•  

ವಂಚನೆ ಆರೋಪ, ಬಿಂದ್ರಾ ತಂದೆ ಬಂಧನ

ಶುಕ್ರವಾರ, ಮೇ 15, 2009, 11:05 [IST]
  Read:  In English 
ಚಂಡೀಗಡ್, ಮೇ. 15 : ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ಗಳಿಗೆ ಕೋಟ್ಯಂತರ ರುಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀಜಿಂಗ್ ಒಲಿಂಪಿಕ್ಸ್ ಕ್ರೀಡಾಕೂಟದ ಚಿನ್ನದ ಪದಕ ಗಳಿಸಿದ್ದ ಕ್ರಿಡಾಪಟು ಅಭಿನವ್ ಬಿಂದ್ರಾ ಅವರ ತಂದೆ ಎ ಎಸ್ ಬಿಂದ್ರಾ ಅವರನ್ನು ಚಂಡೀಗಡ್ ದಲ್ಲಿ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.

ಪಂಜಾಬಿನ ಫಾರ್ಮ ಹೌಸ್ ನಲ್ಲಿ ದೆಹಲಿ ಹಣಕಾಸು ವಿಭಾಗದ ಪೊಲೀಸರು ಎ ಎಸ್ ಬಿಂದ್ರಾ ಅವರನ್ನು ಬಂಧಿಸಿದ್ದಾರೆ. ಕೈಗಾರಿಕೆ ಸ್ಥಾಪನೆಗೆ ಎ ಎಸ್ ಬಿಂದ್ರಾ ಅವರು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ಗಳಿಂದ ಸುಮಾರು 90 ಮಿಲಿಯನ್ ಹಣವನ್ನು ಪಡೆದುಕೊಂಡಿದ್ದರು. ಆ ಹಣವನ್ನು ವಾಪಸ್ ನೀಡಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಿಂದ್ರಾ ಅವರನ್ನು ಬಂಧಿಸಿದ್ದಾರೆ. ಬಿಂದ್ರಾ ಅವರನ್ನು ಪೊಲೀಸರು ಬಂಧಿಸುತ್ತಿದ್ದಂತೆಯೇ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಅವರನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ಏಜನ್ಸೀಸ್)
User Comments
ಸಾಲಿಗ 16 May 2009 12:10 am
ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗನು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ
satish 15 May 2009 01:23 pm
oneindia news very best
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article