•  

ಪಿಎಂ ಹುದ್ದೆಗೆ ಪವಾರ್ ಸೂಕ್ತ: ಜಯಲಲಿತಾ

ಶುಕ್ರವಾರ, ಮೇ 15, 2009, 15:25 [IST]
Jayalalitha
ನವದೆಹಲಿ, ಮೇ. 15 : ಎನ್ ಸಿಪಿ ನಾಯಕ ಶರದ್ ಪವಾರ್ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸುದ್ದಿ ಕಿವಿಗೆ ಬಡಿಯುತ್ತಿದ್ದಂತೆಯೇ ಐಎಸಿಸಿ ಸೋನಿಯಾ ಗಾಂಧಿ ಅವರು ಪವಾರ್ ಅವರನ್ನು ಕರೆಸಿ ಯಪಿಎಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ತೃತೀಯ ರಂಗದಲ್ಲಿ ಗುರುತಿಸಿಕೊಂಡಿರುವ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು ಪ್ರಧಾನಮಂತ್ರಿ ಹುದ್ದೆಗೆ ಶರದ್ ಪವಾರ್ ಸಮರ್ಥ ವ್ಯಕ್ತಿ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಸಾಕಷ್ಟು ಕುತೂಹಲ ಕೆರಳಿಸಿದ್ದಾರೆ.

ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಎನ್ ಸಿಪಿ ನಾಯಕ ಶರದ್ ಪವಾರ್ ಅವರು ತೃತೀಯ ರಂಗ ಹಾಗೂ ಚತುರ್ಥ ರಂಗ ಬೆಂಬಲ ಪಡೆದು ತಮ್ಮ ರಾಜಕೀಯ ಜೀವನ ಉನ್ನತ ಆಸೆಯನ್ನು ಈಡೇರಿಸಿಕೊಳ್ಳುವತ್ತ ಹೆಜ್ಜೆಯಿಟ್ಟಿದ್ದಾರೆ ಎಂದು ಗುರುವಾರವೇ ಸುದ್ದಿಯೊಂದು ದಟ್ಟವಾಗಿತ್ತು. ಜಯಲಲಿತಾ ಅವರ ಹೇಳಿಕೆ ಪವಾರ್ ಅವರ ಕನಸಿಗೆ ನೀರೆರೆದಿದ್ದಾರೆ.
  Read:  In English 
ಯುಪಿಎಗೆ ಸರಕಾರ ರಚಿಸಲು ಅಗತ್ಯ ಸಂಖ್ಯಾಬಲ ಕೊರತೆ ಬಿದ್ದಲ್ಲಿ ಶರದ್ ಪವಾರ್ ಅವರು ಯುಪಿಎಯಿಂದ ಹೊರಬಂದು ತೃತೀಯ ರಂಗ ಮತ್ತು ಚತುರ್ಥ ರಂಗದ ಬೆಂಬಲ ಪಡೆದುಕೊಂಡು ಪ್ರಧಾನಿ ಆಗಬೇಕು. ಇದಕ್ಕೆ ತೃತೀಯ ರಂಗದ ಬಹುತೇಕ ನಾಯಕರ ಸಹಮತವಿದೆ. ಅಗತ್ಯ ಸಂಖ್ಯಾಬಲ ಕಡಿಮೆಯಾದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲ ಕೇಳುವ ಸಾಧ್ಯತೆಗಳೂ ಇದೆ ಎನ್ನಲಾಗಿದೆ.

ಶರದ್ ಪವಾರ್ ಪ್ರಧಾನಮಂತ್ರಿಯಾಗುವ ಅವಕಾಶ ಒದಗಿ ಬಂದರೆ ಎನ್ ಡಿಎದಲ್ಲಿರುವ ಶಿವಸೇನೆ ಕೂಡಾ ತೃತೀಯ ರಂಗಕ್ಕೆ ಬೆಂಬಲ ನೀಡುವುದನ್ನು ತಳ್ಳಹಾಕುವಂತಿಲ್ಲ. ಚುನಾವಣೋತ್ತರ ಫಲಿತಾಂಶದಲ್ಲಿ ಎಡಪಕ್ಷಗಳು, ಎಐಎಡಿಎಂಕೆ, ತೆಲುಗು ದೇಶಂ ಹಾಗೂ ಜೆಡಿಎಸ್ ಸೇರಿ 100 ಕ್ಕೂ ಹೆಚ್ಚು ಸ್ಥಾನಗಳು ಲಭಿಸಲಿವೆ. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ತೃತೀಯ ರಂಗದ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ಪಿಎಂ ಹುದ್ದೆ ಮೇಲೆ ಶರದ್ ಪವಾರ್ ಕಣ್ಣು

ಬಿಜೆಪಿಗೆ ಕೈಕೊಡಲು ನಿತೀಶ್ ಕುಮಾರ್ ತಯಾರಿ
ಅಡ್ವಾಣಿಯೇ ಪ್ರಧಾನಿ : ಶಿವಲಿಂಗ ಸ್ವಾಮೀಜಿ ಭವಿಷ್ಯ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

&13;
User Comments
ಗೋಪಾಲಕೃಷ್ಣ 16 May 2009 01:02 pm
ಎಐಎಡಿಎಂಕೆ ನಾಯಕಿ ಜಯಲಲಿತಾ ವೆಂಬ ಕಚಡ ಹೆಗಸು ಗಳಿಂದ ಈದೇಶ ಭವಿಷ್ಯ ಇಲ್ಲ
ನಾಗರಾಜ ರಾವ್ 16 May 2009 06:18 am
ಜಗತ್ತಿನಲ್ಲಿ ಇತರ ದೇಷಗಳು ಬುದ್ದಿವ೦ತರು,ವಿದ್ಯಾವ೦ತರು,ಮುನ್ನಡೆಯ ಕಲ್ಪನೆ ಇರುವವರೂ,ವಯಸ್ಸಿನಲ್ಲಿ ಚಿಕ್ಕವರೂ ಆದ ವ್ಯಕ್ತಿಗಳನ್ನು ಚುನಾಯಿಸಿದರೆ ನಮ್ಮ ಭಾರತ ಮುದಿಯರು,ದೇಶ ಹಾಳುಮಾಡಿ ಹಣ ಲೂಟಿ ಮಾಡುವವರು,ಅವಿವೇಕಿಗಳು,ಅಶ್ಟಾವಕ್ರದ ಮೂತಿ ಗಳನ್ನು ಪದೇ ಪದೇ ಚುನಾಯಿಸುತ್ತಾರೆ.ಸೊಟ್ಟ ಮೂತಿ ಪವಾರ್,ನೀತಿ ಇಲ್ಲದ ಜಯ,ಕರ್ಣಾಟಕದ ಮಣ್ಣಿನ ಮಕ್ಕಳು ಉದಾಹರಣೆ.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article