•  

ಇನ್ಫೋಸಿಸ್ : 1000 ಉದ್ಯೋಗಿಗಳ ನೇಮಕಕ್ಕೆ ಚಿಂತನೆ

ಗುರುವಾರ, ಮೇ 21, 2009, 17:19 [IST]
  Read:  In English 
ಹೌಸ್ಟನ್, ಮೇ. 21 : ಆರ್ಥಿಕ ಹಿಂಜರಿತದ ನಡುವೆಯೂ ಮುಂದಿನ ಒಂದೂವರೆ ವರ್ಷದೊಳಗೆ 1000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಇನ್ಫೋಸಿಸ್ ಕಂಪನಿ ಮುಂದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ ಗೋಪಾಲಕೃಷ್ಣ, ಅಮೆರಿಕದಲ್ಲಿರುವ ಕಂಪನಿಯ ಶಾಖೆಗೆ 1000 ಉದ್ಯೋಗಿಗಳ ಅವಶ್ಯಕತೆ ಇದೆ. ಆರ್ಥಿಕ ಹಿಂಜರಿತ ಇದ್ದರೂ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕಾಗಿದೆ ಎಂದರು.

ಮುಂದಿನ 12 ಅಥವಾ 18 ತಿಂಗಳಲ್ಲಿ 1000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುವುದು. ಆರ್ಥಿತ ಕುಸಿತ ಕಂಡರೂ ಕಂಪನಿಗೆ ಯೋಜನೆಗಳ ಕೊರತೆಯೇನೂ ಇಲ್ಲ. ಕಂಪನಿ ಮೇಲೆ ವಿಶ್ವಾಸವಿರಿಸಿ ಅನೇಕ ಮಂದಿ ಸೇವೆ ಪಡೆದುಕೊಳ್ಳಲು ಮುಂದೆ ಬರುತ್ತಿದ್ದಾರೆ. ಗ್ರಾಹಕರ ನಂಬಿಕೆ ಉಳಿಸಿಕೊಳ್ಳಲು ಉತ್ತಮ ಸೇವೆ ನೀಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳು ನೇಮಕಕ್ಕೆ ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

(ಏಜನ್ಸೀಸ್)

&13;
User Comments
chinnu 23 May 2009 09:56 am
ಇದು ಒಂದು ರೀತಿ ನಾಟಕ.ಅರ್ಥಿಕ ಹಿಂಜರಿತ ಅಂತ ಇರುವ ಉದ್ಯಗಿಗಳನ್ನು ಕಿತ್ತು ಹಾಕೋದು.ಅವರು ಇದ್ರೆ ಅವ್ರಿಗೆ ಹಳಬರಿಗೆ ಸಂಸ್ಥೆ ಕೆಲವು ಸವಲತು ನೀಡಬೇಕು .ಅದಕೆ ಅವರನ್ನು ಕಿತು ಹಾಕಿ ಹೊಸಬರನ್ನು ತೆಗೆದುಕೊಂಡು ಕೆಲಸ ಕಲಿಸಿ ಮೂರೂ ತಿಂಗಳಿಗೆ ರೆಡಿ ಮಾಡಿ ಕಡಿಮೆ ಸಂಬಳ ಕೊಟ್ಟು ಲಾಬ ಮಾಡೋದು. ಇದು ನ್ಯಾಯವೇ? ಎಲ್ಲ ಕಂಪನಿಗಳಿಗೂ ಇದು ಒಂದು ನೆಪವಾಗಿದೆ ಅಷ್ಟೇ.
ಮಂಜುನಾಥ್ ರಾಜ ಅರಸ್ 22 May 2009 04:53 pm
ನಾನು ತಿಲಿಸುವುದೆನಂದ್ರೆ ಧಯಮಾಡಿ ಅಂಗವಿಕಲರಿಗೂ ಕೂಡ ಅವಕಾಶ ಕೊಡಿ, ಕೊಟ್ಟು ನೋಡಿ ಮತ್ತೆ ನನ್ನಂತ ಬುದ್ದಿವನ್ತನನ್ನು ನೋಡಿ ಮತ್ತೆ ನನ್ನ ಸೌಂದರ್ಯ nodi
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article