•  

ಡೀಮ್ಡ್ ವಿವಿ ಸ್ಥಾನಮಾನ ರದ್ಧತಿಗೆ ಶಿಪಾರಸ್ಸು : ಸಮಿತಿ

ಗುರುವಾರ, ಜೂನ್ 25, 2009, 10:30 [IST]
Kapil Sibal
ನವದೆಹಲಿ, ಜೂ. 25 : ಉನ್ನತ ಶಿಕ್ಷಣಕ್ಕೆ ಕಾಯಕಲ್ಪ ನೀಡಲು ಮಾಜಿ ಅಧ್ಯಕ್ಷ ಯಶಪಾಲ್ ನೇತೃಕ್ವದ ಸಮಿತಿ ರಚಿಸಿದ್ದ ಬುಧವಾರ ಸರಕಾರಕ್ಕೆ ವರದಿ ಸಲ್ಲಿಸಿದೆ. ವರದಿಯಲ್ಲಿರುವ ಶಿಫಾರಸ್ಸುಗಳನ್ನು 100 ದಿನಗಳಲ್ಲಿ ಜಾರಿಗೊಳಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.
  Read:  In English 
ಉನ್ನತ ಶಿಕ್ಷಣ ಹಾಗೂ ಸಂಶೋಧನೆಗೆ ಸಂಬಂಧಿಸಿದ ಈ ರಾಷ್ಟ್ರೀಯ ಆಯೋಗವು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ), ಭಾರತೀಯ ವೈದ್ಯಕೀಯ ಮಂಡಳಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯನ್ನು ಒಳಗೊಳ್ಳಲಿದೆ. ಪ್ರಸ್ತುವಿರುವ ಡೀಮ್ಡ್ ವಿಶ್ವವಿದ್ಯಾಲಯಗಳ ಸಾಧನೆ, ಶುಲ್ಕ ರಚನೆಯನ್ನು ಪುನರ್ ಪರಿಶೀಲಿಸುವವರೆಗೂ ಹೊಸ ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಅನುಮತಿಯನ್ನು ತಡೆಹಿಡಿಯಬೇಕೆಂದು ಕೇಂದ್ರವನ್ನು ಕೇಳಿರುವುದಾಗಿ ಉನ್ನತ ಮಟ್ಟದ ಸಮಿತಿ ತಿಳಿಸಿದೆ.

43 ಪುಟಗಳ ಅಂತಿಮ ವರದಿ ಡೀಮ್ಡ್ ವಿಶ್ವವಿದ್ಯಾಲಯಗಳ ಸ್ಥಾನಮಾನ ರದ್ದತಿಗೆ ಶಿಪಾರಸ್ಸು ಮಾಡಿದ್ದು, ಈ ವಿವಿಗಳನ್ನು ಸುಸಜ್ಜಿತ ವಿವಿಗಳನ್ನಾಗಿ ಪರಿವರ್ತಿಸಿ ಇಲ್ಲವೇ ಮುಚ್ಚಿಬಿಡಿ ಎಂದು ಶಿಫಾರಸ್ಸು ಮಾಡಿದೆ.

(ಏಜನ್ಸೀಸ್)

&13;
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article