•  

2009ರ ಶ್ರೇಷ್ಠ ಸಿಇಒ ಇಂದ್ರಾ ನೋಯಿ

ಮಂಗಳವಾರ, ಜುಲೈ 14, 2009, 16:25 [IST]
Indra Nooyi
ವಾಷಿಂಗ್ ಟನ್, ಜು. 14 : ಪೆಪ್ಸಿಕೋ ಕಂಪನಿಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಭಾರತೀಯ ಮೂಲದ ಇಂದ್ರಾ ನೂಯಿ ಅವರು 2009ರ ಅತ್ಯುತ್ತಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂಬ ವಾರ್ಷಿಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಸಾಮಾಜಿಕ ಕಳಕಳಿ ಹೊಂದಿ ತಾವು ನಿರ್ವಹಿಸುತ್ತಿರುವ ಕಂಪನಿಯಲ್ಲಿ ಗಮನಾರ್ಹ ಬದಲಾವಣೆ ತಂದಿದ್ದಕ್ಕೆ ಇಂದ್ರಾ ನೂಯಿ ಅವರು 2009ರ ಗ್ಲೂಬಲ್ ಸಪ್ಲೈ ಚೈನ್ ಲೀಡರ್ಸ್ ಗ್ರೂಫ್ (GSCLG) ಪ್ರಶಸ್ತಿಯನ್ನು ಸೋಮವಾರ ಘೋಷಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂದ್ರಾ ನೂಯಿ ಅವರು, 2009ರ ವಾರ್ಷಿಕ ಸಿಇಒ ಪ್ರಶಸ್ತಿ ಗಳಿಸಿದ್ದಕ್ಕೆ ಸಂತಸವಾಗಿದೆ. ಈ ಪ್ರಶಸ್ತಿ ಹಿಂದೆ ಲಕ್ಷಾಂತರ ಉದ್ಯೋಗಿಗಳ ಶ್ರಮವಿದೆ. ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕಂಪನಿಯ 1,98,000 ಉದ್ಯೋಗಿಗಳಿಗೂ ಈ ಪ್ರಶಸ್ತಿಯಲ್ಲಿ ಪಾಲಿದೆ ಎಂದು ಅವರು ಹೇಳಿದ್ದಾರೆ.

(ಏಜನ್ಸೀಸ್)
User Comments
ವಿವೇಕ್ 15 Jul 2009 09:44 am
ಭಾರತೀಯರ ಹಣವೆನ್ನೆಲ್ಲಾ ’ಎಂಟಾಣೆ ಡ್ರಿಂಕ್’ ಪೆಪ್ಸಿಗೆ ಸುರಿಸಿ ಹಣವನ್ನೆಲ್ಲಾ ಅಮೆರಿಕಕ್ಕೆ ಕಳಿಸುತ್ತಿರುವವರಿಗೆ ಪ್ರಶಸ್ತಿ ಕೊಡದೆ ಇನ್ನೇನು ಮಾಡ್ತಾರೆ! ಪ್ರತಿ ಒಂದು ಲೀಟರ್ ಪೆಪ್ಸಿ ತಯಾರು ಮಾಡಲು ನಲವತ್ತು ಲೀಟರ್ ಶುಧ್ಧ ನೀರಿನ ಅಗತ್ಯವಿದೆ. ಸಂಸ್ಕರಿಸಿ ಉಳಿದ ಮೂವತ್ತೊಂಬತ್ತು ಲೀಟರ್ ಕಲುಷಿತ ನೀರು ಕುಡೀಯಲು ಯೋಗ್ಯವಲ್ಲ. ಗಿಡಗಳಿಗೆ ಹಾಕಲೂ ಯೋಗ್ಯವಲ್ಲ. ಅಮೆರಿಕ ಮುಂತಾದ ದೇಶಗಳಲ್ಲಿ ನದಿಯ ನೀರು ಸುಲಭವಾಗಿ ಸಿಗುತ್ತದೆ. ನಮ್ಮ ದೇಶದಲ್ಲಿ ಪೆಪ್ಸಿ ತಯಾರಿಸಲು ಭೂಮಿಯಿಂದ ನೀರನ್ನು ಬಸಿಯಲಾಗುತ್ತಿದೆ. ಅಂತರ್ಜಲವನ್ನು ಖಾಲಿ ಮಾಡುತ್ತಿರುವುದರಲ್ಲಿ ಪೆಪ್ಸಿ ಮಾತು ಕೋಕಕೋಲ ಕಂಪೆನಿಗಳ ಕೊಡುಗೆ ಅಪಾರ.
ಮಿತ್ರ 14 Jul 2009 09:08 pm
ಇದಲ್ಲವೇ ಮಹಿಳೆಯ ಶಕ್ತಿ.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article