•  

ಬೀದಿ ಕಾಮಣ್ಣರ ಕಾಟ ಯುವತಿ ಆತ್ಮಹತ್ಯೆ

ಮಂಗಳವಾರ, ಜುಲೈ 14, 2009, 14:29 [IST]
ಮುಂಬೈ, ಜು. 14 : ಬೀದಿ ಕಾಮಣ್ಣರು ನೀಡುತ್ತಿರುವ ಮಾನಸಿಕ ಕಿರುಕುಳ ತಾಳಲಾರದೆ ಯುವತಿಯೊಬ್ಬಳು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೊಸ ಮುಂಬೈನ ಕೋಪರ್ ಖಾನೆ ಪ್ರದೇಶದಲ್ಲಿ ಸೋಮವಾರ ನಡೆದಿದೆ.

ಸೌಜನ್ಯ (24) ಅತ್ಮಹತ್ಯೆ ಮಾಡಿಕೊಂಡ ನತದೃಷ್ಟೆ. ಬೀದಿ ಕಾಮಣ್ಣ ಕಾಟ ತಾರದೆ ಪೊಲೀಸ್ ಮೊರೆ ಹೋದ ಸೌಜನ್ಯ ಕುಟುಂಬಕ್ಕೆ ಸಮಾಜ ರಕ್ಷಣೆಗೆ ನೇಮಕವಾಗಿರುವ ಪೊಲೀಸರಿಂದಲೇ ಅವಮಾನ. ನನ್ನ ಇಬ್ಬರು ಹೆಣ್ಣುಮಕ್ಕಳ ಮೇಲೆ ಕೆಲ ಕಿಡಿಗೇಡಿಗಳು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಿ ಎಂದು ಸೌಜನ್ಯ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ತೀವ್ರವಾಗಿ ನೊಂದ ಸೌಜನ್ಯ ಸೋಮವಾರ ತಮ್ಮ ನಿವಾಸದಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)
User Comments
reshma 13 Aug 2009 09:25 pm
ನೀನು ತಪ್ಪು ಮಾಡಿದೆ ಸೌಜನ್ಯ . ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ.
ಸುವರ್ಣ ಗೌಡ 15 Jul 2009 08:52 pm
ಆತ್ಮಹತ್ಯೆಯೊಂದೆ ಎಲ್ಲದಕ್ಕೂ ಪರಿಹಾರ ಅಲ್ಲ. ಬೀದಿಕಾಮಣ್ಣರಿಗಾಗಿ ಹೆದರಿ ನೀನು ಒಂದೇ ಸಾರಿ ಸತ್ತು, ತಂದೆ-ತಾಯಂದಿರು ಅಣುಅಣುವಾಗಿ ಸಾಯುವಂತೆ ಮಾಡಿದೆಯಲ್ಲಾ ತಂಗಿ. ಈ ಸಾವು ನ್ಯಾಯವೇ?
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article