•  

ಇನ್ಫೋಸಿಸ್ ಬಿಪಿಒದಲ್ಲಿ ನೇಮಕಾತಿ ಆರಂಭ

ಮಂಗಳವಾರ, ಮೇ 26, 2009, 12:20 [IST]
ಬೆಂಗಳೂರು, ಮೇ. 26 : ಆರ್ಥಿಕ ಹಿಂಜರಿತ ತಕ್ಕ ಮಟ್ಟಿಗೆ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಇನ್ಫೋಸಿಸ್ ಕಂಪನಿಯ ಬಿಪಿಒ ವಿಭಾಗದಲ್ಲಿ ನೇಮಕಾತಿ ಆರಂಭವಾಗಿರುವ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.

ಇನ್ಫೋಸಿಸ್ ಬಿಪಿಒ ವಿಭಾಗದಲ್ಲಿ ಸುಮಾರು 200 ಆರಂಭಿಕ ಹುದ್ದೆಗಳು ಖಾಲಿ ಇವೆ. ಬಿಪಿಒ ಯೋಜನೆಗಳ ಹೆಚ್ಚಳ ಆಗಿದ್ದು, ವ್ಯವಹಾರವನ್ನು ವೃದ್ಧಿಗೊಳಿಸುವ ಉದ್ದೇಶದಿಂದ ನೇಮಕಾತಿ ಆರಂಭಿಸಲಾಗುವುದು ಎಂದು ಇನ್ಫೋಸಿಸ್ ಬಿಪಿಒ ವಿಭಾಗ ಉಪಾಧ್ಯಕ್ಷ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಕೆ ರಾಘವೇಂದ್ರ ತಿಳಿಸಿದ್ದಾರೆ.

ವೈಸ್ ಮತ್ತು ನಾನ್ ವೈಸ್ ವಿಭಾಗಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಆರ್ಥಿಕ ಹಿಂಜರಿತದಿಂದ ಇತ್ತೀಚೆಗೆ ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 600 ಉದ್ಯೋಗಿಗಳನ್ನು ತೆಗೆದುಹಾಕಿತ್ತು. ಪ್ರಸ್ತುತ ಇನ್ಫೋಸಿಸ್ ನಲ್ಲಿ 17,238 ಉದ್ಯೋಗಿಗಳು ಬಿಪಿಒ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

(ಏಜನ್ಸೀಸ್)
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article