
ವಾಷಿಂಗ್ಟನ್, ಜೂ. 8 : ಗೂಗಲ್ ಸಂಸ್ಥೆಯ ಸಹಸಂಸ್ಥಾಪಕ ರಾಜೀವ್ ಮೊಟ್ವಾನಿ (47) ಅವರು ತಮ್ಮ ಕ್ಯಾಲಿಪೋರ್ನಿಯಾ ನಿವಾಸದ ಈಜುಕೊಳದಲ್ಲಿ ಮುಳುಗಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಕೇವಲ ಮೂರು ವರ್ಷಗಳ ಹಿಂದೆಯಷ್ಟೇ ಖರೀದಿಸಿದ್ದ ಮನೆಯ ಹಿಂಭಾಗದ ಈಜುಕೊಳದಲ್ಲಿ ಶುಕ್ರವಾರ ಬೆಳಗ್ಗೆ ಜಲಸಮಾಧಿಯಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ರಾಜೀವ್ ಮೊಟ್ವಾನಿ ಸಾವಿನ ಸುದ್ದಿ ಸಿಲಿಕಾನ್ ಕಣಿವೆಯ ತಾಂತ್ರಿಕ ಸಮುದಾಯದಲ್ಲಿ ಬರಸಿಡಿನಂತೆ ಎರಗಿ ತಲ್ಲಣ ಮೂಡಿಸಿದೆ. ಇಮೇಲ್, ಫೇಸ್ ಬುಕ್, ಟ್ವಿಟರ್ ನಂತಹ ಅಧುನಿಕ ಸಂವಹನ ಮಾಧ್ಯಮಗಳಲ್ಲಿ ಭಾವನೆಗಳನ್ನು ಅಭಿವ್ಯಕ್ತಿಸಿ ಮೊಟ್ವಾನಿ ಶಿಷ್ಯಂದಿರು ತಮ್ಮ ಕಂಬನಿ ಮಿಡಿದಿದ್ದಾರೆ. ಜಮ್ಮುವಿನಲ್ಲಿ ಜನಿಸಿದ್ದ ಮೊಟ್ವಾನಿ ದೆಹಲಿಯಲ್ಲಿ ಶಾಲೆ, ಕಾಲೇಜ್ ಓದಿ ಕಾನ್ಪುರ್ ದ ಐಐಟಿಯಿಂದ 1983 ರಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದರು. 1988 ರಲ್ಲಿ ಕ್ಯಾಲಿಪೋರ್ನಿಯಾ-ಬರ್ಕ್ ಲಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದರು.
(ಏಜನ್ಸೀಸ್)
Read: In English
ಅವರ ಸಾವಿನ ಕಾರಣದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ರಾಜೀವ್ ಗೆ ಈಜು ಬರುತ್ತಿರಲಿಲ್ಲ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿರಬಹುದು ಎಂದು ಅವರ ಸ್ನೇಹಿತರು ಶಂಕಿಸಿರುವುದಾಗಿ ವರದಿಗಳು ಹೇಳಿವೆ. ವೃತ್ತಿ ಬದುಕಿನಲ್ಲಿ ರಾಜೀವ್ ಅತ್ಯಂತ ಯಶಸ್ವಿ ವ್ಯಕ್ತಿಯಾಗಿದ್ದು, ಕೇವಲ 47 ವರ್ಷ ವಯಸ್ಸಿನವರಾದ ಅವರು ಪತ್ನಿ ಆಶಾ ಜಡೇಜಾ ಹಾಗೂ ಮಗಳು ನೈತ್ರಿ ಮತ್ತು ಅನ್ಯಾರನ್ನು ಅಗಲಿದ್ದಾರೆ. ರಾಜೀವ್ ಮೊಟ್ವಾನಿ ಸಾವಿನ ಸುದ್ದಿ ಸಿಲಿಕಾನ್ ಕಣಿವೆಯ ತಾಂತ್ರಿಕ ಸಮುದಾಯದಲ್ಲಿ ಬರಸಿಡಿನಂತೆ ಎರಗಿ ತಲ್ಲಣ ಮೂಡಿಸಿದೆ. ಇಮೇಲ್, ಫೇಸ್ ಬುಕ್, ಟ್ವಿಟರ್ ನಂತಹ ಅಧುನಿಕ ಸಂವಹನ ಮಾಧ್ಯಮಗಳಲ್ಲಿ ಭಾವನೆಗಳನ್ನು ಅಭಿವ್ಯಕ್ತಿಸಿ ಮೊಟ್ವಾನಿ ಶಿಷ್ಯಂದಿರು ತಮ್ಮ ಕಂಬನಿ ಮಿಡಿದಿದ್ದಾರೆ. ಜಮ್ಮುವಿನಲ್ಲಿ ಜನಿಸಿದ್ದ ಮೊಟ್ವಾನಿ ದೆಹಲಿಯಲ್ಲಿ ಶಾಲೆ, ಕಾಲೇಜ್ ಓದಿ ಕಾನ್ಪುರ್ ದ ಐಐಟಿಯಿಂದ 1983 ರಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದರು. 1988 ರಲ್ಲಿ ಕ್ಯಾಲಿಪೋರ್ನಿಯಾ-ಬರ್ಕ್ ಲಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದರು.
(ಏಜನ್ಸೀಸ್)














