಿಸಿಲ್ಲ. ಸಿಲಿಕಾನ್ ವ್ಯಾಲಿ ಯಲ್ಲಿ ಹರದಿರುವ ಹೊಸ ಗಾಳಿಸುದ್ದಿ ಇರಬಹುದು ಎನ್ನಲಾಗಿದೆ.
(ಏಜೆನ್ಸೀಸ್)