•  

ತಮಿಳುನಾಡಿನಲ್ಲಿ ಮತ್ತಿಬ್ಬರಿಗೆ ಹಂದಿಜ್ವರ

ಮಂಗಳವಾರ, ಜೂನ್ 2, 2009, 12:32 [IST]
Swine flu: India confirms two more cases
ನವದೆಹಲಿ, ಜೂ.02: ಅಮೆರಿಕಾದಿಂದ ವಾಪಸ್ಸಾದ ತಮಿಳುನಾಡಿನ 34 ವರ್ಷದ ಓರ್ವ ಮಹಿಳೆ ಹಾಗೂ ಆಕೆಯ 5 ವರ್ಷದ ಮಗನಿಗೆ ಮಾರಣಾಂತಿಕ ಹಂದಿ ಜ್ವರ ಇರುವುದಾಗಿ ಸೋಮವಾರ ದೃಢಪಟ್ಟಿದೆ. ಇವರು ಮೇ 28ರಂದು ಅಮೆರಿಕಾದಿಂದ ಸ್ವದೇಶಕ್ಕೆ ಹಿಂತಿರುಗಿದ್ದರು.
  Read:  In English 
ಈಕೆಯೊಂದಿಗೆ ಹಿಂತಿರುಗಿರುವ ಆರು ವರ್ಷದ ಮಗಳಿಗೆ ಹಂದಿ ಜ್ವರ ಸೋಂಕು ತಟ್ಟಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೊಯಮತ್ತೂರಿನ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗನಿಗೆ ಚಿಕೆತ್ಸೆ ನೀಡಲಾಗುತ್ತಿದೆ. ಅಮೆರಿಕಾದಿಂದ ದುಬೈ ಮಾರ್ಗವಾಗಿ ಇವರು ಚೆನ್ನೈಗೆ ಆಗಮಿಸಿದ್ದರು. ವಿಮಾನದಲ್ಲಿನ ಇತರೆ ಪ್ರಯಾಣಿಕರನ್ನು ಪತ್ತೆ ಮಾಡಲಾಗಿದ್ದು ಅವರ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಲಾಗುತ್ತಿದೆ.

ಮೇ 16ರಂದು ಭಾರತದಲ್ಲಿ ಹಂದಿಜ್ವರದ ಮೊದಲ ಪ್ರಕರಣ ಪತ್ತೆಯಾಗಿತ್ತು. ನ್ಯೂಯಾರ್ಕ್ ನಿಂದ ಹೈದರಾಬಾದಿಗೆ ಆಗಮಿಸಿದ್ದ 23ರ ಯುವಕನಿಗೆ ಹಂದಿಜ್ವರ ಇರುವುದು ಬೆಳಕಿಗೆ ಬಂದಿತ್ತು. ಹಂದಿಜ್ವರ 53ಕ್ಕೂ ಹೆಚ್ಚು ದೇಶಗಳಲ್ಲಿ ಹಬ್ಬಿದ್ದು ಇದುವರೆಗೂ 99 ಮಂದಿಯನ್ನು ಬಲಿತೆಗೆದುಕೊಂಡಿದ್ದು15, 510 ಮಂದಿಗೆ ಸೋಂಕು ಇರುವುದಾಗಿ ಪತ್ತೆಯಾಗಿದೆ. ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ.

(ಏಜೆನ್ಸೀಸ್)
User Comments
Ajay 02 Jun 2009 05:29 pm
hahahaa..... handigaLige iga handi jwara bandide !!
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article