•  

ಸಲಿಂಗ ರತಿ ಸಕ್ರಮ ಇಲ್ಲ: ಕಾನೂನು ಸಚಿವ ಮೊಯ್ಲಿ

ಮಂಗಳವಾರ, ಜೂನ್ 30, 2009, 10:29 [IST]
Veerappa Moily
ನವದೆಹಲಿ, ಜೂ. 30: ಭಾರತೀಯ ದಂಡ ಸಂಹಿತೆ ಕಾಯ್ದೆಯ 377 ನೇ ವಿಧಿಗೆ ತಿದ್ದುಪಡಿ ತರುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ, ಈಗ ತದ್ವಿರುದ್ಧವಾದ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದೆ. ಸಲಿಂಗ ರತಿಯನ್ನು ಸಕ್ರಮ ಗೊಳಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಈ ಮುಂಚೆ ಹೇಳಿದ್ದ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ಅವರು ಈಗ ಹಾಗೆ ಹೇಳೇ ಇಲ್ಲ ಎಂದಿದ್ದಾರೆ.
  Read:  In English 
ಈ ಕುರಿತು ಸ್ಪಷ್ಟೀಕರಣ ನೀಡಿದ ಮೋಯ್ಲಿ ಅವರು, ಸಲಿಂಗರತಿಯನ್ನು ಸಕ್ರಮ ಗೊಳಿಸಲಾಗುವುದು ಎಂದು ನಾನು ಎಂದೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಐಪಿಸಿಸೆಕ್ಷನ್ 377 ರ ವಿಧಿಗಳನ್ನು ಇನ್ನೂ ಪರಿಶೀಲಿಸಿಲ್ಲ. ಸಚಿವ ಸಂಪುಟದ ಒಬ್ಬ ಸಚಿವ ಕಾಯ್ದೆಯನ್ನು ಬದಲಿಸುವ ಅಥವಾ ಬದಲಿಸದಿರುವ ಬಗ್ಗೆ ತೀರ್ಮಾನ ಕೈಗೊಳ್ಳಲು ಹೇಗೆ ಸಾಧ್ಯ ಎಂದು ಮೊಯ್ಲಿ ಪ್ರಶ್ನಿಸಿದರು.

ಸಚಿವ ಸಂಪುಟ ಸಭೆಯ ನಂತರ ತೀರ್ಮಾನ ಕೈಗೊಳ್ಳಬಹುದಾಗಿದೆ. ಅಲ್ಲದೆ ಈ ಬಗ್ಗೆ ತುರ್ತಾಗಿ ತೀರ್ಮಾನ ಕೈಗೊಳ್ಳುವ ಅವಶ್ಯಕತೆ ಇಲ್ಲ. ಸಮಾಜದ ಎಲ್ಲಾ ವರ್ಗಗಳ ಅಭಿಪ್ರಾಯ ಸಂಗ್ರಹಿಸಿದ ಮೇಲಷ್ಟೇ ಮುಂದುವರೆಯಲಾಗುವುದು ಎಂದು ಮೊಯ್ಲಿ ಹೇಳಿದರು. ಸಲಿಂಗ ರತಿ ಸಕ್ರಮಕ್ಕೆ ಇಸ್ಲಾಂನಲ್ಲಿ ವಿರೋಧವಿದ್ದು, ಸರ್ಕಾರದ ಕ್ರಮ ಸರಿಯಿಲ್ಲಎಂದು ಮುಸ್ಲಿಂ ಧಾರ್ಮಿಕ ಮುಖಂಡರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

(ಏಜೆನ್ಸೀಸ್)
User Comments
ಕಡ್ಡಿ ಕುಮಾರ 30 Jun 2009 08:59 pm
ಮುಸಲ್ಮಾನರಿಗೆ ಸಲಿಂಗರತಿ ಬಗ್ಗೆ ವಿರೋಧವಿದೆ, ಏಕೆಂದರೆ, ಅವರಿಗೆ ನಿರೋದ್ ಬಳಸಿ ಗೊತ್ತಿಲ್ಲ. (ಗುಟ್ಟಾಗಿ ಕೇಳಿನೋಡಿ, ಹೊರಗೇನೂ ಬೇಕಿಲ್ಲ ಸಾರ್, ನಮಗೆ ಹೇಗೂ ಕಾಂಗ್ರೆಸ್ ನವರ ಹಿಂಭಾಗ ಸಿಕ್ಕೇ ಸಿಗುತ್ತಲ್ಲ! ಅಂತ ಹೇಳುತ್ತಾರೆ).
ಹಳ್ಳಿಯವ 30 Jun 2009 08:31 pm
ಏನ್ಲಾ ತಿಮ್ಮ ನಮ್ಮ ಮೋಯ್ಲಿ ಅವರು ಅದೇನೋ ೩೭೭ ತೆಗದು ಅಕ್ರಮ ಸಕ್ರಮ ಮಾಡ್ತೀವಿ ಅಂತ ಮತ್ತ್ಯ ಯು ಪಿ ಎ ಸರ್ಕಾರದ ಸಾದನೆ ಏನು ಅಂತ ತೋರುಸ್ತೀವಿ ಅಂದ್ರು ಪಕ್ಕೀರಣ್ಣ ನಂದು ಕಿ ಬ್ಯಾಕು ಇಂಜನ್ನು ಕೆಲಸ ಮಾಡಲ್ಲ ಅನ್ದದ್ದಕೆ ಹೆಗರಿಕೊಂಡು ಬಿಟ್ಟರಲ್ಲ
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article