•  

ಜೋಹಾನ್ಸ್ ಬರ್ಗ್ : ಗುಂಡೇಟು ತಿಂದ ಟೆಕ್ಕಿ

ಮಂಗಳವಾರ, ಜುಲೈ 7, 2009, 13:00 [IST]
ಹೈದರಾಬಾದ್, ಜು. 7 : ಕಳೆದ ಗುರುವಾರ ಜೋಹಾನ್ಸ್ ಬರ್ಗ್ ನಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಾರಂಗಲ್ ನ ಕಿರಣ್ ಎಂಬ ಸಾಫ್ಟವೇರ್ ಇಂಜಿನಿಯರ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವುದಾಗಿ ತಿಳಿದು ಬಂದಿದೆ.

ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯ ಅರೇಪಲ್ಲಿ ಗ್ರಾಮದ ಕೃಷಿಕರೊಬ್ಬರ ಮಗ ಕಿರಣ್ ಕಳೆದ ಮೂರು ವರ್ಷಗಳಿಂದ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಗುರುವಾರ ಮನೆಯಿಂದ ಕೆಲಸಕ್ಕೆಂದು ಹೊರಟಿದ್ದ ಕಿರಣ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಅವರಲ್ಲಿದ್ದ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು.

ಕಿರಣ್ ಎದೆಗೆ ಎರಡು ಗುಂಡು ಹೊಕ್ಕಿದ್ದರಿಂದ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಜೋಹಾನ್ಸ್ ಬರ್ಗ್ ನ ಮಸೈರ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ವಿಫಲವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಇತ್ತ ಅರೇಪಲ್ಲಿ ಗ್ರಾಮದಲ್ಲಿ ಕಿರಣ್ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಆದರೆ ಇದು ಜನಾಂಗೀಯ ದಾಳಿ ಎಂಬುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

(ಏಜನ್ಸೀಸ್)

&13;
User Comments
ನಾಗರಾಜ ರಾವ್ 07 Jul 2009 08:51 pm
ದಕ್ಷಿಣ ಆಫ್ರಿಕಾ ದೇಶದ ಜೊಹಾನೆಸ್ಬರ್ಗ್ನಲ್ಲಿ ಕರಿಯರು ಹೊರದೇಶದವರನ್ನಾಗಲೀ,ಬಿಳಿಯರನ್ನಾಗಲೀ ದ್ವೇಶಿಸುತ್ತಾರೆ. ಏಕೆ೦ದರೆ ಅಪಾರ್ಥೈಡ್ ಎ೦ಬ ಕೆಟ್ಟ ಚಾಳಿ ಬಿಳಿಯರಿಗೆ ಇತ್ತು.ಅನೇಕ ವರ್ಷಗಳು ಈ ಕೆಟ್ಟ ಪದ್ದತಿಯಲ್ಲಿ ಬಿಳಿಯರು ಕರಿಯರನ್ನು ನಾಯಿಗಳ೦ತೆ ನಡೆಸಿಕೊ೦ಡರು.ಬಿಳಿಯ ಹುಡುಗಿಯನ್ನು ಮಾತನಾಡಿಸಿದರೆ ಮುಖ ಕೊಟ್ಟು ನೋಡಿದರೆ ಹಿಗ್ಗಾ ಮುಗ್ಗಾ ಹೊಡೆಯುತ್ತಿದ್ದರು. ನೆಲ್ಸನ್ ಮ೦ಡೇಲ ಅ೦ತಹ ಗಾ೦ಧಿ ವಾದಿ ಶಾ೦ತಿಪ್ರಿಯರನ್ನು ಜೈಲಿಗೆ ಹಾಕಿ ಕಲ್ಲು ಒಡೆಯುವ ಕೆಲೆಸ ಒಟ್ಟು ಹಿ೦ಸಿಸಿದ್ದರು.ಕತ್ತಲಾದ ಮೇಲೆ ಯಾರೂ ಹೊರಗೆ ಹೋಗುವುದಿಲ್ಲ.ಇದರಲ್ಲಿ ತೆಲುಗರ ತಪ್ಪು ಏನೂ ಇಲ್ಲ.ನಮ್ಮ ದೇಶದ ಜನರಿಗೆ ಒದೆ ತಪ್ಪಿದ್ದಲ್ಲ.
naagappa 08 Jul 2009 12:23 pm
ಲೇ ನಾಗ , ೨ ಮುಚ್ಕಂಡು ಕುಂತ್ಕೊಲ ಲೇ , ಎಲ್ಲಾ ಲೇಖನಕ್ಕೂ ನಿನ್ ಕಾಮೆಂಟ್ ಮಾಡಲೇ ಬೇಕಾ? ಏನೋ ದೊಡ್ಡ ಬುದ್ದಿವಂತ ಅಂದ್ಕೊಂದಿದಿಯ? ಸಾಕಲೇ ನಿನ್ನ ಬೊಗಳುವಿಕೆ
ಕನ್ನಡಿಗ 07 Jul 2009 03:47 pm
ಎಲ್ಲೇ ನೋಡಿ ಎಲ್ಲ ಕಡೆ ಈ ತೆಲುಗು ಪಿಳ್ಳೆ ಗಳೇ ಇರ್ತಾರೆ. ಪ್ರಪಂಚದಲ್ಲಿ ಇವ್ರು ಇಲ್ದೆ ಇರೋ ಜಗವೇ ಇಲ್ಲ...ಏನೋ ಕಿರಿಕ್ ಮಾಡ್ತಾರೆ ತಿಂತಾರೆ
gulti 08 Jul 2009 12:55 am
fake certificate ಮಾಡೋದು ತೆಲುಗು ಅವರ ಎತಿದಕೈ,ಎಲ್ಲ ಹೋದರು ಅವರೇ ಇರ್ತಾರೆ ಮೊದಲ್ಲೂ ಅವರೇ ಪೆಟ್ಟ ತಿನ್ತಾರೆ ,ತಿನಲಿ ಬಿಡಿ
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article